ನವದೆಹಲಿ: ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಅಭ್ಯರ್ಥಿಗೆ ಪ್ರಚಂಡ ಬೆಂಬಲ ದೊರೆತಿದ್ದು, ಅಂತರಾಷ್ಟ್ರೀಯ ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಸೋಮವಾರ ಮರು ಆಯ್ಕೆ ಆಗಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜತಾಂತ್ರಿಕ ನಡೆಯಿಂದ ಈ ಯಶಸ್ಸು ಲಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಷ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಸಂದೇಶ ಕಳಿಸಿರುವ ಮೋದಿ, "ವಿದೇಶಾಂಗ ಸಚಿವೆ ಸುಶ್ಮಾಸ್ವಾರಾಜ್ ಮತ್ತು ಅವರ ಸಂಪೂರ್ಣ ತಂಡ MEA ಮತ್ತು ರಾಜತಾಂತ್ರಿಕ ಕಾರ್ಯಾಚರಣೆಗಳಿಗೆ ಅಭಿನಂದನೆಗಳು. ಅವರ ರಾಜತಾಂತ್ರಿಕ ಪ್ರಯತ್ನಗಳಿಗಾಗಿ ICJ ಚುನಾವಣೆಯಲ್ಲಿ ಭಾರತೀಯರು ಮರುಆಯ್ಕೆಯಾಗಿದ್ದಾರೆ. ಭಾರತಕ್ಕೆ ಬೆಂಬಲ ಮತ್ತು ಭಾರತದ ಮೇಲಿನ ಅವರ ನಂಬಿಕೆಗಾಗಿ ಯುಎನ್ಜಿಎ ಮತ್ತು ಯುಎನ್ಎಸ್ಸಿ ಯ ಎಲ್ಲ ಸದಸ್ಯರಿಗೆ ನಮ್ಮ ಆಳವಾದ ಕೃತಜ್ಞತೆ" ಎಂದು ತಿಳಿಸಿದ್ದಾರೆ.
Congratulations to EAM @SushmaSwaraj and her entire team at MEA & diplomatic missions for their untiring efforts that have led to India’s re-election to ICJ. Our deep gratitude to all the members of UNGA as well as UNSC for their support and trust in India.
— Narendra Modi (@narendramodi) November 21, 2017