ರಷ್ಯಾ ವಿರುದ್ಧ ಹೋರಾಡಲು ಬಂದೂಕು ಹಿಡಿದ ಉಕ್ರೇನ್ ಸುಂದರಿ...!

ಮಾಜಿ ಉಕ್ರೇನ್ ಸುಂದರಿ ಅನಸ್ತಾಸಿಯಾ ಲೆನ್ನಾ ತನ್ನ ದೇಶವನ್ನು ರಷ್ಯಾದ ಆಕ್ರಮಣಕಾರರ ವಿರುದ್ಧ ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾಳೆ.2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತಾಸಿಯಾ ಲೆನ್ನಾ ಈಗ ಉಕ್ರೇನಿಯನ್ ಮಿಲಿಟರಿಗೆ ಸೇರುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

Last Updated : Feb 28, 2022, 06:07 PM IST
  • ಸ್ಕೈ ನ್ಯೂಸ್ ಪ್ರಕಾರ, ಅನಸ್ತಾಸಿಯಾ ಲೆನ್ನಾ ಕೂಡ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಯನ್ನು ಬೆಂಬಲಿಸುವ ಸಂದೇಶವನ್ನು ಪೋಸ್ಟ್ ಮಾಡಿ ಅವರನ್ನು ನಿಜವಾದ ಮತ್ತು ಬಲಿಷ್ಠ ನಾಯಕ ಎಂದು ಅವರು ಶ್ಲಾಘಿಸಿದ್ದಾರೆ.
ರಷ್ಯಾ ವಿರುದ್ಧ ಹೋರಾಡಲು ಬಂದೂಕು ಹಿಡಿದ ಉಕ್ರೇನ್ ಸುಂದರಿ...!  title=

ನವದೆಹಲಿ: ಮಾಜಿ ಉಕ್ರೇನ್ ಸುಂದರಿ ಅನಸ್ತಾಸಿಯಾ ಲೆನ್ನಾ ತನ್ನ ದೇಶವನ್ನು ರಷ್ಯಾದ ಆಕ್ರಮಣಕಾರರ ವಿರುದ್ಧ ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾಳೆ.2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತಾಸಿಯಾ ಲೆನ್ನಾ ಈಗ ಉಕ್ರೇನಿಯನ್ ಮಿಲಿಟರಿಗೆ ಸೇರುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

"ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿಯನ್ನು ದಾಟಿದ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ!" ಎಂದು ಅವರು ಶನಿವಾರ ಪೋಸ್ಟ್ ಮಾಡಿದ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಪರಮಾಣು ಬಾಂಬ್ ದಾಳಿಗೆ ಮುಂದಾದ್ರಾ ರಷ್ಯಾ ಅಧ್ಯಕ್ಷ ಪುಟಿನ್?

ಸ್ಕೈ ನ್ಯೂಸ್ ಪ್ರಕಾರ, ಅನಸ್ತಾಸಿಯಾ ಲೆನ್ನಾ ಕೂಡ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಯನ್ನು ಬೆಂಬಲಿಸುವ ಸಂದೇಶವನ್ನು ಪೋಸ್ಟ್ ಮಾಡಿ ಅವರನ್ನು ನಿಜವಾದ ಮತ್ತು ಬಲಿಷ್ಠ ನಾಯಕ ಎಂದು ಅವರು ಶ್ಲಾಘಿಸಿದ್ದಾರೆ.

ಮಾಜಿ ಸುಂದರಿ ಉಕ್ರೇನ್ ತನ್ನ 2 ಲಕ್ಷ ಅನುಯಾಯಿಗಳೊಂದಿಗೆ ಹಂಚಿಕೊಂಡ ಹಲವಾರು ಪೋಸ್ಟ್‌ಗಳಲ್ಲಿ ಅಂತರರಾಷ್ಟ್ರೀಯ ಬೆಂಬಲಕ್ಕಾಗಿ ಮನವಿ ಮಾಡಿದರು. ಕೈವ್‌ನ ಸ್ಲಾವಿಸ್ಟಿಕ್ ವಿಶ್ವವಿದ್ಯಾಲಯದಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವೀಧರರಾಗಿರುವ ಲೆನ್ನಾ ಅವರು ಐದು ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅನುವಾದಕರಾಗಿ ಕೆಲಸ ಮಾಡಿದ್ದಾರೆ.

ಕಳೆದ ವಾರ ರಷ್ಯಾದ ಸೇನೆಯು ಉಕ್ರೇನ್ (Russia Ukraine War) ಮೇಲೆ ಆಕ್ರಮಣ ಮಾಡಿದ ನಂತರ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ.ರಷ್ಯಾದ ಆಕ್ರಮಣದ ನಂತರ ಇಲ್ಲಿಯವರೆಗೆ, ಏಳು ಮಕ್ಕಳು ಸೇರಿದಂತೆ 102 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಎಫ್ಟಿಪಿ ವರದಿ ಮಾಡಿದೆ. 

ಇದನ್ನೂ ಓದಿ-National Family Benefit Scheme: ಈ ಸ್ಕೀಮ್ ಅಡಿ ನಿಮಗೆ ಉಚಿತವಾಗಿ ಸಿಗುತ್ತೆ 30,000 ರೂ.ಗಳ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News