ಪ್ಯಾರಿಸ್: ಮಹಿಳೆಯೊಂದಿಗಿನ ಸಂಬಂಧಕ್ಕಾಗಿ ಫ್ರೆಂಚ್ ರಾಯಭಾರಿಯೊಬ್ಬರು (French Ambassador) ಸುದ್ದಿಯಲ್ಲಿದ್ದಾರೆ. ಹೇಗಾದರೂ, ಈ ಪ್ರಕರಣವು ಅಕ್ರಮ ಪ್ರೇಮ ವ್ಯವಹಾರಗಳಂತೆ ಅಲ್ಲ, ಆದರೆ ಇದರ ಹೊರತಾಗಿಯೂ ಮಹಿಳೆ ಮಾಡಿದ ಆರೋಪಗಳ ನಂತರ ರಾಯಭಾರಿಯ ತೊಂದರೆ ಹೆಚ್ಚಾಗಿದೆ.
'ಮೋಸ' ಸುಳಿವು ಇರಲಿಲ್ಲ
ಈ ಕುರಿತು ಹೇಳಿಕೆ ನೀಡಿರುವ ಮಹಿಳೆ ತಾವು ರಾಯಭಾರಿಯ ಜೊತೆಗೆ ಒಪ್ಪಿಗೆಯ ಮೇರೆಗೆ ಶಾರೀರಿಕ ಸಂಬಂಧ ಬೆಳೆಸಿರುವುದಾಗಿ ಹೇಳಿದ್ದಾರೆ. ಆದರೆ, ರಾಯಭಾರಿ ಕಾಂಡಂ ಬಳಕೆ ಮಾಡಿಲ್ಲ ಎಂಬುದು ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ. ಇದು ರಾಯಭಾರಿ ತಮಗೆ ಎಸೆದಿರುವ ಮೋಸ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ಆರೋಪಿ ರಾಯಭಾರಿಯ ವಿರುದ್ಧ ತನಿಖೆಗೆ ಆದೇಶಿಸಿದೆ
ಇದನ್ನು ಓದಿ- ಸಂಸತ್ತಿನಲ್ಲಿ ಅಶ್ಲೀಲ photo ವಿಕ್ಷಿಸಿದ ಸಂಸದ, ನೀಡಿರುವ ಕಾರಣ ಕೇಳಿ ನೀವು ಅವಕ್ಕಾಗುವಿರಿ
ಡೇಟಿಂಗ್ ವೆಬ್ ಸೈಟ್ ಮೇಲೆ ಭೇಟಿಯಾಗಿದ್ದರು
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಮಹಿಳೆ, ತಾವು ಡೇಟಿಂಗ್ ವೆಬ್ ಸೈಟ್ ಮೂಲಕ ರಾಯಭಾರಿಯನ್ನು ಭೇಟಿಯಾಗಿರುವುದಾಗಿ ಹೇಳಿದ್ದಾಳೆ. ಆದರೆ, ಇತ್ತೀಚೆಗಷ್ಟೇ ಆಕೆ 44 ವರ್ಷ ವಯಸ್ಸಿಯ ರಾಯಭಾರಿಯ ಮನೆಗೆ ತಲುಪಿದಾಗ. ಪರಸ್ಪರ ಒಪ್ಪಂದದ ಮೇರೆಗೆ ಶಾರೀರಿಕ ಸಂಬಂಧ ಬೆಸೆದಿರುವುದಾಗಿ ಹೇಳಿದ್ದಾಳೆ. ಈ ಒಪ್ಪಂದದ ಪ್ರಕಾರ ರಾಯಭಾರಿಗೆ ಮಹಿಳೆ ಕಾಂಡೊಮ್ ಧರಿಸುವಂತೆ ಸೂಚಿಸಿದ್ದಳು. ಆದರೆ ರಾಯಭಾರಿ ಆ ರೀತಿ ಮಾಡಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.
ಪಶ್ಚಿಮ ಏಷ್ಯಾದಲ್ಲಿ ನಿಯೋಜನೆ
ಈ ಘಟನೆಯ ಮೂರು ದಿನಗಳ ಬಳಿಕ ಮಹಿಳೆ ಪೊಲೀಸರ ಬಳಿ ಬಂದು ರಾಯಭಾರಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಫ್ರಾನ್ಸ್ ನಿಯತಕಾಲಿಕೆ ಫ್ರೆಂಚ್ ಮ್ಯಾಗಜೀನ್ ಲೇ ಪಾಯಿಂಟ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ರಾಯಭಾರಿಯ ಗುರುತನ್ನು ಮರೆಮಾಚಲಾಗಿದೆ. ಆದರೆ. ರಾಜದೂತ ಪಶ್ಚಿಮ ಏಷ್ಯಾದ ಒಂದು ದೇಶದಲ್ಲಿ ನೀಯೋಜನೆಗೊಂಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ- ಪಾಕಿಸ್ತಾನದ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ವಿರುದ್ಧ ಅತ್ಯಾಚಾರ ಆರೋಪ
2017ರಲ್ಲಿ ಶಿಕ್ಷೆಯಾಗಿತ್ತು
ಉಳಿದ ದೇಶಗಳನ್ತೆಯೇ ಫ್ರಾನ್ಸ್ ನಲ್ಲಿಯೂ ಕೂಡ ಮಹಿಳೆಯ ಒಪ್ಪಿಗೆ ಪಡೆದುಕೊಳ್ಳದೆ ಶಾರೀರಿಕ ಸಂಬಂಧ ಬೆಳೆಸುವುದು ಒಂದು ಅಪರಾಧವಾಗಿದೆ. ಆದರೆ, ಅನುರೋಧದ ಬಳಿಕವೂ ಕೂಡ ಕಾಂಡೋಮ್ ಬಳಕೆ ಮಾಡದಿರುವುದಕ್ಕೆ ಯಾವ ಶಿಕ್ಷೆ ನೀಡಬೇಕು ಎಂಬುದಕ್ಕೆ ಯಾವುದೇ ಕಾಯ್ದೆ ಇಲ್ಲ. 2017ರಲ್ಲಿ ನಡೆದ ಇಂತಹುದೇ ಒಂದು ಪ್ರಕರಣದಲ್ಲಿ ಸ್ವಿಟ್ಜರ್ಲ್ಯಾಂಡ್ ನ್ಯಾಯಾಲಯ ವ್ಯಕ್ತಿಯೋರ್ವನನ್ನು ತಪ್ಪಿತಸ್ತ ಎಂದು ಪರಿಗಣಿಸಿ 12 ತಿಂಗಳುಗಳ ಶಿಕ್ಷೆ ವಿಧಿಸಿತ್ತು. ಶಾರೀರಿಕ ಸಂಬಂಧದ ವೇಳೆ ಮಹಿಳೆಯ ಅನುಮತಿ ಇಲ್ಲದೆ ಆ ವ್ಯಕ್ತಿ ಕಾಂಡೊಮ್ ತೆಗೆದಿದ್ದ ಎಂದು ಆರೋಪಿಸಲಾಗಿತ್ತು.