ನವದೆಹಲಿ: ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅವರ ಮಗ ಹಮ್ಜಾ ಬಿನ್ ಲಾಡೆನ್ ಮೃತ ಪಟ್ಟಿದ್ದಾನೆ ಎಂದು ಹೇಳಲಾಗಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿ ಮೇರೆಗೆ ಅಮೆರಿಕದ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಅದಾಗ್ಯೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಹಮ್ಜಾ ಲಾಡೆನ್ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು.
ಮೂವರು ಅಧಿಕಾರಿಗಳನ್ನು ಉಲ್ಲೇಖಿಸಿ ಎನ್ಬಿಸಿ ನ್ಯೂಸ್ ಆಫ್ ಅಮೇರಿಕಾ, ಹಮ್ಜಾ ಬಿನ್ ಲಾಡೆನ್ನ ಹತ್ಯೆಯಾಗಿದೆ ಎಂಬ ಮಾಹಿತಿ ಯುಎಸ್ ಗುಪ್ತಚರ ಸಂಸ್ಥೆಗಳಿಗೆ ಬಂದಿದೆ ಎಂದು ವರದಿ ಮಾಡಿದೆ. ಹಮ್ಜಾ ಬಿನ್ ಲಾಡೆನ್ನ ಸಾವು ಎಲ್ಲಿ ಮತ್ತು ಹೇಗೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ? ಆತನ ಸಾವಿನಲ್ಲಿ ಅಮೆರಿಕದ ತಂತ್ರಗಾರಿಕೆ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅದೇ ಸಮಯದಲ್ಲಿ, ಯುಎಸ್ ಹಮ್ಜಾ ಬಿನ್ ಲಾಡೆನ್ನ ಸಾವನ್ನು ಅಧಿಕೃತವಾಗಿ ಖಚಿತಪಡಿಸುತ್ತದೆಯೋ? ಇಲ್ಲವೋ? ಎಂಬುದು ಸ್ಪಷ್ಟವಾಗಿಲ್ಲ. ಹಮ್ಜಾ ಸಾವಿನ ಬಗ್ಗೆ ಯುಎಸ್ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೇಳಿದಾಗ, "ನಾನು ಇದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ" ಎಂದು ಹೇಳಿದರು.
ಹಮ್ಜಾ ಬಿನ್ ಲಾಡೆನ್ ಕೊನೆಯ ಬಾರಿಗೆ ಸಾರ್ವಜನಿಕವಾಗಿ 2018 ರಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಹಮ್ಜಾನನ್ನು ಅಲ್-ಖೈದಾ ನಾಯಕ ಅಯ್ಮಾನ್ ಅಲ್-ಜವಾಹರಿ ಎಂಬ ಭಯೋತ್ಪಾದಕ ಸಂಘಟನೆಯ ಉತ್ತರಾಧಿಕಾರಿ ಎಂದು ಸಹ ಹೇಳಲಾಗುತ್ತದೆ. ಒಸಾಮಾ ಬಿನ್ ಲಾಡೆನ್ ಕೊಲೆಯಾದ ನಂತರ ಹಮ್ಜಾ ಲಾಡೆನ್ ಅಲ್-ಖೈದಾದ ಮುಖಂಡನಾಗಿ ಹೊರಹೊಮ್ಮುವ ಮೊದಲೇ ಹಲವು ಪ್ರತ್ಯೇಕ ಬಣಗಳಾಗಿ ಮಾರ್ಪಟ್ಟಿದ್ದವು ಎಂದು ಹೇಳಲಾಗಿದೆ.
ಈ ವರ್ಷದ ಆರಂಭದಲ್ಲಿ, ಹಮ್ಜಾ ಬಿನ್ ಲಾಡೆನ್ ಬಗ್ಗೆ ಮಾಹಿತಿ ನೀಡಿದವರಿಗೆ ಯುಎಸ್ $ 1 ಮಿಲಿಯನ್ ಬಹುಮಾನವನ್ನು ಘೋಷಿಸಿತು. ಇದಕ್ಕೂ ಮೊದಲು 2017 ರ ಜನವರಿಯಲ್ಲಿ ಅಮೆರಿಕ ಹಮ್ಜಾ ಬಿನ್ ಲಾಡೆನ್ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿತ್ತು.