New Age Baba Vanga: 2022ರ ಕುರಿತು ಈ ಯುವತಿ ಹೇಳಿದ 10 ಭವಿಷ್ಯಗಳು ನಿಜ ಸಾಬೀತಾಗಿವೆ... ಎಚ್ಚರ!

New Age Baba Vanga: ಅಮೇರಿಕಾದಲ್ಲಿ ವಾಸಿಸುವ 19 ವರ್ಷದ ಓರ್ವ ಯುವತಿ ನುಡಿದ ಹಲವು ಭವಿಷ್ಯಗಳು ಇದುವರೆಗೆ ನಿಜ ಎಂದು ಸಾಬೀತಾಗಿವೆ. ಈ ಯುವತಿಯನ್ನು ಆಧುನಿಕ ಯುಗದ ಬಾಬಾ ವಂಗಾ ಎಂದು ಕರೆಯಲಾಗುತ್ತಿದೆ.  

Written by - Nitin Tabib | Last Updated : Oct 7, 2022, 07:03 PM IST
  • ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವೇಂಗಾ ಭವಿಷ್ಯವಾಣಿಗಳು ವ್ಯಾಪಕ ಚರ್ಚೆಯಲ್ಲಿರುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
  • ಹೀಗಿರುವಾಗ ಜನರು ಇದೀಗ ಹೈನಾ ಕ್ಯಾರೊಲ್ ಳನ್ನು
  • 21 ನೇ ಶತಮಾನದ ಬಾಬಾ ವಂಗಾ ಎಂದು ಕರೆಯಲಾರಂಭಿಸಿದ್ದಾರೆ.
New Age Baba Vanga: 2022ರ ಕುರಿತು ಈ ಯುವತಿ ಹೇಳಿದ 10 ಭವಿಷ್ಯಗಳು ನಿಜ ಸಾಬೀತಾಗಿವೆ... ಎಚ್ಚರ! title=
Hannah Carolina

Hannah Carrol Predictions: ಭವಿಷ್ಯವಾಣಿಗಳು ಅಸ್ತಿತ್ವದಲ್ಲಿ ನಿಜ ಸಾಬೀತಾಗುತ್ತವೆಯೇ. ಭವಿಷ್ಯಗಳನ್ನು ನಂಬುವವರು, ಬಹುತೇಕ ಭವಿಷ್ಯವಾಣಿಗಳು ನಿಜ ಸಾಬೀತಾಗುತ್ತವೆ ಎನ್ನುತ್ತಾರೆ. ಹೌದು, ನಾವು ನಿಮಗೆ ಹೇಳುತ್ತಿರುವುದು ಓರ್ವ ಯುವತಿಯ ಬಗ್ಗೆ, ಈ ಯುವತಿಯ ಹೆಸರು ಹೈನಾ ಕ್ಯಾರೊಲ್ ಆಗಿದ್ದು, ಆಕೆ ನುಡಿದ ಬಹುತೇಕ ಭವಿಷ್ಯವಾಣಿಗಳು ಇದುವರೆಗೆ ನಿಜ ಎಂದು ಸಾಬೀತಾಗಿವೆ ಎನ್ನಲಾಗಿದೆ. ಇಲ್ಲಿ ಆಶ್ಚರ್ಯಕ್ಕೀಡು ಮಾಡುವ ಸಂಗತಿ ಎಂದರೆ ಹೈನಾ ವಯಸ್ಸು ಕೇವಲ 19 ವರ್ಷ ಮಾತ್ರ.

ಇದನ್ನೂ ಓದಿ-December 2 ರವರೆಗೆ ಈ ರಾಶಿಗಳ ಜನರ ಜೀವನದಲ್ಲಿ ಅಪಾರ ಸುಖ-ಸಮೃದ್ಧಿ ಇರಲಿದೆ, ನಿಮ್ಮ ರಾಶಿ ಯಾವುದು?

2022ಕ್ಕೆ ಹೈನಾ ಮಾಡಿರುವ ಭವಿಷ್ಯವಾನಿಗಳಲ್ಲಿ ರಿಹಾನಾ ಹಾಗೂ ಪ್ರಿಯಾಂಕಾ ಚೋಪ್ರಾ ತಾಯಿಯಾಗುವುದು. ಕಿಮ್ ಕರ್ದಾಶಿಯಾ ಬ್ರೇಕ್ ಅಪ್, ಹ್ಯಾರಿ ಸ್ಟೈಲ್ ಹಾಗೂ ಬಿಯೊಂಸೆ ಹೊಸ ಅಲ್ಬಮ್ ಇತ್ಯಾದಿಗಳು ಮಹತ್ವದ್ದಾಗಿವೆ. ಇದೆ ವರ್ಷದ ಆರಂಭದಲ್ಲಿ ಹೈನಾ ಎರಡನೇ ಕ್ವೀನ್ ಎಲಿಜಬೇತ್ ನಿಧನದ ಭವಿಷ್ಯವನ್ನು ಕೂಡ ನುಡಿದಿದ್ದಳು ಮತ್ತು ಅದರ ವಾಸ್ತವಿಕತೆ ನಿಮ್ಮ ಕಣ್ಮುಂದಿದೆ.

ಇದನ್ನೂ ಓದಿ-Sharad Purnima 2022: ಸಕಲ 16 ಕಲಾವಲ್ಲಭನಾಗಲಿದ್ದಾನೆ ಚಂದ್ರ, ಇಲ್ಲಿದೆ ಪೂಜಾ ವಿಧಿ-ಮುಹೂರ್ತಗಳ ಮಾಹಿತಿ

ವರ್ಷ 2022ಕ್ಕಾಗಿ 28 ಭವಿಷ್ಯಗಳನ್ನು ಹೇಳಿದ್ದಾಳೆ ಹೈನಾ
ಮಾಧ್ಯಮ ವರದಿಗಳ ಪ್ರಕಾರ, ಹೈನಾ ಕ್ಯಾರೊಲ್ ವರ್ಷ 2022ಕ್ಕಾಗಿ ಹೇಳಿದ ಒಟ್ಟು 28 ದೊಡ್ಡ ಭವಿಷ್ಯಗಳಲ್ಲಿ ಇದುವರೆಗೆ 10 ಭವಿಷ್ಯಗಳು ನಿಜ ಸಾಬೀತಾಗಿವೆ. ಹೈನಾ ಭವಿಷ್ಯಗಳನ್ನು ಕೇಳಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವೇಂಗಾ ಭವಿಷ್ಯವಾಣಿಗಳು ವ್ಯಾಪಕ ಚರ್ಚೆಯಲ್ಲಿರುತ್ತವೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಹೀಗಿರುವಾಗ ಜನರು ಇದೀಗ ಹೈನಾ ಕ್ಯಾರೊಲ್ ಳನ್ನು 21 ನೇ ಶತಮಾನದ ಬಾಬಾ ವಂಗಾ ಎಂದು ಕರೆಯಲಾರಂಭಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News