ಈ ಪಟ್ಟಿಯಲ್ಲಿ ಅಮೇರಿಕ-ಚೀನಾವನ್ನೂ ಸಹ ಹಿಂದಿಕ್ಕಿದೆ ಭಾರತ

ಮ್ಯಾಡ್ರಿಕ್ ನಲ್ಲಿ ಇಂದು ನಡೆದ ಕ್ಲೈಮೆಟ್ ಕುರಿತಾದ ಶೃಂಗಸಭೆಯಲ್ಲಿ ಜಾರಿಗೊಂಡ ಈ ಪಟ್ಟಿಯಲ್ಲಿ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ ಪಟ್ಟಿಯ ಮೊದಲ ಹತ್ತು ಸ್ಥಾನಗಳಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. 

Last Updated : Dec 10, 2019, 10:00 PM IST
ಈ ಪಟ್ಟಿಯಲ್ಲಿ ಅಮೇರಿಕ-ಚೀನಾವನ್ನೂ ಸಹ ಹಿಂದಿಕ್ಕಿದೆ ಭಾರತ title=

ನವದೆಹಲಿ: ಇಂದು ಬಿಡುಗಡೆಯಾಗಿರುವ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (ಕ್ವಾಲಿಟಿ ಚೇಂಜ್ ಪರ್ಫಾರ್ಮೆನ್ಸ್ ಇಂಡೆಕ್ಸ್) ಪಟ್ಟಿಯಲ್ಲಿ ಭಾರತ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಒಟ್ಟು 57 ದೇಶಗಳ ಈ ಪಟ್ಟಿಯಲ್ಲಿ ಭಾರತ ಮೊದಲ ಬಾರಿಗೆ ಟಾಪ್ 10 ಪಟ್ಟಿಗೆ ಸೇರ್ಪಡೆಗೊಂಡಿದೆ.

ಮ್ಯಾಡ್ರಿಕ್ ನಲ್ಲಿ ಇಂದು ನಡೆದ ಕ್ಲೈಮೆಟ್ ಕುರಿತಾದ ಶೃಂಗಸಭೆಯಲ್ಲಿ ಜಾರಿಗೊಂಡ ಈ ಪಟ್ಟಿಯಲ್ಲಿ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ ಪಟ್ಟಿಯ ಮೊದಲ ಹತ್ತು ಸ್ಥಾನಗಳಲ್ಲಿ ಭಾರತ ಸ್ಥಾನ ಪಡೆದುಕೊಂಡಿದೆ. ಮ್ಯಾಡ್ರಿಕ್ ನಲ್ಲಿ ಬಿಡುಗಡೆಗೊಳಿಸಲಾದ ಫಲಿತಾಂಶ ಪಟ್ಟಿಯಲ್ಲಿ ಭಾರತ 9ನೇ ಸ್ಥಾನ ಅಲಂಕರಿಸಿದೆ. ಈ ಪಟ್ಟಿಯಲ್ಲಿ ಸ್ವೀಡನ್ ಮೊದಲ ಸ್ಥಾನದಲ್ಲಿದ್ದರೆ, ಚೀನಾ 30ನೇ ಸ್ಥಾನದಲ್ಲಿದೆ. ಜಾರಿಗೊಂಡ ಪಟ್ಟಿಯಲ್ಲಿ USA ಕೊನೆಯ ಸ್ಥಾನದಲ್ಲಿದೆ. ಭಾರತದ ನೆರೆರಾಷ್ಟ್ರ ಪಾಕಿಸ್ತಾನ ಈ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ಇಲ್ಲಿ ವಿಶೇಷ.

ಒಟ್ಟು 14 ಅಂಶಗಳ ಆಧಾರದ ಮೇಲೆ ಈ ಸೂಚ್ಯಂಕ ಪಟ್ಟಿ ತಯಾರಿಸಲಾಗುತ್ತದೆ. ಈ ಅಂಶಗಳನ್ನು 4 ಭಾಗಗಳಾಗಿ ವಿಂಗಡಿಸಲಾಗುತ್ತದೆ.

Trending News