ವಾಷಿಂಗ್ಟನ್: 23 ವರ್ಷದ ಮುಸ್ಲಿಂ ಇಂಡಿಯನ್-ಅಮೆರಿಕನ್ ಡೆಮಾಕ್ರಟ್ ನಬೀಲಾ ಸೈಯದ್ ಇಲಿನಾಯ್ಸ್ ರಿಪಬ್ಲಿಕನ್ ಅಭ್ಯರ್ಥಿ ಕ್ರಿಸ್ ಬಾಸ್ ವಿರುದ್ಧ ಶೇ 52.3 ಮತಗಳನ್ನು ಪಡೆಯುವ ಮೂಲಕ ಜನರಲ್ ಅಸೆಂಬ್ಲಿಗೆ ಚುನಾಯಿತರಾಗಿದ್ದಾರೆ. ಆ ಮೂಲಕ ಈಗ ಅವರು ಅತ್ಯಂತ ಕಿರಿಯ ಸದಸ್ಯೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಲಿನಾಯ್ಸ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 51 ನೇ ಜಿಲ್ಲೆಗೆ ನಡೆದ ಅತ್ಯಂತ ಧ್ರುವೀಕೃತ ಮಧ್ಯಂತರ ಚುನಾವಣೆಗಳಲ್ಲಿ ಆಡಳಿತಾರೂಢ ಡೆಮಾಕ್ರಟ್ ಪಕ್ಷದಿಂದ ಒಟ್ಟು ಐದು ಭಾರತೀಯ ಮೂಲದ ಶಾಸಕರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಶನ್‌ಗೆ ಚುನಾಯಿತರಾದರು, ಹಲವಾರು ಇತರರು ರಾಜ್ಯ ಶಾಸಕಾಂಗಗಳಲ್ಲಿ ಆಯ್ಕೆಯಾದರು.
ಇದನ್ನೂ ಓದಿ : Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ
My name is Nabeela Syed. I’m a 23-year old Muslim, Indian-American woman. We just flipped a Republican-held suburban district.
And in January, I’ll be the youngest member of the Illinois General Assembly.
— Nabeela Syed (@NabeelaforIL) November 9, 2022
ಈಗ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪ್ರಚಂಡ ಗೆಲುವಿನ ಬಗ್ಗೆ ಪ್ರತಿಕ್ರಿಯಿಸುತ್ತಾ ಅವರು ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ, “ನನ್ನ ಹೆಸರು ನಬೀಲಾ ಸೈಯದ್. ನಾನು 23 ವರ್ಷದ ಮುಸ್ಲಿಂ, ಭಾರತೀಯ-ಅಮೆರಿಕನ್ ಮಹಿಳೆ. ನಾವು ರಿಪಬ್ಲಿಕನ್ ಹಿಡಿತದಲ್ಲಿರುವ ಉಪನಗರ ಜಿಲ್ಲೆಯನ್ನು ವಶಪಡಿಸಿಕೊಂಡಿದ್ದೇವೆ, ಜನವರಿಯಲ್ಲಿ, ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಯ ಕಿರಿಯ ಸದಸ್ಯನಾಗುತ್ತೇನೆ." ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Viral Video : ಇಳಿವಯಸ್ಸಲ್ಲೂ ಭರ್ಜರಿ ಸ್ಟೆಪ್ಸ್ ಹಾಕಿದ ಅಜ್ಜಿ, ಏನ್ ಎನರ್ಜಿ ಗುರು!
ನಬೀಲಾ ಸೈಯದ್ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ಮತ್ತು ವ್ಯವಹಾರ ಆಡಳಿತದಲ್ಲಿ ಪದವಿ ಪಡೆದಿದ್ದಾರೆ.ನಬೀಲಾ ಸೈಯದ್ ಹೊರತುಪಡಿಸಿ, ಇತರ ಚುನಾಯಿತ ಭಾರತೀಯ-ಅಮೆರಿಕನ್ ಸದಸ್ಯರರೆಂದರೆ ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಅಮಿ ಬೇರಾ ಸೇರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.