ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಭಾರತ ಮೂಲದ ದಂಪತಿಯ ಸಾವಿನ ರಹಸ್ಯ ಬಯಲು!

ಕೇರಳ ಮೂಲದ ದಂಪತಿ ಬೆಟ್ಟದ ತುತ್ತತುದಿಯಿಂದ ಬಿದ್ದಿದ್ದ ಪರಿಣಾಮ ತಲೆ, ಕುತ್ತಿಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. 

Last Updated : Jan 24, 2019, 10:52 AM IST
ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ ಭಾರತ ಮೂಲದ ದಂಪತಿಯ ಸಾವಿನ ರಹಸ್ಯ ಬಯಲು!  title=
Pic Courtesy: DNA

ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಯೂಸೆಮಿಟಿ ರಾಷ್ಟ್ರೀಯ ಉದ್ಯಾನದಲ್ಲಿ 800 ಅಡಿ ಪ್ರಪಾತಕ್ಕೆ ಬಿದ್ದು ದುರಂತ ಅಂತ್ಯ ಕಂಡ ಭಾರತೀಯ ಮೂಲದ ದಂಪತಿಯ ಸಾವಿನ ರಹಸ್ಯ ಬಯಲಾಗಿದೆ. ಮದ್ಯ ಸೇವನೆಯೇ ಘಟನೆಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ವಿಷ್ಣು ವಿಶ್ವನಾಥ್​ (29) ಮತ್ತು ಪತ್ನಿ ಮೀನಾಕ್ಷಿ ಮೂರ್ತಿ (30) ಎಂಬ ದಂಪತಿ ಈಥೈಲ್ ಆಲ್ಕೋಹಾಲ್‌ ಸೇವನೆಯಿಂದ ಅಮಲೇರಿದ್ದರು. ಆದರೆ ಶವಪರೀಕ್ಷೆಯ ವರದಿಯ ಪ್ರಕಾರ ಅವರ ದೇಹದಲ್ಲಿ ಬೇರೆ ಯಾವುದೇ ಅಂಶಗಳಿರಲಿಲ್ಲ. ಬಿಯರ್, ಆಲ್ಕೋಹಾಲಿಕ್‌ ಪಾನೀಯಗಳಾದ ವೈನ್ ಮತ್ತು ಇತರೆ ಮದ್ಯಗಳಲ್ಲಿ ಈಥೈಲ್ ಆಲ್ಕೋಹಾಲ್‌ ಕಂಡುಬರುತ್ತದೆ. ಪ್ರಪಾತಕ್ಕೆ ಬಿದ್ದ ಬಳಿಕ ಅವರ ದೇಹದ ಸ್ಥಿತಿಯಿಂದಾಗಿ ತನಿಖಾಧಿಕಾರಿಗಳು ದೇಹದಲ್ಲಿದ್ದ ಮದ್ಯದ ಮಟ್ಟವೆಷ್ಟು ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಿಲ್ಲ. ಅವರು ಕುಡಿದಿದ್ದರು ಮತ್ತು ಅವರ ದೇಹದಲ್ಲಿ ಆಲ್ಕೋಹಾಲ್‌ ಅಂಶವಿದ್ದದಷ್ಟೇ ತಿಳಿಯಿತು. ಆದರೆ ಅದರ ಪ್ರಮಾಣವೆಷ್ಟು ಎಂಬುದನ್ನು ತಿಳಿಯಲು ಸಾಧ್ಯವಾಗಿಲ್ಲ ಎಂದು ಮರಿಪೋಸಾ ಕೌಂಟ್ರಿಯ ಸಹಾಯಕ ಆಂಡ್ರಿಯಾ ಸ್ಟೆವರ್ಟ್ ತಿಳಿಸಿದ್ದಾರೆ.

ಕೇರಳ ಮೂಲದ ದಂಪತಿ ಬೆಟ್ಟದ ತುತ್ತತುದಿಯಿಂದ ಬಿದ್ದಿದ್ದ ಪರಿಣಾಮ ತಲೆ, ಕುತ್ತಿಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. 2010ಲ್ಲಿ ಕೇರಳದ ಚೆಂಗನ್ನೂರ್​ ಎಂಜಿನಿಯರಿಂಗ್​ ಕಾಲೇಜಿನಲ್ಲಿ ಒಟ್ಟಿಗೆ ಪದವಿ ಪಡೆದಿದ್ದ ಅವರು ವೃತ್ತಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ಗಳಾಗಿದ್ದರು. ವಿಶ್ವನಾಥ್‌ಗೆ ಅಮೆರಿಕದ ಸಿಲಿಕಾನ್‌ ವ್ಯಾಲಿಯ ಸಿಸ್ಕೊ ಸಂಸ್ಥೆಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಸಿಕ್ಕಿತ್ತು. 2014ರಲ್ಲಿ ಅವರು ವಿವಾಹವಾಗಿದ್ದರು.

Trending News