ಇರಾನ್: ಇರಾನ್‌ನಲ್ಲಿ ಮಹಿಳೆಯರು ತಮ್ಮದೇ ದೇಶದ ಒಂದು ಕಾನೂನನ್ನು ವಿರೋಧಿಸಲು ಇದೀಗ ಬಹಿರಂಗವಾಗಿ ಬೀದಿಗೆ ಇಳಿದಿದ್ದಾರೆ. ಅಲ್ಲಿನ ಸರ್ಕಾರ ದೇಶದಲ್ಲಿನ ಮಹಿಳೆಯರಿಗೆ ಅನ್ವಯವಾಗುವಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ವಿರೋಧಿಸಲು ಇದೀಗ ಮಹಿಳೆಯರು ಬೀದಿಗಿಳಿದು, ನಿಯಮಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಾಮಾಜಿಕ ಹಕ್ಕುಗಳಿಗಾಗಿ, ಇರಾನ್ ಮಹಿಳೆಯರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಮಹಿಳೆಯರು ಬೀದಿಗಳಲ್ಲಿ ನೃತ್ಯ ಮಾಡುವುದನ್ನು ನೀವು ಕಾಣಬಹುದು. ಅಷ್ಟೇ ಅಲ್ಲ ಕೆಲ ಮಹಿಳೆಯರು ತಾವು ಧರಿಸಿದ ಹಿಜಾಬ್ ಅನ್ನು ಸಹ ತೆಗೆದು ಹಾಕುತ್ತಿರುವುದನ್ನು ನೀವು ನೋಡಬಹುದು.
ಇರಾನ್ ನಲ್ಲಿ ಮಹಿಳೆಯರ ಮೇಲೆ ಕೆಲ ಕಠಿಣ ನಿಯಮಗಳನ್ನು ಹೇರಲಾಗಿದೆ, ಇದರಲ್ಲಿ ಹಿಜಾಬ್ ಧರಿಸುವುದು ಮತ್ತು ಬೀದಿಯಲ್ಲಿ ತೆರೆದ ನೃತ್ಯ ಮಾಡುವುದು ಒಂದು ಅಪರಾಧ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಿಜಾಬ್ ಧರಿಸದೆ ಸುತ್ತಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ. ಇಂತಹ ನಿಯಮಗಳಿಗೆ ಅಲ್ಲಿನ ಮಹಿಳೆಯರು ಮತ್ತು ಯುವತಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಹಿಳೆಯರು ಇಂತಹ ನಿಯಮಗಳ ವಿರುದ್ಧ ಬಹಿರಂಗವಾಗಿ ವಿರೋಧಿಸಲು ಪ್ರಾರಂಭಿಸಿದ್ದಾರೆ.
Islamic Republic of #Iran.
It's illegal for #Iranian women to #dance on the street, but that's not stopping them.pic.twitter.com/3vevaVzxIW
— Mr Belutsch🏳 (@Mr_Belutsch) February 5, 2020
ಸದ್ಯ ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ಇರಾನಿನ ಮಹಿಳೆಯರು ಮತ್ತು ಯುವತಿಯರು ಬೀದಿಗಳಲ್ಲಿ ನೃತ್ಯ ಮಾಡುತ್ತಿದ್ದು, ತಮ್ಮ ಹಿಜಾಬ್‌ಗಳನ್ನು ಸಹ ಕಿತ್ತೆಸೆಯುತ್ತಿರುವುದನ್ನು ನೀವು ಕಾಣಬಹುದಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯರು ಮತ್ತು ಯುವತಿಯರು ತಮ್ಮದೇ ಆದ ವಿಶಿಷ್ಟ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಹೇಗೆ ಮಹಿಳೆಯರು ಬೀದಿಗೆ ಇಳಿದು ನೃತ್ಯ ಪ್ರದರ್ಶಿಸುತ್ತಿದ್ದಾರೆ ಮತ್ತು ಹೇಗೆ ತಾವು ಧರಿಸಿರುವ ಹಿಜಾಬ್ ಕಿತ್ತೆಸೆಯುತ್ತಿದ್ದಾರೆ ಎಂಬುದನ್ನು ನೀವು ಸ್ಪಷ್ಟವಾಗಿ ಗಮನಿಸಬಹುದಾಗಿದೆ. @Mr_Belutsch ಹೆಸರಿನ ಒಬ್ಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ ಈ ವಿಡಿಯೋ ಸುಮಾರು 7 ಲಕ್ಷ 33 ಸಾವಿರಕ್ಕೂ ಅಧಿಕ ಬಾರಿಗೆ ವೀಕ್ಷಣೆಗೆ ಒಳಗಾಗಿದೆ.