Japan Flight Fire: ಜಪಾನ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ, 5 ಜನ ಸಾವು.. ಭಯಾನಕ ವಿಡಿಯೋ ನೋಡಿ

Japan Plane Fire: ಜಪಾನ್‌ನ ಟೋಕಿಯೋ ಹನೆಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇಯಲ್ಲಿ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. 

Written by - Chetana Devarmani | Last Updated : Jan 2, 2024, 06:01 PM IST
  • ಜಪಾನ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ
  • ಜಪಾನ್‌ ಟೋಕಿಯೋ ಹನೆಡಾ ವಿಮಾನ ನಿಲ್ದಾಣ
  • ರನ್‌ವೇಯಲ್ಲಿ ವಿಮಾನವೊಂದು ಬೆಂಕಿಗೆ ಆಹುತಿ
Japan Flight Fire: ಜಪಾನ್‌ನಲ್ಲಿ ಲ್ಯಾಂಡಿಂಗ್ ವೇಳೆ ವಿಮಾನದಲ್ಲಿ ಬೆಂಕಿ, 5 ಜನ ಸಾವು.. ಭಯಾನಕ ವಿಡಿಯೋ ನೋಡಿ title=
Japan Plane

Japan Flight Fire: ಜಪಾನ್‌ನ ಟೋಕಿಯೋ ಹನೆಡಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರನ್‌ವೇಯಲ್ಲಿ ವಿಮಾನವೊಂದು ಬೆಂಕಿಗೆ ಆಹುತಿಯಾಗಿದೆ. ವಿಮಾನದ ಕಿಟಕಿಗಳಿಂದ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದು ಕಂಡುಬಂದಿದೆ. ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಜಪಾನ್‌ನ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಹನೆಡಾ ಕೂಡ ಒಂದು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸಕಾಲದಲ್ಲಿ ಹೊರಕ್ಕೆ ತರಲಾಗಿದೆ. ಆದರೆ ಅಪಘಾತದಲ್ಲಿ ಐವರು ಕೋಸ್ಟ್ ಗಾರ್ಡ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಅಪಘಾತದ ಆಘಾತಕಾರಿ ದೃಶ್ಯಾವಳಿಗಳುವೈರಲ್‌ ಆಗಿವೆ. ಹೊತ್ತಿ ಉರಿಯುತ್ತಿದ್ದ ವಿಮಾನ ಕೆಲಕಾಲ ರನ್ ವೇಯಲ್ಲಿ ಓಡುತ್ತಲೇ ಇದ್ದುದನ್ನು ಕಾಣಬಹುದು. ವರದಿಗಳ ಪ್ರಕಾರ, ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ಸಂಭವಿಸಿದೆ. ಜಪಾನ್ ಕೋಸ್ಟ್ ಗಾರ್ಡ್ ವಿಮಾನ ಮತ್ತು ಜಪಾನ್ ಏರ್‌ಲೈನ್ಸ್ ವಿಮಾನದ ನಡುವೆ ಘರ್ಷಣೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 

ಇದನ್ನೂ ಓದಿ : ಜಪಾನ್‌ನಲ್ಲಿ ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ, ಸಾವಿನ ಸಂಖ್ಯೆ 20 ಕ್ಕೆ ಏರಿಕೆ!

ಜಪಾನ್ ಏರ್‌ಲೈನ್ಸ್ ವಕ್ತಾರರು, ವಿಮಾನವು ಹೊಕ್ಕೈಡೋದ ಶಿನ್-ಚಿಟೋಸ್ ವಿಮಾನ ನಿಲ್ದಾಣದಿಂದ ಹೊರಟಿದ್ದು, 300 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ಎಲ್ಲಾ 367 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ. ಸಿಬ್ಬಂದಿ ಕೂಡ ಸುರಕ್ಷಿತವಾಗಿದ್ದಾರೆ. 

 

 

ಈ ವಿಮಾನ ಜಪಾನ್ ಏರ್‌ಲೈನ್ಸ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ವಿಮಾನವು ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಬೆಂಕಿ ನಂದಿಸಲು ಕಾರ್ಮಿಕರು ಹರಸಾಹಸ ಪಡಬೇಕಾಯಿತು. 

ಇದನ್ನೂ ಓದಿ : ಜಪಾನ್ ನಲ್ಲಿ ಭೂಕಂಪಕ್ಕೆ ಉಯ್ಯಾಲೆಯಂತೆ ತೂಗಾಡಿದ ಕಟ್ಟಡಗಳು ! ಇಲ್ಲಿದೆ ವಿಡಿಯೋ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News