Japan earthquake: ಜಪಾನ್‌ನಲ್ಲಿ ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ, ಸಾವಿನ ಸಂಖ್ಯೆ 20 ಕ್ಕೆ ಏರಿಕೆ!

Japan Earthquake: ಹೊಸ ವರ್ಷದ ಮೊದಲ ದಿನದಂದು, ಜಪಾನ್ 155 ಭೂಕಂಪಗಳಿಂದ ತತ್ತರಿಸಿ ಹೋಗಿದೆ.  

Written by - Chetana Devarmani | Last Updated : Jan 2, 2024, 03:29 PM IST
  • ಜಪಾನ್‌ನಲ್ಲಿ ಒಂದೇ ದಿನ 155 ಬಾರಿ ಭೂಕಂಪನ
  • ಭೂಕಂಪಗಳಿಂದ ತತ್ತರಿಸಿ ಹೋದ ಜಪಾನ್‌
  • ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆ ದಾಖಲು
Japan earthquake: ಜಪಾನ್‌ನಲ್ಲಿ ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ, ಸಾವಿನ ಸಂಖ್ಯೆ 20 ಕ್ಕೆ ಏರಿಕೆ! title=
Japan Earthquake

Japan Earthquake Updates : ಜಪಾನ್‌ನಲ್ಲಿ ಹೊಸ ವರ್ಷದಂದೇ 155 ಬಾರಿ ಕಂಪಿಸಿದೆ. ಇದರಲ್ಲಿ ಒಂದು ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.6 ಎಂದು ದಾಖಲಾಗಿದೆ. ಪ್ರಬಲ ಭೂಕಂಪವು ಒಂದು ಮೀಟರ್‌ಗಿಂತಲೂ ಹೆಚ್ಚು ಸುನಾಮಿ ಅಲೆಗಳನ್ನು ಸೃಷ್ಟಿಸಿದೆ. ಇದರಿಂದಾಗಿ ಅಪರಾ ಹಾನಿಯಾಗಿದೆ. ಭೂಕಂಪದ ತೀವ್ರತೆಗೆ ಕಟ್ಟಡಗಳು ಕುಸಿದಿವೆ. ಜಪಾನ್‌ನ ಕರಾವಳಿ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. 

ಜಪಾನಿನ ಇಶಿಕಾವಾ ಪ್ರಾಂತ್ಯದ ನೋಟೋ ಪೆನಿನ್ಸುಲಾದಲ್ಲಿ ನಿನ್ನೆ ಸ್ಥಳೀಯ ಕಾಲಮಾನ 4:10 ಕ್ಕೆ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ವರದಿ ಮಾಡಿದೆ. ಭೂಕಂಪವು 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಜಪಾನ್ ನಲ್ಲಿ ಭೂಕಂಪಕ್ಕೆ ಉಯ್ಯಾಲೆಯಂತೆ ತೂಗಾಡಿದ ಕಟ್ಟಡಗಳು ! ಇಲ್ಲಿದೆ ವಿಡಿಯೋ 

ಭೂಕಂಪದ ನಂತರ ಸೋಮವಾರ ಸಂಜೆ ಮಧ್ಯ ಜಪಾನ್‌ನ ವಾಜಿಮಾ ನಗರದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ನೂರಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳು ಸುಟ್ಟುಹೋಗಿವೆ ಎಂದು NHK ವರ್ಲ್ಡ್ ವರದಿ ಮಾಡಿದೆ.  

ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಟ್ರಾನ್ಸ್‌ಫಾರ್ಮರ್ ವಿಫಲವಾಗಿದೆ ಎಂದು ಆಪರೇಟರ್ ಹೇಳಿದ್ದಾರೆ.  ಭೂಕಂಪ-ಪೀಡಿತ ಪ್ರಾಂತ್ಯಗಳಲ್ಲಿ ಫೋನ್ ಸೇವೆಗಳು ಸಹ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ. ಪ್ರಕೃತಿ ವಿಕೋಪದಿಂದ ಸಾವಿನ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 

ಸೋಮವಾರ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಬುಲೆಟ್ ರೈಲುಗಳಲ್ಲಿ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜಪಾನ್‌ನ ಪ್ರಧಾನ ಮಂತ್ರಿ ಕಾರ್ಯಾಲಯವು ಹಲವಾರು ನಿರ್ದೇಶನಗಳನ್ನು ನೀಡಿದೆ.  

ಇದನ್ನೂ ಓದಿ : ಹೊಸ ವರ್ಷದ ಮೊದಲ ದಿನವೇ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ 

ಜಪಾನಿನ ಭಾರತೀಯ ರಾಯಭಾರ ಕಚೇರಿಯು ಜನವರಿ 1 ರಂದು ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಜಪಾನ್‌ನಲ್ಲಿ ಪ್ರಬಲ ಭೂಕಂಪ ಮತ್ತು ಸುನಾಮಿ ಎಚ್ಚರಿಕೆಯ ನಂತರ ಅಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News