Gun control bill: ಬಂದೂಕು ನಿಯಂತ್ರಣ ಮಸೂದೆಗೆ ಸಹಿ ಹಾಕಿದ ಜೋ ಬೈಡನ್

Gun control bill: ಯುಎಸ್ ಅಧ್ಯಕ್ಷ ಜೋ ಬೈಡನ್ ಶನಿವಾರ ಬಂದೂಕು ನಿಯಂತ್ರಣ ಮಸೂದೆಗೆ ಸಹಿ ಹಾಕಿದ್ದಾರೆ. 

Written by - Chetana Devarmani | Last Updated : Jun 26, 2022, 05:15 PM IST
  • ಯುಎಸ್ ಅಧ್ಯಕ್ಷ ಜೋ ಬೈಡನ್
  • ಬಂದೂಕು ನಿಯಂತ್ರಣ ಮಸೂದೆ
  • ಬಂದೂಕು ನಿಯಂತ್ರಣ ಮಸೂದೆಗೆ ಬೈಡನ್ ಸಹಿ
Gun control bill: ಬಂದೂಕು ನಿಯಂತ್ರಣ ಮಸೂದೆಗೆ ಸಹಿ ಹಾಕಿದ ಜೋ ಬೈಡನ್  title=
ಜೋ ಬೈಡನ್

ವಾಷಿಂಗ್ಟನ್ (ಯುಎಸ್): ಯುಎಸ್ ಅಧ್ಯಕ್ಷ ಜೋ ಬೈಡನ್ ಶನಿವಾರ ಬಂದೂಕು ನಿಯಂತ್ರಣ ಮಸೂದೆಗೆ ಸಹಿ ಹಾಕಿದ್ದಾರೆ. ಈ ಮಸೂದೆಗೆ ಅಮೆರಿಕದ ಕಾಂಗ್ರೆಸ್‌ನ ಉಭಯ ಸದನಗಳು (ಸಂಸತ್) ಶುಕ್ರವಾರವಷ್ಟೇ ಅನುಮೋದನೆ ನೀಡಿದ್ದವು. 

ಇದನ್ನೂ ಓದಿ:  ಭಾರತಕ್ಕೆ 4,393.70 ಕೋಟಿ ರೂ.ಸಾಲದ ಅನುಮೋದನೆ ನೀಡಿದ ವಿಶ್ವಬ್ಯಾಂಕ್

ಯುರೋಪಿನ ಎರಡು ಶೃಂಗಸಭೆಗಳಲ್ಲಿ ಭಾಗವಹಿಸಲು ವಾಷಿಂಗ್ಟನ್‌ನಿಂದ ಹೊರಡುವ ಮುನ್ನ ಬೈಡನ್‌ ಈ ಮಹತ್ವದ ಮಸೂದೆಗೆ ಸಹಿ ಹಾಕಿದ್ದಾರೆ. ‘ಗುಂಡಿನ ದಾಳಿಗೆ ಬಲಿಯಾದವರ ಕುಟುಂಬದವರು ನಮ್ಮಿಂದ ಏನನ್ನು ನಿರೀಕ್ಷಿಸಿದ್ದರೂ, ಅದನ್ನು ನಾವೀಗ ಮಾಡಿದ್ದೇವೆ’ ಎಂದು ಬೈಡನ್‌ ಹೇಳಿದ್ದಾರೆ.  

ಇತ್ತೀಚೆಗೆ ಅಮೆರಿಕದಲ್ಲಿ ಬಂದೂಕುಧಾರಿಗಳು ನಡೆಸಿದ ಸಾಮೂಹಿಕ ಗುಂಡಿನ ದಾಳಿಗಳಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿತು. ಮೇಲಿಂದ ಮೇಲೆ ಸಂಭವಿಸುತ್ತಿರುವ ಬಂದೂಕು ಹಿಂಸಾಚಾರದಿಂದ ಎಚ್ಚೆತ್ತ ಬೈಡನ್‌ ಸರ್ಕಾರ ಇದೀಗ ಈ ಮಸೂದೆಯನ್ನು ಜಾರಿಗೆ ತಂದಿದೆ. 

ಇದನ್ನೂ ಓದಿ:  ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡೋ 14 ನರ್ಸ್‌ಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News