ರಿಯೋ ಡಿ ಜನೆರಿಯೋ: ಬ್ರೆಜಿಲ್ ರಾಷ್ಟ್ರಪತಿ ಜೆಯರ್ ಬೋಲ್ಸೆನಾರೋ, ಪತ್ರಕರ್ತರಿಗೆ ಸಂಬಂಧಿಸಿದಂತೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪತ್ರಕರ್ತರು ತೀರಾ ಅಶಕ್ತರಾಗಿರುವ ಕಾರಣ ಅವರು ಕೊರೊನಾ ವೈರಸ್ ದಾಳಿಗೆ ಗುರಿಯಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಸೋಮವಾರ ಹಿಡಿಶಾಪ ಹಾಕಿದ್ದಾರೆ.
ಪತ್ರಕರ್ತರು ಅಥ್ಲೀಟ್ ಆಗಿರುವುದಿಲ್ಲ, ಅವರು ಅಶಕ್ತರಾಗಿರುತ್ತಾರೆ ಹಾಗೂ ಇದೇ ಕಾರಣದಿಂದ ಅವರು ಕೊವಿಡ್-19 ದಾಳಿಗೆ ಗುರಿಯಾಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಬೋಲ್ಸೆನಾರೋ ಹೇಳಿದ್ದಾರೆ. ಇದಕ್ಕೂ ಮೊದಲು ಭಾನುವಾರ ಪತ್ರಕರ್ತರೋಬ್ಬರಿಗೆ ಗುದ್ದುವುದಾಗಿ ಬೆದರಿಕೆ ನೀಡಿದ್ದರು. ಪತ್ನಿಯ ಮೇಲಿನ ಭ್ರಷ್ಟಾಚಾರದ ಆರೋಪಗಳ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಉದ್ರಿಕ್ತಗೊಂಡ ಅಧ್ಯಕ್ಷರು, ನಿಮ್ಮ ಮುಖಕ್ಕೆ ಗುದ್ದು ನೀಡಲು ನಾನು ಬಯಸುತ್ತೇನೆ ಎಂದಿದ್ದಾರೆ.
ದಕ್ಷಿಣಪಂತಿ ಯಾಗಿರುವ ಅಧ್ಯಕ್ಷ ಜೆಯರ್ ಬೋಲ್ಸೆನಾರೋ ಹಾಗೂ ಮಾಧ್ಯಮದವರ ಸಂಬಂಧ ಅಷ್ಟೊಂದು ಸರಿಯಾಗಿಲ್ಲ. ಕೆಲ ಆಯ್ದ ಪತ್ರಕರ್ತರೇ ಜೊತೆಗೆ ಮಾತ್ರ ಅವರು ಉತ್ತಮವಾಗಿ ವ್ಯವಹರಿಸುತ್ತಾರೆ. ಮಾಧ್ಯಮದವರ ಮೇಲೆ ಹರಿಹಾಯುವ ಅವರ ಬೆಂಬಲಿಗರ ಸಂಖ್ಯೆಯೂ ಕೂಡ ಕಡಿಮೆಯೇನಿಲ್ಲ. ಅವರ ಹಲವು ಸಮಾರಂಭಗಳು ಹಾಗೂ ಕಾರ್ಯಕ್ರಮಗಳಲ್ಲಿ ಅವರ ಬೆಂಬಲಿಗರು ಮಾಧ್ಯಮದವರನ್ನು ಗುರಿಯಾಗಿಸಿದ್ದಾರೆ.
ಸೋಮವಾರ ಮಾತನಾಡಿರುವ ರಾಸ್ಥ್ರಪತಿ ಬೋಲ್ಸೆನಾರೋ, Covid-19 ಅನ್ನು ಸೋಲಿಸುವ ವಿಷಯದ ಕುರಿತು ತಮ್ಮ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದಾರೆ. ಕೊರೊನಾ ಮಹಾಮಾರಿಯನ್ನು ತಾವು ಹೇಗೆ ಸೋಲಿಸಿರುವುದಾಗಿ ಅವರು ಮಾತನಾಡಿದ್ದಾರೆ. ತಾವೊರ್ವ ಅಥ್ಲೀಟ್ ಹಿನ್ನೆಲೆಯಿಂದ ಬಂದ ಕಾರಣ ಹಾಗೂ hydroxychloroquine ಬಳಕೆಯಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಎದುರಿಸಿರುವುದಾಗಿ ಹೇಳಿದ್ದಾರೆ. ಅಥ್ಲೀಟ್ ಹಿನ್ನೆಲೆ ತಮ್ಮನ್ನು ಕೊರೊನಾ ವಿರುದ್ಧ ಪ್ರತಿರೋಧಕತೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದ ವೇಳೆ ಪತ್ರಕರ್ತರನ್ನು ಗುರಿಯಾಗಿಸಿದ ಅವರು, ನಾನು ಅಥ್ಲೀಟ್ ಹಿನ್ನೆಲೆಯ ಮೂಲಕ ಕೋರೋನಾವನ್ನು ಮಣಿಸಿದೆ. ಆದರೆ, ನೀವು ಈ ರೀತಿ ಮಾಡುವುದು ಕಷ್ಟದ ಕೆಲಸ. ನೀವು ಅಶಕ್ತರಾಗಿದ್ದು, ನೀವು ಬದುಕುಳಿಯುವ ಇರುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಅಷ್ಟೇ ಅಲ್ಲ ಲೇಖನಿಯನ್ನು ಬಳಸಿ ಕೇವಲ ಕೇಡು ಮಾಡುವುದು ನಿಮಗೆ ತಿಳಿದಿದೆ. ಹೀಗಾಗಿ ಒಂದು ವೇಳೆ ನೀವೂ ಕೊರೊನಾಗೆ ಗುರಿಯಾದರೆ, ನೀವು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆಯಾಗಿದೆ.