Kabul Blast: ಕಾಬೂಲ್ ನ ಹೋಟೆಲ್ ವೊಂದರಲ್ಲಿ 26/11 ರೀತಿಯ ಉಗ್ರ ದಾಳಿ

Blast in Afghanistan: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಿನ ಸಂಖ್ಯೆಯ ಚೀನಾ ವ್ಯಾಪಾರಿಗಳು ಅಫ್ಘಾನಿಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಇದಲ್ಲದೆ ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸದೆಯೂ ಕೂಡ ಬಿಜಿಂಗ್ ತನ್ನ ರಾಯಭಾರಿ ಕಛೇರಿಯನ್ನು ಅಲ್ಲಿ ನಿರ್ವಹಿಸುತ್ತಿದೆ.  

Written by - Nitin Tabib | Last Updated : Dec 12, 2022, 06:57 PM IST
  • ಅಫ್ಘಾನಿಸ್ತಾನದ ಗಡಿ ಪ್ರದೇಶವಾದ ಸ್ಪಿನ್ ಬೋಲ್ಡಾಕ್‌ನಲ್ಲಿ ಮಾರ್ಟರ್ ದಾಳಿಯ ಒಂದು ದಿನದ ನಂತರ ಈ ದಾಳಿ ನಡೆದಿರುವುದು ಇಲ್ಲಿ ಉಲ್ಲೇಖನೀಯ.
  • ಸ್ಪಿನ್ ಬೋಲ್ಡಾಕ್ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ.
Kabul Blast: ಕಾಬೂಲ್ ನ ಹೋಟೆಲ್ ವೊಂದರಲ್ಲಿ 26/11 ರೀತಿಯ ಉಗ್ರ ದಾಳಿ title=
Terror Attack

Loud Blast in Afghanistan: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮುಂಬೈನ 26/11 ರೀತಿಯ ಭಯೋತ್ಪಾದಕ ದಾಳಿ ನಡೆದಿದೆ. ಭಯೋತ್ಪಾದಕರು ಮೊದಲು ಹೋಟೆಲ್‌ನ ಬಾಗಿಲನ್ನು ಸ್ಫೋಟಿಸಿದ್ದಾರೆ ಮತ್ತು ನಂತರ ಅವರು ಹೋಟೆಲ್‌ಗೆ ಪ್ರವೇಶಿಸಿದ್ದಾರೆ. ಇದಾದ ಬಳಿಕ, ಉಗ್ರರು ಕ್ಷಿಪ್ರ ಗುಂಡಿನ ದಾಳಿಯನ್ನು ಆರಂಭಿಸಿದ್ದಾರೆ, ಅದು ಇನ್ನೂ ಮುಂದುವರೆದಿದೆ. ಹೋಟೆಲ್‌ನಲ್ಲಿ ಎಷ್ಟು ಉಗ್ರರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅಫ್ಘಾನಿಸ್ತಾನ ಪಡೆಗಳು ಕೂಡ ಪ್ರತಿದಾಳಿ ಆರಂಭಿಸಿವೆ.

ಗುಂಡಿನ ದಾಳಿಯ ನಡುವೆ ಹೋಟೆಲ್‌ನಲ್ಲಿದ್ದ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಜಿಗಿಯುತ್ತಿದ್ದಾರೆ. ಅವರ ಜಿಗಿತದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ ಕಂಡುಬರುತ್ತವೆ. ಸ್ಫೋಟದ ಸ್ಥಳದಲ್ಲಿ ಗುಂಡಿನ ಸದ್ದು ಇನ್ನೂ ಕೇಳಿ ಬರುತ್ತಿದೆ. ಚೀನಾ ಉದ್ಯಮಿಗಳಲ್ಲಿ ಬಹಳ ಜನಪ್ರಿಯವಾಗಿರುವ ಈ ಅತಿಥಿ ಗೃಹದ ಬಳಿ ಸ್ಫೋಟ ಸಂಭವಿಸಿದೆ. ಮಾಹಿತಿ ಪ್ರಕಾರ, ಸ್ಫೋಟದ ನಂತರ ಹೋಟೆಲ್ ಪ್ರವೇಶಿಸಿದ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಸ್ಥಳೀಯ ಭಯೋತ್ಪಾದಕರು ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ದಾಳಿಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ
ದಾಳಿಕೋರರಿಂದ ದಾಳಿಗೊಳಗಾದ ಹೋಟೆಲ್ ಒಂದು ಬಹುಮಹಡಿ ಸಂಕೀರ್ಣವಾಗಿದೆ. ಮೂಲಗಳ ಪ್ರಕಾರ, ಸ್ಫೋಟದ ನಂತರ ಅಪರಿಚಿತ ಸಂಖ್ಯೆಯ ದಾಳಿಕೋರರು ಹೋಟೆಲ್‌ಗೆ ಪ್ರವೇಶಿಸಿದ್ದಾರೆ. ತಾಲಿಬಾನ್ ಸರ್ಕಾರದ ವಿಶೇಷ ತಂಡಗಳು ಸ್ಥಳಕ್ಕೆ ತಲುಪಿವೆ. ಗುಂಡಿನ ದಾಳಿ ಮುಂದುವರಿದಿದೆ. ಈ ದಾಳಿಯ ಹೊಣೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ. ಯಾವ ಭಯೋತ್ಪಾದಕ ಸಂಘಟನೆ ಈ ದಾಳಿ ನಡೆಸಿದೆ ಎಂದು ಹೇಳುವುದು ಕಷ್ಟ ಎನ್ನಲಾಗಿದೆ.

ಸ್ಫೋಟದ ಬಳಿಕ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿಯೊಬ್ಬರು, 'ಇದು ತುಂಬಾ ದೊಡ್ಡ ಸ್ಫೋಟ ಮತ್ತು ತೀಕ್ಷ್ಣವಾದ ಗುಂಡಿನ ದಾಳಿಯಾಗಿದೆ' ಎಂದು ಹೇಳಿದ್ದಾರೆ. ಆದರೆ, ಈ ಸ್ಫೋಟದ ಬಗ್ಗೆ ಇದುವರೆಗೆ ಯಾವುದೇ ಅಧಿಕಾರಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಾಹಿತಿಯ ಪ್ರಕಾರ, ಕಾಬೂಲ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾದ ಶೆಹರ್-ಎ-ನೌನಲ್ಲಿ ಈ ಸ್ಫೋಟ ಸಂಭವಿಸಿದೆ.

ಸ್ಪಿನ್ ಬೋಲ್ಡಾಕ್‌ನಲ್ಲಿ ಒಂದು ದಿನದ ಹಿಂದೆ ದಾಳಿ ನಡೆದಿತ್ತು
ಅಫ್ಘಾನಿಸ್ತಾನದ ಗಡಿ ಪ್ರದೇಶವಾದ ಸ್ಪಿನ್ ಬೋಲ್ಡಾಕ್‌ನಲ್ಲಿ ಮಾರ್ಟರ್ ದಾಳಿಯ ಒಂದು ದಿನದ ನಂತರ ಈ ದಾಳಿ ನಡೆದಿರುವುದು ಇಲ್ಲಿ ಉಲ್ಲೇಖನೀಯ. ಸ್ಪಿನ್ ಬೋಲ್ಡಾಕ್ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಇಸ್ಲಾಮಿಕ್ ಎಮಿರೇಟ್ ಮತ್ತು ಪಾಕಿಸ್ತಾನ ಸೇನೆಯ ನಡುವಿನ ಸಂಘರ್ಷ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ-Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ

ಇತ್ತೀಚಿನ ದಿನಗಳಲ್ಲಿ, ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳು ಅಧಿಕಾರಕ್ಕೆ ಮರಳಿದ ನಂತರ, ಹೆಚ್ಚಿನ ಸಂಖ್ಯೆಯ ಚೀನಾದ ಉದ್ಯಮಿಗಳು ಅಫ್ಘಾನಿಸ್ತಾನಕ್ಕೆ ಬರುತ್ತಿದ್ದಾರೆ. ಅಫ್ಘಾನಿಸ್ತಾನದೊಂದಿಗೆ 76 ಕಿಮೀ ಗಡಿಯನ್ನು ಹಂಚಿಕೊಂಡಿರುವ ಚೀನಾ, ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸಿಲ್ಲ. ಇದರ ಹೊರತಾಗಿಯೂ, ಅಲ್ಲಿ ಸಂಪೂರ್ಣ ರಾಜತಾಂತ್ರಿಕ ಅಸ್ತಿತ್ವವನ್ನು ಉಳಿಸಿಕೊಂಡಿರುವ ಕೆಲವೇ ದೇಶಗಳಲ್ಲಿ ಚೀನಾ ಕೂಡ ಒಂದು. ಬೀಜಿಂಗ್ ಅಲ್ಲಿ ತನ್ನ ರಾಯಭಾರ ಕಚೇರಿಯನ್ನು ಸಹ ಸ್ಥಾಪಿಸಿದೆ.

ಇದನ್ನೂ ಓದಿ-Business Idea: ಹೊಸ ವರ್ಷದಲ್ಲಿ ಕೇವಲ ರೂ.50 ಸಾವಿರ ಹೂಡಿಕೆ ಮಾಡಿ ಈ ಉದ್ಯಮ ಆರಂಭಿಸಿ, ಕೈತುಂಬಾ ಸಂಪಾದನೆ ಮಾಡಿ

ಅಧಿಕಾರ ಬದಲಾದ ನಂತರ, ತಾಲಿಬಾನ್ ಆಡಳಿತವು ರಾಷ್ಟ್ರೀಯ ಭದ್ರತೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಿರಂತರವಾಗಿ ಹೇಳುತ್ತಿದೆ, ಆದರೆ ಇದರ ನಂತರವೂ ಬಾಂಬ್ ಸ್ಫೋಟ ಮತ್ತು ಗುಂಡಿನ ಘಟನೆಗಳು ಅಲ್ಲಿ ನಿಲ್ಲುತ್ತಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News