ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಭಾರತ ಸರ್ಕಾರ ವಿಭಜಿಸಿದ ನಂತರ ಕಾಶ್ಮೀರದ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ಪಾಕಿಸ್ತಾನಿ ಕಾರ್ಯಕರ್ತೆ ಮಲಾಲಾ ಯೂಸಫ್‌ಜೈ ಆತಂಕ ವ್ಯಕ್ತಪಡಿಸಿದ್ದಾರೆ.
'ನಾನು ನನ್ನ ತಂದೆ ಹಾಗೂ ನನ್ನ ಅಜ್ಜಿಯವರು ಚಿಕ್ಕಂದಿನಿಂದಿರುವಾಗಲೇ ಕಾಶ್ಮೀರದ ಜನರು ಸಂಘರ್ಷದಲ್ಲಿ ಬದುಕುತ್ತಿದ್ದಾರೆ. ನನಗೆ ಇಂದು ಕಾಶ್ಮೀರಿ ಮಕ್ಕಳು, ಮಹಿಳೆಯರು ಹಿಂಸೆ ಮತ್ತು ಸಂಘರ್ಷದಲ್ಲಿ ಜೀವವನ್ನು ಕಳೆದುಕೊಳ್ಳುವ ಬಗ್ಗೆ ಚಿಂತೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 22 ರ ಹರೆಯದ ಮಲಾಲಾ ಯೂಸಫ್‌ಜೈ ಅವರು ಈ ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು.
The people of Kashmir have lived in conflict since I was a child, since my mother and father were children, since my grandparents were young. pic.twitter.com/Qdq0j2hyN9
— Malala (@Malala) August 8, 2019
ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕಿ ಐದು ಅಂಶಗಳ ಯೋಜನೆಯನ್ನು ಘೋಷಿಸಿದ ನಂತರ ಮಲಾಲಾ ಪ್ರತಿಕ್ರಿಯೆ ಬಂದಿದೆ. ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ತಗೆದುಕೊಂಡ ನಿರ್ಧಾರದ ನಂತರ ಪಾಕ್ ಭಾರತದೊಂದಿಗೆ ತನ್ನ ಸಂಬಂಧವನ್ನು ಕಡಿತಗೊಳಿಸುವುದು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದು. ಕಾಶ್ಮೀರ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮನವಿ ಮಾಡುವ ನಿರ್ಧಾರವನ್ನು ಪಾಕ್ ತೆಗೆದುಕೊಂಡಿತು.
2012 ರ ಅಕ್ಟೋಬರ್‌ನಲ್ಲಿ ಬಂದೂಕುಧಾರಿಯೊಬ್ಬ ಮಲಾಲಾ ಯೂಸಫ್ ಜೈ ಇದ್ದ ಶಾಲಾ ಬಸ್ ನಲ್ಲಿ ಹತ್ತಿ ಮಲಾಲಾ ಯಾರು ?ಎಂದು ಗುಂಡು ಹಾರಿಸಿದ್ದನು. ಇದಾದ ನಂತರ ಮಲಾಲಾ ಅವರು ಬಾಲಕಿಯರ ಶಿಕ್ಷಣ ಮತ್ತು ಮಾನವ ಹಕ್ಕುಗಳ ಜಾಗತಿಕ ಪ್ರತಿನಿಧಿಯಾಗಿ 2014 ರಲ್ಲಿ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.