Viral Video: ಜಗಳದ ನಡುವೆಯೇ ಹಾವನ್ನು ಹಗ್ಗದಂತೆ ಬಳಸಿ ಎದುರಾಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಭೂಪ... ವಿಡಿಯೋ ನೋಡಿ

Trending Video: ಈ ವಿಡಿಯೋ ನೋಡಿದ್ರೆ ನೀವೂ ಕೂಡ ಒಂದು ಕ್ಷಣ ನಿಬ್ಬೆರಬಾಗುವಿರಿ. ಏಕೆಂದರೆ ಇದರಲ್ಲಿ ಹಾವಿನ ಸ್ಥಿತಿ ಕಂಡು ನೀವೂ ಕೂಡ ಕನಿಕರ ವ್ಯಕ್ತಪಡಿಸಿದರೆ. ಇನ್ನೊಂದೆಡೆ  ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವೂ ಅಪಾಯದಲ್ಲಿರುವುದನ್ನು ನೀವು ನೋಡಬಹುದು.  

Written by - Nitin Tabib | Last Updated : May 15, 2023, 08:31 PM IST
  • ಪೊಲೀಸ್ ಕಾರನ್ನು ನೋಡಿದ ತಕ್ಷಣ ದಾಳಿ ನಡೆಸುತ್ತಿದ್ದ ವ್ಯಕ್ತಿ ಹಾವನ್ನು ಎಸೆದು ಶರಣಾಗತಿಯ ಭಂಗಿಗೆ ಜಾರಿದ್ದಾನೆ.
  • ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
  • ಇಬ್ಬರೂ ಪರಸ್ಪರ ಮೊದಲೇ ಪರಿಚಿತರಾಗಿದ್ದರು ಎನ್ನಲಾಗುತ್ತಿದೆ.
Viral Video: ಜಗಳದ ನಡುವೆಯೇ ಹಾವನ್ನು ಹಗ್ಗದಂತೆ ಬಳಸಿ ಎದುರಾಳಿ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಭೂಪ... ವಿಡಿಯೋ ನೋಡಿ title=
ವೈರಲ್ ವೀಡಿಯೋ

Shocking Video:  ನೀವು ಸಾಮಾಜಿಕ ಜಾಲತಾಣಗಳಲ್ಲಿ ನೀವು ಹಾವಿನ ಹಲವಾರು ವಿಡಿಯೋಗಳನ್ನು ನೋಡಿರಬಹುದು ಮತ್ತು ಹಾವುಗಳು ಜನರನ್ನು ಹೇಗೆ ಕಚ್ಚುತ್ತವೆ ಎಂಬುದನ್ನು ಸಹ ನೋಡಿರಬಹುದು. ಆದರೆ ಹಾವನ್ನು ಯಾರಾದರೂ ಬೇರೆಯವರನ್ನು ಥಳಿಸಲು ಬಳಸಿದ್ದನ್ನು ನೀವು ನೋಡಿದ್ದೀರಾ? ಹೌದು ಇಂತಹ ಭಯಾನಕ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ವ್ಯಕ್ತಿ ಈ ಘಟನೆಗೆ ಹೇಗೆ ಕಾರನನಾಗಿದ್ದಾನೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

 ಈ ಘಟನೆ ಕೆನಡಾದ ಟೊರೊಂಟೊ ನಗರದಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ ಇಂತಹ ಘಟನೆ ಈ ಹಿಂದೆಯೂ ನಡೆದಿದೆ. ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಬೀದಿಯಲ್ಲಿ ಜಗಳ ನಡೆದಿದೆ. ಈ ಜಗಳ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಜಗಳದಲ್ಲಿರುವ ವ್ಯಕ್ತಿಯೊಬ್ಬನ ಕೈಯಲ್ಲಿ ಏಕಾಏಕಿ ಹಾವೊಂದು ಕಾಣಿಸಿಕೊಂಡಿದೆ. ಮತ್ತು ಆ ವ್ಯಕ್ತಿಯು ಆ ಹಾವಿನಿಂದ ಇನ್ನೊಬ್ಬ ವ್ಯಕ್ತಿಯನ್ನು ಹೊಡೆಯುತ್ತಿದ್ದಾನೆ ಎಂಬುದನ್ನೂ ವಿಡಿಯೋ ನೋಡಿದಾಗ ಮಾತ್ರ ಗಮನಕ್ಕೆ ಬಂದಿದೆ.

ಇದನ್ನೂ ಓದಿ-Inflation: ಕಳೆದ ಮೂರು ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟಕ್ಕೆ ಜಾರಿಗೆ ಹಣದುಬ್ಬರ

ಜಗಳವಾಡುವಾಗ ಒಬ್ಬ ವ್ಯಕ್ತಿ ಕಟ್ಟಿಗೆ ಅಥವಾ ಕೋಲು ಬಳಸುತ್ತಿರುವ ರೀತಿಯಲ್ಲಿ ಆ ವ್ಯಕ್ತಿ ಹಾವನ್ನು ಹಗ್ಗ ಎಂದು ಪರಿಗಣಿಸಿ, ಚಾವಟಿಯಂತೆ ಬೇರೆ ವ್ಯಕ್ತಿಯ ಮೇಲೆ ದಾಳಿ ಇಡುತ್ತಿದ್ದಾನೆ.  ಇದರಿಂದ ಹೊಡೆತಕ್ಕೆ ಒಳಗಾದ ವ್ಯಕ್ತಿಗೆ ಕಡಿಮೆ ನೋವಾಗಿರಬಹುದು, ಆದರೆ ಹಾವು ಆತನಿಗೆ ಕಚ್ಚಿದ್ದರೆ, ನಿಶ್ಚಿತವಾಗಿ ಆಟ ಸಾವನ್ನಪ್ಪುತ್ತಿದ್ದ. ವೀಡಿಯೋದ ಕೊನೆಯ ಭಾಗದಲ್ಲಿ ಜಗಳದ ನಡುವೆಯೇ ಪೊಲೀಸ್ ವಾಹನ ಅಲ್ಲಿಗೆ ಬರುವುದನ್ನು ನೀವು ನೋಡಬಹುದು ಮತ್ತು ಇಬ್ಬರು ತಮ್ಮ ಜಗಳವನ್ನು ನಿಲ್ಲಿಸಿದ್ದಾರೆ. 

ಇದನ್ನೂ ಓದಿ-Karnataka Election Results 2023 ಗೆ ಕರಗಿದ ದೀದಿ ದಿಲ್, ಕಾಂಗ್ರೆಸ್ ಬಗ್ಗೆ ಹೇಳಿದ್ದೇನು?

ಪೊಲೀಸ್ ಕಾರನ್ನು ನೋಡಿದ ತಕ್ಷಣ ದಾಳಿ ನಡೆಸುತ್ತಿದ್ದ ವ್ಯಕ್ತಿ ಹಾವನ್ನು ಎಸೆದು ಶರಣಾಗತಿಯ ಭಂಗಿಗೆ ಜಾರಿದ್ದಾನೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಇಬ್ಬರೂ ಪರಸ್ಪರ ಮೊದಲೇ ಪರಿಚಿತರಾಗಿದ್ದರು ಎನ್ನಲಾಗುತ್ತಿದೆ. ಇದೇ ವೇಳೆ ಮತ್ತೊಂದು ಮಾಧ್ಯಮದ ವರದಿಯ ಪ್ರಕಾರ ಇಬ್ಬರೂ ಪಾನಮತ್ತರಾಗಿದ್ದರು ಮತ್ತು ಅವರಲ್ಲಿನ ಓರ್ವ ವ್ಯಕ್ತಿ ಹಾವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News