ಮೋದಿ ನನಗಷ್ಟೇ ಫ್ರೆಂಡ್ ಅಲ್ಲ ಇವಾಂಕಾಗೂ ಫ್ರೆಂಡ್-ಡೊನಾಲ್ಡ್ ಟ್ರಂಪ್

ಅಮೆರಿಕಾದ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ  ಭಾರತೀಯ ಅಮೆರಿಕನ್ನರೋಡನೆ ದೀಪಾವಳಿ ಆಚರಿಸುತ್ತಾ ಮೋದಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹಕ್ಕೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

Last Updated : Nov 14, 2018, 09:01 PM IST
ಮೋದಿ ನನಗಷ್ಟೇ ಫ್ರೆಂಡ್ ಅಲ್ಲ ಇವಾಂಕಾಗೂ ಫ್ರೆಂಡ್-ಡೊನಾಲ್ಡ್ ಟ್ರಂಪ್ title=

ನವದೆಹಲಿ: ಅಮೆರಿಕಾದ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ  ಭಾರತೀಯ ಅಮೆರಿಕನ್ನರೋಡನೆ ದೀಪಾವಳಿ ಆಚರಿಸುತ್ತಾ ಮೋದಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸ್ನೇಹಕ್ಕೆ ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

.
ಅಮೇರಿಕಾ ಭಾರತದೊಂದಿಗೆ ಉತ್ತಮ  ಸಂಬಂಧವನ್ನು ಹೊಂದಿದೆ ಎಂದು ಶ್ವೇತ ಭವನದ ಐತಿಹಾಸಿಕ ರೋಸ್‌ವೆಲ್ಟ್‌ ಕೊಠಡಿಯಲ್ಲಿ ದೀಪಾವಳಿ ಆಚರಣೆಗೂ ಮುನ್ನ ತಿಳಿಸಿದರು. ವಿಶೇಷವೆಂದರೆ ಡೊನಾಲ್ಡ್ ಟ್ರಂಪ್‌ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ಬಾರಿಗೆ ಶ್ವೇತ ಭವನದಲ್ಲಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಇದೆ ಸಂದರ್ಭದಲ್ಲಿ  ಭಾರತೀಯ ಅಮೇರಿಕಾದ ಅಧಿಕಾರಿಗಳು ಸೇರಿದಂತೆ ಒಟ್ಟು 24 ಜನರು ದೀಪಾವಳಿ ಆಚರಣೆಯಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ. ಟ್ರಂಪ್ ಅವರ ಪುತ್ರಿಯೂ ಕೂಡ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಇದೆ ವೇಳೆ  ಟ್ರಂಪ್ ತಮ್ಮ ಮತ್ತು  ಪ್ರಧಾನಿ ಮೋದಿ ನಡುವಿನ ಸ್ನೇಹತ್ವದ ಕುರಿತು ಮಾತನಾಡುತ್ತಾ "ಮೋದಿ ಅವರು ನನ್ನ ಸ್ನೇಹಿತ ಮತ್ತು ಇದೀಗ ಇವಾಂಕಾಗೂ ಸ್ನೇಹಿತರಾಗಿದ್ದಾರೆ" ಎಂದು ತಿಳಿಸಿದರು 

Trending News