Moving House : ಇದಕ್ಕಿದ್ದಂತೆ ಚಲಿಸಲಾರಂಭಿಸಿತು ಎರಡು ಅಂತಸ್ತಿನ ಹಳೆಯ ಬಂಗಲೆ.! ಏನದರ ರಹಸ್ಯ.!?

ನೀವು ಹಾರರ್ ಫಿಲಂಗಳನ್ನು ನೋಡಿಯೇ ಇರುತ್ತೀರಿ. ಇದು ಒಂದು ರೀತಿ ಹಾರರ್ ಫಿಲಂಗಳನ್ನು  ನೆನಪಿಸುವಂಥಹ ಸ್ಟೋರಿ. ಜನ ನೋಡ್ತ ನೋಡ್ತಾನೆ ಎರಡು ಅಂತಸ್ತಿನ ಒಂದು ಹಳೆಯ ಬಂಗಲೆ ಚಲಿಸಲಾರಂಭಿಸುತ್ತದೆ. ಸೇರಿದ್ದ ಜನರಿಗೆ ಸಿಕ್ಕಾಪಟ್ಟೆ ಶಾಕ್.

Written by - Ranjitha R K | Last Updated : Feb 23, 2021, 12:49 PM IST
  • ಇದು ಒಂದು ರೀತಿ ಹಾರರ್ ಫಿಲಂಗಳನ್ನು ನೆನಪಿಸುವಂಥಹ ಸ್ಟೋರಿ.
  • ಜನ ನೋಡ್ತ ನೋಡ್ತಾನೆ ಎರಡು ಅಂತಸ್ತಿನ ಒಂದು ಹಳೆಯ ಬಂಗಲೆ ಚಲಿಸಲಾರಂಭಿಸುತ್ತದೆ
  • ಚಲಿಸುವ ಮನೆಯ ಅಸಲಿಯತ್ತೇನು.? ಓದಿ
 Moving House : ಇದಕ್ಕಿದ್ದಂತೆ ಚಲಿಸಲಾರಂಭಿಸಿತು ಎರಡು ಅಂತಸ್ತಿನ ಹಳೆಯ ಬಂಗಲೆ.! ಏನದರ ರಹಸ್ಯ.!? title=
ಚಲಿಸುವ ಮನೆಯ ಅಸಲಿಯತ್ತೇನು.? (Photo twitter)

ಸ್ಯಾನ್ ಫ್ರಾನ್ಸಿಸ್ಕೋ: ನೀವು ಹಾರರ್ ಫಿಲಂಗಳನ್ನು (Horror Film) ನೋಡಿಯೇ ಇರುತ್ತೀರಿ. ಇದು ಒಂದು ರೀತಿ ಹಾರರ್ ಫಿಲಂಗಳನ್ನು  ನೆನಪಿಸುವಂಥಹ ಸ್ಟೋರಿ. ಜನ ನೋಡ್ತ ನೋಡ್ತಾನೆ ಎರಡು ಅಂತಸ್ತಿನ ಒಂದು ಹಳೆಯ ಬಂಗಲೆ ಚಲಿಸಲಾರಂಭಿಸುತ್ತದೆ. ಸೇರಿದ್ದ ಜನರಿಗೆ ಸಿಕ್ಕಾಪಟ್ಟೆ ಶಾಕ್.  ಭವ್ಯ ಬಂಗಲೆ ಚಲಿಸುವ ದೃಶ್ಯವನ್ನು ನೀವೆಂದಿಗೂ ನೋಡಿರಲು ಸಾಧ್ಯವೇ ಇಲ್ಲ. ರಸ್ತೆ ಮೇಲೆ ಮನೆ ಚಲಿಸುವುದೆಂದರೆ ಏನು..? ಕೆಲವರು ಇದು ಭೂತಚೇಷ್ಟೆ ಇರಬಹುದೇ ಎಂದು ಯೋಚನೆ ಮಾಡಿದ್ದರು. ಕೆಲವು ಜನ ಸಿಕ್ಕಿದ್ದೆ ಛಾನ್ಸ್ ಅಂತ ಆ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದೇ ಬಿಟ್ಟರು. ನೀವು ಆ ವಿಡಿಯೋ (Viral Video) ನೋಡಿ. ಇಲ್ಲಿದೆ. 

ಚಲಿಸುವ ಮನೆಯ ಅಸಲಿಯತ್ತೇನು.? :
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ (San Francisco) ಈ ಬಂಗಲೆ 139 ವರ್ಷ ಹಳೆಯದ್ದು. ಇಂಥಹ ಮನೆಯನ್ನು ಅಲ್ಲಿ ವಿಕ್ಟೋರಿಯನ್ ಹೌಸ್ (Victorian House) ಎಂದು ಕರೆಯುತ್ತಾರೆ. ಕೆಲವೊಂದು ಅಭಿವೃದ್ಧಿ ಕೆಲಸಕ್ಕಾಗಿ ಸರ್ಕಾರ ಆ ಮನೆಯನ್ನು ಅಲ್ಲಿ ಕೆಡವಲು ಪ್ಲಾನ್ ಮಾಡಿತ್ತು. ಆದರೆ, ಮನೆ ಮಾಲೀಕನಿಗೆ ಸುತಾರಾಂ ಇಷ್ಟ ಇರಲಿಲ್ಲ. ಅದು ಆತನ ಅಚ್ಚುಮೆಚ್ಚಿನ ಮನೆ. ಹಲವಾರು ನೆನಪುಗಳು ಆ ಮನೆಯಲ್ಲಿತ್ತು. ಮನೆ ಮಾಲಿಕ ಅದನ್ನೆಲ್ಲಾ ಕೆಡವಲು ತಯಾರಿರಲಿಲ್ಲ. ಮನೆ (House) ಕೆಡವುವ ಬದಲು,  ಆತ ಮನೆಯನ್ನೇ ಶಿಫ್ಟ್ (Shift) ಮಾಡುವ ಪ್ಲಾನ್ ಮಾಡಿದ.

 

ಇದನ್ನೂ ಓದಿ : ಕಳೆದು ಹೋಗಿದ್ದ ಉಂಗುರ ಸಿಕ್ಕಿದ್ದು 10 ಅಡಿ ಎತ್ತರದ ಕಸದ ರಾಶಿಯಲ್ಲಿ..!
 
ಮನೆ ಮೇಲಕ್ಕೆತ್ತಿ ಶಿಫ್ಟ್ ಮಾಡೋದು ಅಷ್ಟು ಸುಲಭ ಇರಲಿಲ್ಲ :
ಈ ಕೆಲಸಕ್ಕೆ ನುರಿತ ಹೌಸ್ ಮೂವರ್ಸ್ ನೆರವು ಪಡೆಯಲಾಗಿತ್ತು. ಈ ಹೌಸ್ ಮೂವರ್ಸ್ (House Movers) ಮನೆಯನ್ನೆತ್ತಿ ಸುರಕ್ಷಿತವಾಗಿ ಶಿಫ್ಟ್ ಮಾಡುವ ಕೆಲಸ ಮಾಡುತ್ತಾರೆ. ಮನೆ ಶಿಫ್ಟ್ ಮಾಡಲು 15 ಏಜೆನ್ಸಿಗಳಿಂದ (Agency) ಅನುಮತಿ ಪಡೆಯಲಾಗಿತ್ತು. ಬಳಿಕ ದೊಡ್ಡ ಟ್ರಕ್ನಲ್ಲಿ ಮನೆಯನ್ನು ಲೋಡ್ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ ಸಾಕಷ್ಟು ಪರಿಣಿತರು ಪಾಲ್ಗೊಂಡಿದ್ದರು. ಇದರ ಯೋಜನೆ ರೂಪಿಸಲು   ಕೆಲವೊಂದು ವರ್ಷವೇ  ತಗುಲಿತ್ತು. ಮನೆ ಶಿಫ್ಟ್ (House shift) ಮಾಡುವಾಗ ರಸ್ತೆ ಖಾಲಿ ಮಾಡಲಾಗಿತ್ತು. ಟ್ರಾಫಿಕ್ ಸಿಗ್ನಲ್ (Traffic )ಬದಲಾಯಿಸಲಾಗಿತ್ತು. ಇಷ್ಟೆಲ್ಲಾ ಆದ ಮೇಲೆಯೇ ಈ ಮನೆ ರಸ್ತೆ ಮೇಲೆ ಚಲಿಸಿದ್ದು.!

ಇದನ್ನೂ ಓದಿ : Saudi Arabia : ಮಹಿಳೆಯರಿಗೆ ಸಿಗಲಿದೆ ಮತ್ತೊಂದು ಗುಡ್ ನ್ಯೂಸ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News