ಸಿಯೋಲ್: New Technology To Detect Omicron - ಕೊರಿಯಾದ ಸಂಶೋಧಕರು ಓಮಿಕ್ರಾನ್ ರೂಪಾಂತರಗಳನ್ನು ಗುರುತಿಸಲು ಮಾಲಿಕ್ಯುಲರ್ ಡಯಾಗ್ನೋಸ್ಟಿಕ್ ತಂತ್ರಜ್ಞಾನವನ್ನು (Molecular Dignostic Technology) ಅಭಿವೃದ್ಧಿಪಡಿಸಿದ್ದಾರೆ. 20 ನಿಮಿಷಗಳಲ್ಲಿ ಓರ್ವ ವ್ಯಕ್ತಿಗೆ ಒಮಿಕ್ರಾನ್ ವೈರಸ್ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದು ಇದರಿಂದ ಗೊತ್ತಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಶೋಧನೆಯು ಇತ್ತೀಚಿಗೆ ಪೂರ್ಣಗೊಂಡಿದೆ. ಆದರೂ ಇದು ವಿಶ್ವಾದ್ಯಂತ ತಲುಪಲು ತುಂಬಾ ಸಮಯ ಬೇಕಾಗಲಿದೆ. ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಲೀ ಜಂಗ್-ವೂಕ್ ನೇತೃತ್ವದ ಸಂಶೋಧನಾ ತಂಡವು ಕೇವಲ 20-30 ನಿಮಿಷಗಳಲ್ಲಿ ಓಮಿಕ್ರಾನ್ ರೂಪಾಂತರಗಳನ್ನು ಪತ್ತೆಹಚ್ಚುವ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಮತ್ತು ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು POSTECH ಇದೆ ತಿಂಗಳ 10ನೇ ತಾರೀಖಿನಂದು ಘೋಷಿಸಿದೆ.
ಸಂಶೋಧನಾ ತಂಡದ ಪ್ರಕಾರ, ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವು ಸಿಂಗಲ್ -ನ್ಯೂಕ್ಲಿಯೊಟೈಡ್ ಆಧಾರದ ಮೇಲೆ ಮ್ಯೂಟೆಶನ್ ಗಳನ್ನು ಪ್ರತ್ಯೇಕಿಸುತ್ತದೆ. ಆದ್ದರಿಂದ ಇದು RT-PCR ಮೂಲಕ ಪತ್ತೆಹಚ್ಚಲು ಕಷ್ಟಕರವಾದ 'ಸ್ಟೆಲ್ತ್ ಓಮಿಕ್ರಾನ್'ಗಳನ್ನು ಇದು ಪತ್ತೆ ಮಾಡುತ್ತದೆ. ಕೊರಿಯಾದಲ್ಲಿನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಪ್ರಸ್ತುತ COVID-19 ರೂಪಾಂತರಗಳನ್ನು ಪತ್ತೆಹಚ್ಚಲು ಪೂರ್ಣ ಜೀನೋಮ್ ಅನುಕ್ರಮ, ಟಾರ್ಗೆಟ್ DNA (ಸ್ಪೈಕ್ ಪ್ರೋಟೀನ್ ತರಹದ ರೂಪಾಂತರಗಳು) ವಿಶ್ಲೇಷಣೆ ಮತ್ತು RT-PCR ಪರೀಕ್ಷೆ ಎಂಬ ಮೂರು ವಿಧಾನಗಳನ್ನು ಬಳಸುತ್ತಿವೆ.
ಇದನ್ನೂ ಓದಿ-Good News: Omicron ಆತಂಕದ ನಡುವೆ ಇಲ್ಲಿದೆ ಒಂದು ಭಾರಿ ನೆಮ್ಮದಿಯ ಸುದ್ದಿ
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಡೆಲ್ಟಾ ರೂಪಾಂತರದ ಸಂದರ್ಭದಲ್ಲಿ, ಇದನ್ನು RT-PCR ಪರೀಕ್ಷೆಯಿಂದ ಕಂಡುಹಿಡಿಯಬಹುದು, ಆದರೆ ಇದು Omicron ನಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ. ಈ ಬಾರಿ ಹೊಸದಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನವು ಡಿಎನ್‌ಎ ಅಥವಾ ಆರ್‌ಎನ್‌ಎ ಅನುಕ್ರಮ ಪ್ರಕ್ರಿಯೇಯಾಗಿಲ್ಲ. ಆದರೆ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವಾಗಿದೆ. ಪ್ರಸ್ತುತ ತಂತ್ರಜ್ಞಾನವು ಕಡಿಮೆ ಸಂಖ್ಯೆಯ ವೈರಸ್‌ಗಳನ್ನು ಮಾತ್ರ ಪತ್ತೆ ಮಾಡುತ್ತದೆ, ಆದರೆ ನ್ಯೂಕ್ಲಿಯಿಕ್ ಆಸಿಡ್-ಬೈಂಡಿಂಗ್ ಪ್ರತಿಕ್ರಿಯೆಯ ಕಾರಣವನ್ನು ನಿರ್ಧರಿಸಲು ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ ಇದರಿಂದ COVID-19 RNA ಇರುವಾಗ ಅದನ್ನು ತ್ವರಿತವಾಗಿ ಕಂಡುಹಿಡಿಯಬಹುದು.
ಪ್ರೊಫೆಸರ್ ಲೀ ಪ್ರಕಾರ, RT-PCR ಪರೀಕ್ಷೆಯು ಓಮಿಕ್ರಾನ್ ಬಳಿ N ವಂಶವಾಹಿಯನ್ನು ಪತ್ತೆ ಮಾಡುತ್ತದೆ, ಆದರೆ ಇದು N ಜೀನ್ ಪ್ರದೇಶದಲ್ಲಿ ದುರ್ಬಲವಾಗಿರುತ್ತದೆ. 'ಸ್ಟೆಲ್ತ್ ಓಮಿಕ್ರಾನ್' ಪ್ರಕರಣದಲ್ಲಿ, N ಮತ್ತು S ವಂಶವಾಹಿಗಳೆರಡೂ ಧನಾತ್ಮಕವಾಗಿ ಕಂಡುಬಂದಿದ್ದು, ಇದು ಇತರ ಪ್ರಕಾರಗಳಿಂದ ಪ್ರತ್ಯೇಕಿಸಲು ಕಷ್ಟವಾಗುತ್ತದೆ. RT-PCRನಿಂದ ಪ್ರತ್ಯೇಕವಾಗಿ ಕೆಲಸ ಮಾಡುವಾಗ ಆಣ್ವಿಕ ರೋಗನಿರ್ಣಯ ತಂತ್ರಜ್ಞಾನವು ಓಮಿಕ್ರಾನ್ ಅನ್ನು ಯಶಸ್ವಿಯಾಗಿ ಪತ್ತೆ ಮಾಡುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.