ಸಿಯೋಲ್ (ಉತ್ತರ ಕೋರಿಯಾ): ಜಪಾನ್ ನಲ್ಲಿ ಕಳೆದ ಮೇ ತಿಂಗಳಲ್ಲಿ ಕ್ವಾಡ್ ನಾಯಕರ ಸಭೆ ಜರುಗಿತು. ಇದೊಂದು ಮಹತ್ವದ ಸಭೆ ಆಗಿತ್ತು. ಇದೀಗ ವಿಚಾರ ಏನೆಂದರೆ ಈ ಸಭೆಯ ಬಳಿಕ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಯಾರು ಈ ಭಾರತೀಯ ಮೂಲದ ಹರಿಣಿ ಲೋಗನ್?
ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಮತ್ತೆ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದ್ದು, ತನ್ನ ಪೂರ್ವ ಕರಾವಳಿಯಲ್ಲಿ ಕಡಿಮೆ ವ್ಯಾಪ್ತಿಯ 8 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉತ್ತರ ಕೋರಿಯಾ ಪರೀಕ್ಷಿಸಿದೆ.
ದಕ್ಷಿಣ ಕೋರಿಯಾದ ಜಂಟಿ ಮುಖ್ಯಸ್ಥರು, ಈ ಕ್ಷಿಪಣಿಗಳನ್ನು ಪ್ಯೊಂಗ್ಯಾಂಗ್ನ ಸುನಾನ್ ಪ್ರದೇಶದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 9:08 ರಿಂದ 9:43 ರವರೆಗೆ ಪರೀಕ್ಷಿಸಿತ. ದಕ್ಷಿಣ ಕೋರಿಯಾ ಸೇನೆ ಈ ಬಗ್ಗೆ ಸಂಪೂರ್ಣ ನಿಗಾವಹಿಸಿದೆ. ಅಲ್ಲದೇ, ತನ್ನ ಕಣ್ಗಾವಲು ಬಲಪಡಿಸುವ ಸಲುವಾಗಿ ಯುಎಸ್ ಜೊತೆಗೆ ನಿಕಟ ಸಹಕಾರದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿಯ ಪ್ರಕಾರ, ಈ ವರ್ಷ ಉತ್ತರ ಕೊರಿಯಾ ನಡೆಸಿದ 18ನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ಮೇ 10 ರಂದು ಅಧಿಕಾರ ವಹಿಸಿಕೊಂಡರು. ಅದಾದ ಬಳಿಕ ಇದು 3 ನೇ ಪರೀಕ್ಷೆಯಾಗಿದೆ.
ಇದನ್ನೂ ಓದಿ: ಯುಕೆ ಹೊಸ ಪದವಿ ಯೋಜನೆಯಿಂದ ಭಾರತ ಹೊರಕ್ಕೆ! ಹಿನ್ನಡೆ ಬಗ್ಗೆ ತಜ್ಞರು ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.