ನವದೆಹಲಿ: ಅಮೇರಿಕನ್ ಭಾರತೀಯಳಾದ ಹರಿಣಿ ಲೋಗನ್ ಈಗ ಈ ವರ್ಷದ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಗೆಲ್ಲುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಟ್ವೀಟ್ ಪ್ರಕಾರ, 14 ವರ್ಷ ವಯಸ್ಸಿನ ವಿದ್ಯಾರ್ಥಿನಿ ಹರಿಣಿ ಲೋಗನ್ ಸ್ಪೆಲ್-ಆಫ್ ಸಮಯದಲ್ಲಿ 22 ಪದಗಳನ್ನು ಯಶಸ್ವಿಯಾಗಿ ಉಚ್ಚರಿಸಿದ್ದಾರೆ ಎನ್ನಲಾಗಿದೆ.
ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ 13 ಮತ್ತು 18 ರ ಸುತ್ತುಗಳ ನಡುವೆ, ಅಂತಿಮ ಇಬ್ಬರು ಸ್ಪರ್ಧಿಗಳಾದ ವಿಕ್ರಮ್ ರಾಜು ಮತ್ತು ಹರಿಣಿ ಲೋಗನ್ ಅವರಿಗೆ ಉಚ್ಚರಿಸಲು ತುಂಬಾ ಕಠಿಣ ಪದಗಳನ್ನು ನೀಡಲಾಯಿತು.ಇದಕ್ಕಾಗಿ ಅವರಿಗೆ 90 ಸೆಕೆಂಡ್ ಗಳಲ್ಲಿ ಹೆಚ್ಚಿನ ಪದಗಳನ್ನು ನೀಡಲು ಅವಕಾಶ ನೀಡಲಾಯಿತು.ಆಗ ಹರಿಣಿ ಲೋಗನ್ ಸುಮಾರು 22 ಪದಗಳನ್ನು ಯಶಸ್ವಿಯಾಗಿ ಉತ್ತರಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
Our 2022 Scripps National Spelling Bee Champion #Speller231 Harini Logan draws inspiration from VP @KamalaHarris. After tonight, Harini is inspiring a new generation of spellers everywhere. She says it takes a village to build up a speller. Hers is happy tonight. 🐝 #spellingbee pic.twitter.com/m3RNiM2qvl
— Scripps National Spelling Bee (@ScrippsBee) June 3, 2022
ಇನ್ನೊಂದೆಡೆಗೆ ವಿಕ್ರಂ ರಾಜು ಎನ್ನುವ ಸ್ಪರ್ಧಿ 15 ಪದಗಳನ್ನು ಯಶಸ್ವಿಯಾಗಿ ಉಚ್ಚರಿಸಿದ್ದಾರೆ ಎನ್ನಲಾಗಿದೆ.ಈಗ ಸ್ಪೆಲ್ಲಿಂಗ್ ಬಿಯಲ್ಲಿ ಚಾಂಪಿಯನ್ ಪಟ್ಟವನ್ನು ಗೆಲ್ಲುವ ಮೂಲಕ ಹರಿಣಿ ಲೋಗನ್ ಅವರು $50,000 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.