ನವದೆಹಲಿ: ಮುಪ್ಪು ದೇಹಕ್ಕೆ ಹೊರತು, ಮನಸ್ಸಿಗೆ ಮುಪ್ಪಿಲ್ಲ ಎಂದು ಹೇಳುತ್ತಾರೆ. ಮನೋಸ್ಥೈರ್ಯ ಒಂದಿದ್ದರೆ ಯಾರೂ ಯಾವ ವಯಸ್ಸಿನಲ್ಲಾದರೂ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಒಂದು ಅದ್ಬುತ ಸಾಕ್ಷ್ಯದಂತಿದೆ ಈ ವಿಡಿಯೋ. ಇತ್ತೀಚಿನ ವರ್ಷಗಳಲ್ಲಿ 40 ವರ್ಷ ದಾಟದವರೂ ನಮಗೆ ಮಂಡಿ ನೋವು, ನಡೆಯಲೂ ಕಷ್ಟ ಎನ್ನುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ 84ರ ವೃದ್ಧ 54ವರ್ಷದ ತನ್ನ ಸ್ನೇಹಿತನ ಜೊತೆ ಸ್ಟಂಟ್ ಮಾಡಿದನ್ನ ಎಲ್ಲಾದರೂ ಕೇಳಿದ್ದೀರಾ...?
ವಯಸ್ಸಾದಂತೆ ಸಾಮಾನ್ಯವಾಗಿ ದೇಹ, ಮನಸ್ಸು ವಿಶ್ರಾಂತಿ ಬಯಸುವುದು ಸಹಜ. ಈ ವಯಸ್ಸಿನಲ್ಲಿ ಯಾರು ಸಾಹಸ ಮಾಡ್ತಾರೆ ಅಂತ ಯೋಚಿಸುತ್ತಿದ್ದೀರಾ... ನೀವು ಆ ರೀತಿ ಯೋಚಿಸಿದರೆ, ಈ ಹಳೆಯ ಜೋಡಿಗಳ ಈ ಸಾಹಸಗಳನ್ನು ಒಮ್ಮೆ ನೋಡಿ. ಇದನ್ನು ನೋಡಿದರೆ ನೀವೂ ಬಾಯ ಮೇಲೆ ಬೆರಳಿಟ್ಟು ಆಶ್ಚರ್ಯ ಪಡುತ್ತೀರಿ.
ಲಿಯಾನ್ ಎಂಬ 84 ವರ್ಷದ ವೃದ್ಧರೊಬ್ಬರು ತಮ್ಮ ಸ್ನೇಹಿತ 54 ವರ್ಷ ಎಡ್ಸನ್ ಎಂಬುವವರೊಂದಿಗೆ ಮಾಡಿದ ಸಾಹಸ, ಅಮೇರಿಕಾ ಗಾಟ್ ಟ್ಯಾಲೆಂಟ್ ಜನರನ್ನೇ ಬೆರುಗುಗೊಳಿಸಿದೆ. ಇಬ್ಬರು ವೃದ್ಧರ ಈ ವಿಡಿಯೋ ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೀವೂ ಒಮ್ಮೆ ನೋಡಿ ...
ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಸ್ನೇಹಿತರಾಗಿದ್ದು, ಆಗಾಗ್ಗೆ ಇದೇ ರೀತಿಯ ಸ್ಟಂಟ್ ಮಾಡುತ್ತಿರುತ್ತಾರೆ ಎನ್ನಲಾಗಿದೆ. ಈ ಇಬ್ಬರ ಪ್ರದರ್ಶನದ ಕಂಡ ಕಾರ್ಯಕ್ರಮದ ತೀರ್ಪುಗಾರರು ಮತ್ತು ನೆರೆದಿದ್ದ ಜನ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು.