ವಿಚ್ಛೇದನದ 24 ಗಂಟೆಗಳಲ್ಲೇ 3ನೇ ಮದುವೆ! 49ನೇ ವಯಸ್ಸಿನಲ್ಲಿ 18ರ ಯುವತಿ ಜೊತೆ ಸಂಸದನ ಮ್ಯಾರೇಜ್

ಇಮ್ರಾನ್ ಖಾನ್ ಅವರ ನಿಕಟವರ್ತಿ ಹಾಗೂ ಪಾಕಿಸ್ತಾನದ ಸಂಸದರಾಗಿರುವ 49 ವರ್ಷದ ಡಾ.ಅಮೀರ್ ಲಿಯಾಕತ್ ಹುಸೇನ್ ಅವರು ಬುಧವಾರ ಸಯೀದಾ ದಾನಿಯಾ ಶಾ ಅವರೊಂದಿಗೆ 3ನೇ ವಿವಾಹವಾದರು. ಕೇವಲ 18 ವರ್ಷ ವಯಸ್ಸಿನ ಯುವತಿ ಜೊತೆಗೆ ಅವರು ಸಪ್ತಪದಿ ತುಳಿದಿದ್ದಾರೆ.

Written by - Puttaraj K Alur | Last Updated : Feb 12, 2022, 08:51 AM IST
  • ಇಮ್ರಾನ್ ಖಾನ್ ಆಪ್ತ, ಪಾಕ್ ಸಂಸದ ಅಮೀರ್ ಲಿಯಾಖತ್ 3ನೇ ಮದುವೆಯಾಗಿದ್ದಾರೆ
  • 2ನೇ ಹೆಂಡತಿಗೆ ವಿಚ್ಛೇದನ ನೀಡಿದ 24 ಗಂಟೆಯೊಳಗೆ 3ನೇ ಮದುವೆಯಾದ ಅಮೀರ್ ಲಿಯಾಖತ್
  • ತಮ್ಮ ಮೊದಲನೇ ಪತ್ನಿಗೆ ಫೋನ್ ಮೂಲಕವೇ ವಿಚ್ಛೇದನ ನೀಡಿದ್ದರೆಂದು ಆರೋಪಿಸಲಾಗಿತ್ತು
ವಿಚ್ಛೇದನದ 24 ಗಂಟೆಗಳಲ್ಲೇ 3ನೇ ಮದುವೆ! 49ನೇ ವಯಸ್ಸಿನಲ್ಲಿ 18ರ ಯುವತಿ ಜೊತೆ ಸಂಸದನ ಮ್ಯಾರೇಜ್ title=
ಪಾಕ್ ಸಂಸದ ಅಮೀರ್ ಲಿಯಾಖತ್ 3ನೇ ಮದುವೆ

ಇಸ್ಲಾಮಾಬಾದ್: ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಹಾಗೂ ಪಾಕಿಸ್ತಾನದ ಸಂಸದೀಯ ಸದಸ್ಯ ಡಾ.ಅಮೀರ್ ಲಿಯಾಖತ್ ಹುಸೇನ್ (49) ಅವರ 3ನೇ ವಿವಾಹ( Aamir Liaquat Third Marriage) ಭಾರೀ ಸದ್ದು ಮಾಡುತ್ತಿದೆ. ಅವರು ಬುಧವಾರ ಕೇವಲ 18 ವರ್ಷ ವಯಸ್ಸಿನ ಸಯೀದಾ ದಾನಿಯಾ ಶಾರನ್ನು ವಿವಾಹವಾದರು. ಇವರು ಪಂಜಾಬ್‌ನ ಲೋಧರನ್‌ನಲ್ಲಿರುವ ಗೌರವಾನ್ವಿತ ಕುಟುಂಬಕ್ಕೆ ಸೇರಿದವರು. ಆಸಕ್ತಿದಾಯಕ ವಿಷಯವೆಂದರೆ ಅಮೀರ್ ಲಿಯಾಕತ್ ಹುಸೇನ್ ತನ್ನ 2ನೇ ಹೆಂಡತಿಯಿಂದ ವಿಚ್ಛೇದನ ಪಡೆದ ದಿನವೇ ಅವರು 3ನೇ ಬಾರಿಗೆ ವಿವಾಹವಾಗಿದ್ದಾರೆ.

ಹಿಂದಿನ ಮದುವೆ ಒಂದು ‘ಕೆಟ್ಟ ಗಳಿಗೆ’ ಎಂದ ಅಮೀರ್

ಅಮೀರ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಸಯೀದಾ(Syeda Dania Shah) ಅವರೊಂದಿಗಿನ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ಮದುವೆ ಒಂದು ‘ಕೆಟ್ಟ ಗಳಿಗೆ’ ಅಂತಾ ಅವರು ಬರೆದುಕೊಂಡಿದ್ದಾರೆ. ಅದು ನನ್ನ ತಪ್ಪು ನಿರ್ಧಾರವಾಗಿತ್ತು ಅಂತಲೂ ಹೇಳಿದ್ದಾರೆ. ಇದು ಅವರ 3ನೇ ಮದುವೆ. ಅಮೀರ್ ಲಿಯಾಕತ್ ಹುಸೇನ್ ಒಬ್ಬ ಸಂಸದ, ಪಾಕಿಸ್ತಾನದ ಜನಪ್ರಿಯ ಟಿವಿ ನಿರೂಪಕ ಮತ್ತು ಪ್ರಧಾನಿ ಇಮ್ರಾನ್ ಖಾನ್‌ಗೆ ಆಪ್ತ. ಅಮೀರ್ ತನ್ನ 2ನೇ ಹೆಂಡತಿಯಿಂದ ವಿಚ್ಛೇದನ ಪಡೆದ ದಿನವೇ 3ನೇ ಬಾರಿಗೆ ವಿವಾಹವಾಗಿ ಅಚ್ಚರಿ ಮೂಡಿಸಿದ್ದಾರೆ.

ಇದನ್ನೂ ಓದಿ: ಇ-ರೂಪಿ ವೋಚರ್‌ಗಳ ಮಿತಿಯನ್ನು 10,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಲು ಆರ್‌ಬಿಐ ಪ್ರಸ್ತಾಪ

3ನೇ ಹೆಂಡತಿ ಬಗ್ಗೆ ಅಮೀರ್ ಮೆಚ್ಚುಗೆಯ ಮಾತುಗಳು

ಅಮೀರ್ ಲಿಯಾಕತ್ ಹುಸೇನ್(Aamir Liaquat Hussain) ಅವರು ತಮ್ಮ 3ನೇ ಹೆಂಡತಿಯನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್ ಮೂಲಕ ಹೊಗಳಿದ್ದಾರೆ. ನನ್ನ ಹೆಂಡತಿ ತುಂಬಾ ಒಳ್ಳೆಯವಳು, ತುಂಬಾ ಸುಂದರ, ಸರಳ ಅಂತಾ ಬರೆದುಕೊಂಡಿದ್ದಾರೆ. ‘ನನ್ನ ಎಲ್ಲಾ ಹಿತೈಷಿಗಳು ನಮಗಾಗಿ ಪ್ರಾರ್ಥಿಸಲು ನಾನು ವಿನಂತಿಸುತ್ತೇನೆ, ಏಕೆಂದರೆ ನಾನು ಜೀವನದ ‘ಕೆಟ್ಟ ಗಳಿಗೆ’ಯನ್ನು ಬಿಟ್ಟು ಹೋಗಿದ್ದೇನೆ. ಅದೊಂದು ನನ್ನತಪ್ಪು ನಿರ್ಧಾರವಾಗಿತ್ತು’ ಅಂತಾ ಹೇಳಿದ್ದಾರೆ.

ಅಮೀರ್ ಲಿಯಾಕತ್ ಅವರ 2ನೇ ಪತ್ನಿ

ಅಮೀರ್ ಲಿಯಾಕತ್(Pakistan MP) ಅವರು ನಟಿ ಸೈಯದ್(Syeda Dania Shah) ತುಬಾ ಅವರನ್ನು 2ನೇ ಮದುವೆಯಾಗಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಇಬ್ಬರೂ ಕಳೆದ 14 ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ನಟಿ ತುಬಾ ಕೂಡ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿಚ್ಛೇದನವನ್ನು ಘೋಷಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ನಟಿ ತುಬಾ ಅವರು, ‘ಕಳೆದ 14 ತಿಂಗಳುಗಳಿಂದ ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಮತ್ತು ಅಮೀರ್ ಲಿಯಾಕತ್ ಹುಸೇನ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಅಂತಾ ಬರೆದಿದ್ದಾರೆ. ನಮ್ಮಿಬ್ಬರ ಸಂಬಂಧದಲ್ಲಿ ಸಮನ್ವಯದ ಕೊರತೆ ಇರುವುದರಿಂದ ನ್ಯಾಯಾಲಯದಿಂದ ವಿಚ್ಛೇದನ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತು ಇನ್ನೂ COVID ನಿಂದ ಮುಕ್ತವಾಗಿಲ್ಲ, ಹೆಚ್ಚಿನ ರೂಪಾಂತರಗಳನ್ನು ನಿರೀಕ್ಷಿಸಲಾಗಿದೆ: WHO ಎಚ್ಚರಿಕೆ  

ಫೋನ್ ನಲ್ಲಿಯೇ ಮೊದಲ ಪತ್ನಿಗೆ ವಿಚ್ಛೇದನ!

ಅಮೀರ್ ಲಿಯಾಖತ್ ಹುಸೇನ್ ತಮ್ಮ ಮೊದಲ ಪತ್ನಿ ಸಯೀದ್ ಬುಸ್ರಾ ಇಕ್ಬಾಲ್(Love Marriage) ಅವರಿಗೆ ಫೋನ್ ಮೂಲಕ ವಿಚ್ಛೇನ ನೀಡಿದ್ದಾರೆಂದು ಆರೋಪಿಸಲಾಗಿತ್ತು. ತನಗೆ ಫೋನ್ ಮೂಲಕ ವಿಚ್ಛೇದನ ನೀಡಿದ್ದಾರೆಂದು ಸ್ವತಃ ಸಯೀದ್ ಬುಸ್ರಾ ಅವರೇ ಆರೋಪಿಸಿದ್ದರು. ಅಮೀರ್ ಅವರ ಈ ನಿರ್ಧಾರವು ತಮ್ಮ ಜೀವನದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ, ಅವರ ಮನಸ್ಥಿತಿಯನ್ನೇ ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಈ ನಿರ್ಧಾರದಿಂದ ನನಗೆ ತುಂಬಾ ನೋವಾಗಿದೆ ಎಂದು ಸಯೀದ್ ಬುಸ್ರಾ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News