10 ವರ್ಷ ಪಾಕಿಸ್ತಾನ ಆಳಿದ ಮುಷರಫ್‌ಗೇಕೆ ಗಲ್ಲು ಶಿಕ್ಷೆ? ಇಲ್ಲಿದೆ ವಿವರ

ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ವಿಶೇಷ ನ್ಯಾಯಾಲಯದ ಮೂವರು ಸದಸ್ಯರ ಪೀಠ ಮಂಗಳವಾರ ಮರಣದಂಡನೆ ವಿಧಿಸಿದೆ. ಮೂವರು ಸದಸ್ಯ ಪೀಠವು 2-1 ಮತಗಳಿಂದ ಈ ತೀರ್ಪನ್ನು ನೀಡಿದೆ. ಈ ಬಗ್ಗೆ ವಿವರವಾದ ನಿರ್ಧಾರವನ್ನು 48 ಗಂಟೆಗಳಲ್ಲಿ ನೀಡಲಾಗುವುದು ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

Last Updated : Dec 17, 2019, 02:27 PM IST
10 ವರ್ಷ ಪಾಕಿಸ್ತಾನ ಆಳಿದ ಮುಷರಫ್‌ಗೇಕೆ ಗಲ್ಲು ಶಿಕ್ಷೆ? ಇಲ್ಲಿದೆ ವಿವರ title=

ಲಾಹೋರ್: ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಪೇಶಾವರ ಹೈಕೋರ್ಟ್(Peshawar High Court)  ಮುಖ್ಯ ನ್ಯಾಯಮೂರ್ತಿ ವಖಾರ್ ಅಹ್ಮದ್  ಸೇಠ್ ನೇತೃತ್ವದ ವಿಶೇಷ ನ್ಯಾಯಾಲಯದ ತ್ರಿ ಸದಸ್ಯರ ಪೀಠವು ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್(Pervez Musharraf)  ಅವರಿಗೆ ಮಂಗಳವಾರ ಮರಣದಂಡನೆ ವಿಧಿಸಿದೆ. ಮೂವರು ಸದಸ್ಯ ಪೀಠವು 2-1 ಮತಗಳಿಂದ ಈ ತೀರ್ಪನ್ನು ನೀಡಿದೆ. ಈ ಬಗ್ಗೆ ವಿವರವಾದ ನಿರ್ಧಾರವನ್ನು 48 ಗಂಟೆಗಳಲ್ಲಿ ನೀಡಲಾಗುವುದು ಎಂದು ಡಾನ್ ನ್ಯೂಸ್ ವರದಿ ಮಾಡಿದೆ. ಮಾಜಿ ಮಿಲಿಟರಿ ಆಡಳಿತಗಾರ 1999 ರಿಂದ 2008 ರವರೆಗೆ 10 ವರ್ಷಗಳ ಕಾಲ ಪಾಕಿಸ್ತಾನವನ್ನು ಆಳಿದರು.

ಮಾಜಿ ಮಿಲಿಟರಿ ಮುಖ್ಯಸ್ಥ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ನ ದುಬೈ (ಯುಎಇ) ನಲ್ಲಿದ್ದಾರೆ. ನವೆಂಬರ್ 3, 2007 ರಂದು, ಪಾಕಿಸ್ತಾನದಲ್ಲಿ ತಲೆದೋರಿದ ತುರ್ತು ಪರಿಸ್ಥಿತಿಗಾಗಿ ಮಾಜಿ ಮಿಲಿಟರಿ ಸರ್ವಾಧಿಕಾರಿಯ ವಿರುದ್ಧ ದಾಖಲಿಸಲಾಗಿದ್ದ ಹೆಚ್ಚಿನ ದೇಶದ್ರೋಹ ಪ್ರಕರಣವು ಡಿಸೆಂಬರ್ 2013 ರಿಂದ ಬಾಕಿ ಉಳಿದಿತ್ತು.

ಏನಿದು ಪ್ರಕರಣ?
ಪಾಕಿಸ್ತಾನದಲ್ಲಿ 2007 ರ ಅಧ್ಯಕ್ಷೀಯ ಚುನಾವಣೆಗೆ ಚುನಾವಣಾ ಆಯುಕ್ತರು ಜನರಲ್ ಪರ್ವೇಜ್ ಮುಷರಫ್ ಅವರನ್ನು ಮರುಚುನಾವಣೆಯ ಅಭ್ಯರ್ಥಿಯಾಗಿ ಅನುಮೋದಿಸಿದರು. ಅವರ ವಿರೋಧಿಗಳಲ್ಲಿ ಒಬ್ಬರಾದ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಾಜಿಹುದ್ದೀನ್ ಅಹ್ಮದ್ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರು. ಮುಷರಫ್ ಅವರು ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಎರಡೂ ಹುದ್ದೆಗಳನ್ನು ಹೊಂದಿದ್ದರಿಂದ ಮಿಲಿಟರಿಯ ಸದಸ್ಯರನ್ನು ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಲು ಅನುಮತಿ ನೀಡಲಾಗಿದೆಯೇ ಎಂಬ ಬಗ್ಗೆ ಈ ವಿವಾದವು ಸೃಷ್ಟಿಯಾಯಿತು.

ಸೆಪ್ಟೆಂಬರ್ 28, 2007 ರಂದು, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮರು-ಚುನಾವಣಾ ಸ್ಪರ್ಧೆ ಬಗ್ಗೆ  ಸಲ್ಲಿಸಲಾಗಿರುವ ಅರ್ಜಿಯು ಕಾನೂನಿಗೆ ಸವಾಲಾಗಿದೆ. ಹಾಗಾಗಿ ಚುನಾವಣಾ ಆಯೋಗವು ತನ್ನ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಅಧಿಕೃತವಾಗಿ ವಿಜೇತರನ್ನು ಘೋಷಿಸುವುದನ್ನು ತಡೆಹಿಡಿಯಿತು. ಅಕ್ಟೋಬರ್ 6 ರಂದು, ಸೆನೆಟ್, ಸಂಸತ್ತು ಮತ್ತು ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಮುಷರಫ್ 98% ಮತಗಳನ್ನು ಗಳಿಸುವುದರೊಂದಿಗೆ ಚುನಾಯಿತರಾದರು. 

ಅಭ್ಯರ್ಥಿಯಾಗಿ ಮುಷರಫ್ ಅವರ ಅರ್ಹತೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿರುವಾಗ, ನ್ಯಾಯಪೀಠದ ಗೌರವಾನ್ವಿತ ಸದಸ್ಯರೊಬ್ಬರ ವೈಯಕ್ತಿಕ ಕಾರಣದಿಂದಾಗಿ ವಿಚಾರಣೆಯನ್ನು ನವೆಂಬರ್ 12 ರವರೆಗೆ ಮುಂದೂಡುವುದಾಗಿ ಘೋಷಿಸಿತು. ಬಳಿಕ ನವೆಂಬರ್ 2 ರಂದು, ನ್ಯಾಯಾಲಯವು ರಾಜಕೀಯ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಲು ಪ್ರಯತ್ನಿಸಲು ನವೆಂಬರ್ 5 ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು. ನ್ಯಾಯಾಲಯದ ನಿರಂತರ ವಿಳಂಬವು ಪಾಕಿಸ್ತಾನದ ಸಾಮಾನ್ಯ ಅಸ್ಥಿರತೆಯನ್ನು ಹೆಚ್ಚಿಸುತ್ತಿದೆ ಎಂಬ ಟೀಕೆಗಳ ಕಾರಣದಿಂದಾಗಿ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿತ್ತು. 

6 ಅಕ್ಟೋಬರ್ 2007 ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಮುಷರಫ್ ಅವರ ಮರುಚುನಾವಣೆಯ ಸುತ್ತಲಿನ ವಿವಾದಗಳಿಗೆ ತುರ್ತು ಪರಿಸ್ಥಿತಿ ಮತ್ತು ಅದರ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಕಾರಣವಾಗಿವೆ.  ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಅವರು ನವೆಂಬರ್ 3, 2007 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಮುಷರಫ್ ವಿವಾದಾತ್ಮಕವಾಗಿ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥರ ಎರಡೂ ಹುದ್ದೆಗಳನ್ನು ಅಲಂಕರಿಸಿದ್ದರು. ನಂತರ ಅವರು ನವೆಂಬರ್ 28 ರಂದು ತುರ್ತು ಪರಿಸ್ಥಿತಿ ಘೋಷಣೆಯಾಗಿ 25 ದಿನಗಳ ಬಳಿಕ ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಫ್ತಿಕಾರ್ ಮುಹಮ್ಮದ್ ಚೌಧರಿ ತುರ್ತು ಘೋಷಣೆಗೆ ಕೂಡಲೇ ಸ್ಪಂದಿಸಿದ್ದು, ಏಳು ಸದಸ್ಯರ ಪೀಠದಲ್ಲಿ ಈ ಕ್ರಮದ ವಿರುದ್ಧ ಮಧ್ಯಂತರ ಆದೇಶ ಹೊರಡಿಸಿದರು. ಯಾವುದೇ ಅಕ್ರಮ ಆದೇಶಗಳನ್ನು ಪಾಲಿಸಬಾರದೆಂದು ಅವರು ಪಾಕಿಸ್ತಾನದ ಸಶಸ್ತ್ರ ಪಡೆಗಳಿಗೆ ನಿರ್ದೇಶನ ನೀಡಿದರು. ತರುವಾಯ, ಪಾಕಿಸ್ತಾನ ಸೇನೆಯ 111 ನೇ ಬ್ರಿಗೇಡ್ ಸರ್ವೋಚ್ಚ ನ್ಯಾಯಾಲಯದ ಕಟ್ಟಡವನ್ನು ಪ್ರವೇಶಿಸಿ ನ್ಯಾ. ಚೌಧರಿ ಮತ್ತು ಇತರ ಹಲವಾರು ನ್ಯಾಯಾಧೀಶರನ್ನು ಸರ್ವೋಚ್ಚ ನ್ಯಾಯಾಲಯದ  ನ್ಯಾಯಾಧೀಶರ ಹುದ್ದೆಯಿಂದ ತೆರವುಗೊಳಿಸಿ ಅವರನ್ನು ಬಂಧಿಸಿತು.

ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ 2007 ರ ಆರಂಭದಲ್ಲಿ ತುರ್ತು ಪರಿಸ್ಥಿತಿಯು ಕೊನೆಗೊಳ್ಳುತ್ತದೆ ಎಂದು ಮೊದಲೇ ಘೋಷಿಸಲಾಯಿತು.ನವೆಂಬರ್ 29, 2007 ರಂದು ಎರಡನೇ ಅಧ್ಯಕ್ಷೀಯ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ನಂತರ, ಮುಷರಫ್ ತಕ್ಷಣವೇ 16 ಡಿಸೆಂಬರ್ 2007 ರಂದು ತುರ್ತು ಪರಿಸ್ಥಿತಿ ಕೊನೆಗೊಳ್ಳುತ್ತದೆ ಎಂದು ಘೋಷಿಸಿದರು. ಮುಷರಫ್ ಘೋಷಿಸಿದಂತೆ ತುರ್ತು ಪರಿಸ್ಥಿತಿ ಒಂದು ದಿನದ ಮುಂಚೆಯೇ ಅಂದರೆ ಡಿಸೆಂಬರ್ 15, 2007 ರಂದು ಕೊನೆಗೊಂಡಿತು.

ಇದಕ್ಕೂ ಮೊದಲು 2008 ರ ಜನವರಿಯಲ್ಲಿ ನಡೆಯಬೇಕಿದ್ದ ಪಾಕಿಸ್ತಾನಿ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಲಾಯಿತು. ತುರ್ತು ಪರಿಸ್ಥಿತಿಯ ಆರಂಭದಲ್ಲಿ, ಮಾಹಿತಿ ಸಚಿವ ತಾರಿಕ್ ಅಜೀಮ್ ಖಾನ್ ದೂರದರ್ಶನದಲ್ಲಿ ಸಾರ್ವತ್ರಿಕ ಚುನಾವಣೆಯು ಹಲವು ತಿಂಗಳುಗಳು ಮತ್ತು ಬಹುಶಃ ಒಂದು ವರ್ಷದವರೆಗೆ ವಿಳಂಬವಾಗಬಹುದು ಎಂದು ಹೇಳಿದ್ದರು. ನಂತರ, ಮುಷರಫ್ ಸ್ವತಃ ಫೆಬ್ರವರಿ 15, 2008 ರ ಹೊತ್ತಿಗೆ ಚುನಾವಣೆಯನ್ನು ಘೋಷಿಸಿದರು. ಕೆಲವು ದಿನಗಳ ನಂತರ ಅವರು ಸಾರ್ವತ್ರಿಕ ಚುನಾವಣೆ 9 ಜನವರಿ 2008 ರಂದು ಅಥವಾ ಅದಕ್ಕೂ ಮೊದಲೇ ನಡೆಯಬೇಕು ಎಂದು ಕರೆ ನೀಡಿದರು. ಕೊನೆಗೂ 2008 ರ ಜನವರಿ 8 ಕ್ಕೆ ಚುನಾವಣಾ ದಿನಾಂಕವನ್ನು ನಿರ್ಧರಿಸಲಾಯಿತು. ಆದಾಗ್ಯೂ, ತುರ್ತು ಪರಿಸ್ಥಿತಿ ಮುಗಿದ ನಂತರ ಸಂಭವಿಸಿದ ಅನಿರೀಕ್ಷಿತ ಘಟನೆಗಳ ಕಾರಣ, ಮುಖ್ಯವಾಗಿ ಬೆನಜೀರ್ ಭುಟ್ಟೋ ಅವರ ಹತ್ಯೆ ಮತ್ತು ಅದರ ನಂತರದ ಬೆಳವಣಿಗೆಗಳಿಂದಾಗಿ ಮತ್ತೆ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡಿತು. ಅಂತಿಮವಾಗಿ 2008 ರ ಫೆಬ್ರವರಿ 18 ರಂದು ಸಾರ್ವತ್ರಿಕ ಚುನಾವಣೆ ನಡೆಯಿತು.

2013 ರ ಡಿಸೆಂಬರ್‌ನಲ್ಲಿ ದೇಶದ್ರೋಹದ ಪ್ರಕರಣದಲ್ಲಿ ಪರ್ವೇಜ್ ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮುಷರಫ್ ಅವರನ್ನು ಮಾರ್ಚ್ 31, 2014 ರಂದು ಶಿಕ್ಷೆಗೊಳಪಡಿಸಲಾಯಿತು ಮತ್ತು ಪ್ರಾಸಿಕ್ಯೂಷನ್ ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಸಂಪೂರ್ಣ ಸಾಕ್ಷ್ಯವನ್ನು ಮಂಡಿಸಿತು. ಆದಾಗ್ಯೂ, ಮೇಲ್ಮನವಿ ವೇದಿಕೆಗಳಲ್ಲಿನ ಮೊಕದ್ದಮೆ ಮಾಜಿ ಮಿಲಿಟರಿ ಸರ್ವಾಧಿಕಾರಿಯ ವಿಚಾರಣೆಗೆ ಕಾರಣವಾಯಿತು ಮತ್ತು ಅವರು ಮಾರ್ಚ್ 2016 ರಲ್ಲಿ ಪಾಕಿಸ್ತಾನವನ್ನು ತೊರೆದರು.

ಇದಕ್ಕೂ ಮುನ್ನ ಲಾಹೋರ್ ಹೈಕೋರ್ಟ್ (ಎಲ್‌ಎಚ್‌ಸಿ) ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅರ್ಜಿಯ ಕುರಿತು ಪಾಕಿಸ್ತಾನ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿಗೊಳಿಸಿದ್ದು, ಇಸ್ಲಾಮಾಬಾದ್‌ನ ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವ ದೇಶದ್ರೋಹ ಪ್ರಕರಣವನ್ನು ತಡೆಹಿಡಿಯುವಂತೆ ಆದೇಶಿಸಿದೆ.

ಮುಷರಫ್ ತಮ್ಮ ಅರ್ಜಿಯಲ್ಲಿ, ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಚಾರಣೆ ಮತ್ತು ಅವರ ವಿರುದ್ಧ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಎಚ್‌ಸಿ ಘೋಷಣೆ, ಹೆಚ್ಚಿನ ದೇಶದ್ರೋಹ ದೂರುಗಳನ್ನು ಪ್ರಾರಂಭಿಸುವುದರಿಂದ ಹಿಡಿದು ಪ್ರಾಸಿಕ್ಯೂಷನ್ ನೇಮಕ ಮತ್ತು ವಿಚಾರಣಾ ನ್ಯಾಯಾಲಯವನ್ನು ಸ್ಥಾಪಿನೆ ಎಲ್ಲವೂ ಅಸಂವಿಧಾನಿಕ ಎಂದು ಉಲ್ಲೇಖಿಸಿದ್ದರು.

ಮೂರು ಸದಸ್ಯರ ವಿಶೇಷ ನ್ಯಾಯಾಲಯವು ದೀರ್ಘಕಾಲದ ದೇಶದ್ರೋಹ ಪ್ರಕರಣದಲ್ಲಿ ಮಂಗಳವಾರ ತನ್ನ ತೀರ್ಪು ನೀಡುವ ನಿರೀಕ್ಷೆಯಿದ್ದರಿಂದ ಸೋಮವಾರವೇ ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್‌ಸಿ)  ಈ ಪ್ರಕರಣದ ತೀರ್ಪನ್ನು ತಡೆಹಿಡಿಯಲು ಆದೇಶಿಸಿದೆ.

Trending News