ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಎಂದು ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ

 ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಸದಾ ನಿರ್ಲಕ್ಷಿಸುತ್ತಲೇ ಬಂದಿದ್ದ ಪಾಕಿಸ್ತಾನ,  ಮಂಗಳವಾರ ಜೀನಿವಾದಲ್ಲಿ ಕಾಶ್ಮೀರವನ್ನು ಭಾರತದ ರಾಜ್ಯ ಎಂದು ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಉಲ್ಲೇಖಿಸಿದ್ದಾರೆ.

Last Updated : Sep 10, 2019, 06:43 PM IST
ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಎಂದು ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ   title=

ನವದೆಹಲಿ:  ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಸದಾ ನಿರ್ಲಕ್ಷಿಸುತ್ತಲೇ ಬಂದಿದ್ದ ಪಾಕಿಸ್ತಾನ,  ಮಂಗಳವಾರ ಜೀನಿವಾದಲ್ಲಿ ಕಾಶ್ಮೀರವನ್ನು ಭಾರತದ ರಾಜ್ಯ ಎಂದು ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಉಲ್ಲೇಖಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (ಯುಎನ್‌ಹೆಚ್‌ಆರ್‌ಸಿ) 42 ನೇ ಅಧಿವೇಶನದ ಹೊರತಾಗಿ ಪತ್ರಿಕಾ ಸದಸ್ಯರೊಂದಿಗೆ ಮಾತನಾಡಿದ ಖುರೇಷಿ, ಜಮ್ಮು ಮತ್ತು ಕಾಶ್ಮೀರದ ಜನರ ಮಾನವ ಹಕ್ಕುಗಳನ್ನು ಭಾರತ ಉಲ್ಲಂಘಿಸಿದೆ ಎಂದು ಆರೋಪಿಸುತ್ತಾ ಕೋಪಗೊಂಡರು. "ಅಂತಾರಾಷ್ಟ್ರೀಯ ಸಂಸ್ಥೆಗಳು, ಎನ್‌ಜಿಒಗಳು, ನಾಗರಿಕ ಸಮಾಜ ಸಂಸ್ಥೆಗಳು ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಭಾರತವು ಅವಕಾಶ ನೀಡಬೇಕು" ಎಂದು ಅವರು ಹೇಳಿದರು.

ಈಗ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಅಂಗ ಎಂದು ಖುರೇಷಿ ಹೇಗೆ ಉಲ್ಲೇಖಿಸಿದ್ದಾರೆ ಎಂಬುದರ ಬಗ್ಗೆ ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಪಾಕ್ ಯಾವಾಗಲೂ ಇದನ್ನು 'ವಿವಾದಿತ ಪ್ರದೇಶ' ಎಂದು ಉಲ್ಲೇಖಿಸುತ್ತದೆ. ಈಗ ಕಾಶ್ಮೀರದ ವಿಚಾರವನ್ನು ಪಾಕ್ ವಿಶ್ವಸಂಸ್ಥೆವರೆಗೆ ತೆಗೆದುಕೊಂಡು ಬಂದಿರುವ ಸಂದರ್ಭದಲ್ಲೇ ಸಿಂಧಿ ಹಾಗೂ ಬಲೋಚಿಗಳು ಪಾಕ್ ಸರ್ಕಾರದ ವಿರುದ್ಧ ಸಿಂಧ್ ಮತ್ತು ಬಲೋಚಿಸ್ತಾನದಲ್ಲಿ ತಮ್ಮ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. 

Trending News