ಪಾಕಿಸ್ತಾನದ ಗ್ರಾಮವೊಂದಕ್ಕೆ 'ಮಲಾಲ' ಹೆಸರು

    

Last Updated : Apr 19, 2018, 03:44 PM IST
ಪಾಕಿಸ್ತಾನದ ಗ್ರಾಮವೊಂದಕ್ಕೆ 'ಮಲಾಲ' ಹೆಸರು   title=

ರಾವಲ್ಪಿಂಡಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವೊಂದರ ಹಳ್ಳಿಗೆ ಮಹಿಳಾ ಹಕ್ಕು ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪುರಸ್ಕೃತೆ ಮಲಾಲ ವರ ಹೆಸರನ್ನು ಇಡಲಾಗಿದೆ.

ಈ ಕುರಿತಾಗಿ ಸಾಮಾಜಿಕ ಹೋರಾಟಗಾರ ಬಸೀರ್ ಅಹ್ಮದ್ ಎನ್ನುವವರು ತಮ್ಮ  ತಮ್ಮ ಟ್ವೀಟರ್ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಹತ್ತಿರದ  ಗುಜಾರ್ ಖಾನ್  ಎನ್ನುವ ಗ್ರಾಮಕ್ಕೆ ಮಲಾಲ ಎಂದು ನಾಮಕರಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಲಾಲ ಇತ್ತೀಚಿಗೆ ವಿದೇಶದಲ್ಲಿ ಆರು ವರ್ಷಗಳ ಕಾಲ ಕಳೆದ ನಂತರ ಪಾಕಿಸ್ತಾನಕ್ಕೆ ಮರಳಿದ್ದರು.ತಮ್ಮ ನಾಲ್ಕು ದಿನಗಳ ಭೇಟಿಯ ವೇಳೆ ತಮ್ಮ ಮೂಲಕ ಸ್ಥಳವಾದ ಸ್ವಾತ್ ಕಣಿವೆಗೆ ಭೇಟಿ ನೀಡಿದ್ದರು.

ಮಲಾಲ ಪಾಕಿಸ್ತಾನಕ್ಕೆ ಮರಳಿದ ಹಿನ್ನಲೆಯಲ್ಲಿ ಅವರಿಗೆ ತೀವ್ರ ಭದ್ರತೆಯನ್ನು ಒದಗಿಸಲಾಗಿತ್ತು,ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಶಾಹಿದ್ ಅಬ್ಬಾದಿಸಿಯವರನ್ನು ಸಹಿತ ಭೇಟಿ ಮಾಡಿದರು.

ಮಲಾಲ ರವರು ತಮ್ಮ 17ನೇ ವಯಸ್ಸಿನಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆಯುವುದರ ಮೂಲಕ ಅತಿ ಕಿರಿಯ ವ್ಯಕ್ತಿ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದಳು.

Trending News