Watch: ತಲೆಬಾಗಿ ಕಾಲಿಗೆ ನಮಸ್ಕರಿಸಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಪಪುವಾ ನ್ಯೂಗಿನಿಯಾ ಪ್ರಧಾನಿ

PM Modi Visit To Papua New Guinea: 2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ಭೇಟಿಯ ಸಂದರ್ಭದಲ್ಲಿ FIPIC ರಚನೆಯಾಗಿತ್ತು. FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ದೇಶಗಳು ಸಂಪರ್ಕ ಮತ್ತು ಇತರ ಸಮಸ್ಯೆಗಳ ಕಾರಣ ಅಪರೂಪವಾಗಿ ಒಟ್ಟಿಗೆ ಸೇರಿಕೊಳ್ಳುತ್ತವೆ.  

Written by - Nitin Tabib | Last Updated : May 21, 2023, 07:15 PM IST
  • FIPIC ಸಮೂಹದಲ್ಲಿ ಕುಕ್ ದ್ವೀಪಗಳು, ಫಿಜಿ, ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಷಿಯಾ, ನೌರು, ನಿಯು, ಪಲಾವ್, ಪಪುವಾ ನ್ಯೂ ಗಿನಿಯಾ,
  • ಸಮೋವಾ, ಸೊಲೊಮನ್ ದ್ವೀಪಗಳು, ಟೊಂಗಾ, ಟುವಾಲು ಮತ್ತು ವನವಾಟು ಸೇರಿವೆ. ಮೋದಿ ಅವರು ಮಾರಾಪೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ
  • ಮತ್ತು ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಬಾಬ್ ಡೇಡ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ.
Watch: ತಲೆಬಾಗಿ ಕಾಲಿಗೆ ನಮಸ್ಕರಿಸಿ ಪ್ರಧಾನಿ ಮೋದಿಗೆ ಸ್ವಾಗತ ಕೋರಿದ ಪಪುವಾ ನ್ಯೂಗಿನಿಯಾ ಪ್ರಧಾನಿ title=

PM Modi Visit To Papua New Guinea: ಭಾನುವಾರ ಪಪುವಾ ನ್ಯೂಗಿನಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಮರಾಪೇ  ಅವರು ಮೊದಲು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡು ನಂತರ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸೂರ್ಯಾಸ್ತದ ನಂತರ ಭೇಟಿ ನೀಡುವ ನಾಯಕರಿಗೆ ಪಪುವಾ ನ್ಯೂಗಿನಿಯಾ ಸಾಮಾನ್ಯವಾಗಿ ಔಪಚಾರಿಕ ಸ್ವಾಗತಗಳನ್ನು ನಡೆಸುವುದಿಲ್ಲ, ಆದರೆ ಪ್ರಧಾನಿ ಮೋದಿಗಾಗಿ ವಿಶೇಷ ಸಿದ್ಧತೆಗಳನ್ನು ಮಾಡಲಾಗಿತ್ತು. ಭಾರತದ ಯಾವುದೇ ಪ್ರಧಾನಿ ಪಪುವಾ ನ್ಯೂಗಿನಿಯಾ ತಲುಪಿದ್ದು ಇದೇ ಮೊದಲು. ಪಪುವಾ ನ್ಯೂಗಿನಿಯಾ ತಲುಪಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಅವರು ಮೇ 22 ರಂದು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಮೂರನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ.

ಮೂರು ರಾಷ್ಟ್ರಗಳ ಪ್ರವಾಸದ ಎರಡನೇ ಹಂತದಲ್ಲಿ ಮೋದಿ ಪಪುವಾ ನ್ಯೂಗಿನಿ ತಲುಪಿದ್ದಾರೆ.ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ ಜಪಾನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಜಪಾನ್‌ನಲ್ಲಿ, ಅವರು ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ.

ಮೋದಿ ಮತ್ತು ಮರಾಪೆ ಸೋಮವಾರ FIPIC ನ ಮೂರನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. ಇದಕ್ಕೂ ಮುನ್ನ, "ಈ ಮಹತ್ವದ ಶೃಂಗಸಭೆಯ (ಎಫ್‌ಐಪಿಐಸಿ) ಭಾಗವಾಗಲು ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳು (ಪಿಐಸಿ) ಆಹ್ವಾನವನ್ನು ಸ್ವೀಕರಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ" ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ-Quad Summit 2023: ಪ್ರಧಾನಿ ಮೋದಿ ಆಟೋಗ್ರಾಫ್ ಕೇಳಿದ ಜೋ ಬೀಡೆನ್, ನಂತರ ಹೇಳಿದ್ದು ಮನ ತಟ್ಟುವಂತಿದೆ

FIPIC ಯಾವಾಗ ಅಸ್ತಿತ್ವಕ್ಕೆ ಬಂದಿದೆ?
2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ಭೇಟಿಯ ಸಂದರ್ಭದಲ್ಲಿ FIPIC ಅನ್ನು ರಚಿಸಲಾಗಿದೆ. FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಈ ಎಲ್ಲಾ ರಾಷ್ಟ್ರಗಳು  ಸಂಪರ್ಕ ಮತ್ತು ಇತರ ಸಮಸ್ಯೆಗಳ ಕಾರಣ ಅಪರೂಪಕ್ಕೆ ಒಂದಾಗುತ್ತವೆ ಮತ್ತು ಮಾತುಕತೆ ನಡೆಸುತ್ತವೆ. 

ಇದನ್ನೂ ಓದಿ-G7 Summit: ವಿದೇಶಿ ನೆಲದಿಂದ ಡ್ರ್ಯಾಗನ್ ಗೆ ಕಠಿಣ ಸಂದೇಶ ರವಾನಿಸಿದ ಪ್ರಧಾನಿ ಮೋದಿ

ಯಾವ ದೇಶಗಳು FIPIC ಭಾಗವಾಗಿವೆ
FIPIC ಸಮೂಹದಲ್ಲಿ ಕುಕ್ ದ್ವೀಪಗಳು, ಫಿಜಿ, ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಷಿಯಾ, ನೌರು, ನಿಯು, ಪಲಾವ್, ಪಪುವಾ ನ್ಯೂ ಗಿನಿಯಾ, ಸಮೋವಾ, ಸೊಲೊಮನ್ ದ್ವೀಪಗಳು, ಟೊಂಗಾ, ಟುವಾಲು ಮತ್ತು ವನವಾಟು ಸೇರಿವೆ. ಮೋದಿ ಅವರು ಮಾರಾಪೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಮತ್ತು ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಬಾಬ್ ಡೇಡ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News