ಪರ್ರಮಟ್ಟ: ಆಸ್ಟ್ರೇಲಿಯಾದ ಪರ್ರಮಟ್ಟದಲ್ಲಿ ನಿರ್ಮಿಸಲಾಗಿರುವ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅನಾವರಣಗೊಳಿಸಿದರು.
ಮೂರೂ ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡನೇ ದಿನವಾದ ಗುರುವಾರ ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕೋಟ್ ಮೋರ್ರಿಸೋನ್ ಮತ್ತು ಪರ್ರಮಟ್ಟ ನಗರದ ಮೇಯರ್ ಆ್ಯಂಡ್ರ್ಯೂ ವಿಲ್ಸನ್ ಮತ್ತು ರಾಷ್ಟ್ರಪತಿಯವರ ಪತ್ನಿ ಹಾಜರಿದ್ದರು.
President Kovind unveiled a statue of Mahatma Gandhi at Jubilee Park, City of Parramatta, Sydney. He was joined by the Prime Minister of Australia, @ScottMorrisonMP and Lord Mayor of the City, Mr. Andrew Wilson 🇮🇳🇦🇺 pic.twitter.com/n6o3CitPFL
— President of India (@rashtrapatibhvn) November 22, 2018
ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್ನಲ್ಲಿ ಗಾಂಧೀಜಿ ಅವರ ಪ್ರತಿಮೆ ಇರಿಸಲಾಗಿದ್ದು, ಶಿಲ್ಪಿಗಳಾದ ರಾಮ್ ಮತ್ತು ಅನಿಲ್ ಸುತಾರ್ ಅವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಭಾರತ ಸರ್ಕಾರ ಈ ಪ್ರತಿಮೆಯನ್ನು ಆಸ್ಟ್ರೇಲಿಯಾಕ್ಕೆ ಉಡುಗೊರೆಯಾಗಿ ನೀಡಿದೆ.