Russia-Ukraine ನಡುವೆ ಭಯಾನಕ ಯುದ್ಧದ ಸಂಕೇತ! ರಾಜಧಾನಿ ಕೀವ್ ನತ್ತ ಸಾಗುತ್ತಿದೆ 40 ಮೈಲಿ ಉದ್ದ ರಷ್ಯಾ ಬೆಂಗಾವಲು ಪಡೆ

Russia Ukraine War: ದಕ್ಷಿಣ ಬೆಲಾರುಸ್‌ನಲ್ಲಿ ಹೆಚ್ಚುವರಿ ಭೂಪಡೆಗಳ ನಿಯೋಜನೆ ಮತ್ತು ನೆಲದ ದಾಳಿಗಾಗಿ  ಹೆಲಿಕಾಪ್ಟರ್ ಘಟಕಗಳನ್ನು ಗಮನಿಸಲಾಗಿದೆ ಎಂದು ಖಾಸಗಿ ಯುಎಸ್ ಉಪಗ್ರಹ ಕಂಪನಿಯಾದ ಮ್ಯಾಕ್ಸರ್ ಟೆಕ್ನಾಲಜೀಸ್ ಹೇಳಿದೆ.

Written by - Nitin Tabib | Last Updated : Mar 1, 2022, 06:57 PM IST
  • ರಷ್ಯಾ ಸೇನೆಯ ಅತ್ಯಂತ ಉದ್ದನೆಯ ಬೆಂಗಾವಲು ಪಡೆ.
  • ರಾಜಧಾನಿ ಕೀವ್ ನತ್ತ ವೇಗವಾಗಿ ಧಾವಿಸುತ್ತಿದೆ.
  • 40 ಮೈಲಿಗಳಷ್ಟು ಉದ್ದನೆಯ ಬೆಂಗಾವಲು ಪಡೆ ಕೀವ್ ಸುತ್ತುವರೆಯುವುದೇ!
Russia-Ukraine ನಡುವೆ ಭಯಾನಕ ಯುದ್ಧದ ಸಂಕೇತ! ರಾಜಧಾನಿ ಕೀವ್ ನತ್ತ ಸಾಗುತ್ತಿದೆ 40 ಮೈಲಿ ಉದ್ದ ರಷ್ಯಾ ಬೆಂಗಾವಲು ಪಡೆ title=
Longest Russian Military Convoy (File Photo)

ಕೀವ್: Ukraine-Russia Tension - ಅತ್ಯಂತ ಉದ್ದವಾದ ರಷ್ಯಾ ಮಿಲಿಟರಿ (Longest Russian Military Convoy) ಬೆಂಗಾವಲು ಪಡೆ ಉಕ್ರೇನ್ ರಾಜಧಾನಿ ಕೀವ್ (Kyiv) ನತ್ತ  ವೇಗವಾಗಿ ಚಲಿಸುತ್ತಿದೆ. ಈ ಮೊದಲು ರಷ್ಯಾದ (Longest Russian Military Convoy Satellite Picture) ಈ ಬೆಂಗಾವಲು ಪಡೆಯ ಉದ್ದ ಸೋಮವಾರ ಕೇವಲ 17 ಮೈಲುಗಳಷ್ಟಿತ್ತು, ಆದರೆ ಇದೀಗ ಈಗ 40 ಮೈಲುಗಳಿಗೆ (ಸುಮಾರು 64 ಕಿ.ಮೀ) ಹೆಚ್ಚಾಗಿದೆ. ಉಪಗ್ರಹ ಕಂಪನಿಯೊಂದು ಈ ಮಾಹಿತಿ ನೀಡಿದೆ. ಕೀವ್ ನಗರವು ಶೀಘ್ರದಲ್ಲೇ ಮುತ್ತಿಗೆಗೆ ಮತ್ತು ಯುದ್ಧಕ್ಕೆ ಒಳಗಾಗಬಹುದು ಎಂದು ಯುಎಸ್ ಅಧಿಕಾರಿಗಳು ಈಗಾಗಲೇ ಎಚ್ಚರಿಸಿದ್ದಾರೆ. Ukrainian ಗಡಿಯಿಂದ ಉತ್ತರಕ್ಕೆ 20 ಮೈಲುಗಳಿಗಿಂತಲೂ ಕಡಿಮೆ ದೂರದಲ್ಲಿರುವ ದಕ್ಷಿಣ ಬೆಲಾರಸ್‌ನಲ್ಲಿ ಹೆಚ್ಚುವರಿ ಭೂ ಪಡೆಗಳ ನಿಯೋಜನೆಗಳು ಮತ್ತು ನೆಲದ ಮೇಲೆ ದಾಳಿಗಾಗಿ  ಹೆಲಿಕಾಪ್ಟರ್ ಘಟಕಗಳು ಕಂಡುಬಂದಿವೆ ಎಂದು ಖಾಸಗಿ US ಉಪಗ್ರಹ ಕಂಪನಿಯಾದ Maxar ಟೆಕ್ನಾಲಜೀಸ್ (Maxar Technologies) ಹೇಳಿದೆ.

ಬೆಂಗಾವಲು ಪಡೆ ಆಂಟೊನೊವ್ ಏರ್‌ಬೇಸ್‌ನಿಂದ ಕೇವಲ 17 ಮೈಲುಗಳಷ್ಟು ಉತ್ತರಕ್ಕೆ ಕೀವ್ ನಗರ ಕೇಂದ್ರದ ಉತ್ತರಕ್ಕೆ, ಉಕ್ರೇನ್-ಬೆಲಾರಸ್ ಗಡಿಗೆ ಸಮೀಪವಿರುವ ಪ್ರಿಬಿರ್ಸ್ಕ್‌ನ ಉತ್ತರಕ್ಕೆ ಮತ್ತು ಚೆರ್ನೋಬಿಲ್‌ನಲ್ಲಿರುವ ಪರಮಾಣು ರಿಯಾಕ್ಟರ್ ಬಳಿ ವಿಸ್ತರಿಸಿದೆ ಎಂದು ಮ್ಯಾಕ್ಸರ್ ಹೇಳಿದೆ. ಶ್ವೇತಭವನದ ಮೂಲಗಳು ಮಾಧ್ಯಮವೊಂದಕ್ಕೆ,  ಬೆಂಗಾವಲು ಪಡೆಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ  ಮತ್ತು ಅದರ  ಹೆಚ್ಚುತ್ತಿರುವ ಗಾತ್ರದ ಬಗ್ಗೆ ಮಾತ್ರವಲ್ಲದೆ ಹಿಂಸಾಚಾರ ಮತ್ತು ವಿವೇಚನೆಯಿಲ್ಲದ ಹತ್ಯೆಗಳ ಹೆಚ್ಚಳದ ಬಗ್ಗೆಯೂ ಕಳವಳ ವ್ಯಕ್ತಪಡಿಸಿವೆ.

ರಷ್ಯಾ ರಾಜಧಾನಿ ಕೀವ್ ಮುತ್ತಿಗೆಯ ಸಾಧ್ಯತೆ
ಸೋಮವಾರ ಕಾಂಗ್ರೆಸ್ ಸದಸ್ಯರಿಗೆ ಮಾಹಿತಿ ನೀಡಿರುವ ಯುಎಸ್ ಗುಪ್ತಚರ ಅಧಿಕಾರಿಗಳು ರಷ್ಯಾದ (Russia Military) ದಾಳಿಯ ಎರಡನೇ ಭಾರಿ ಅಲೆಯು ಉಕ್ರೇನ್ ಅನ್ನು ಸುತ್ತುವರಿಯುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.  ಯಾವ ರೀತಿ ಉಕ್ರೇನ್ ಪ್ರತಿರೋಧವನ್ನು ಕಡಿಮೆ ಮಾಡಲು ಭಾರಿ ಪ್ರಮಾಣದ ರಷ್ಯಾ ಸೈನಿಕರರನ್ನು ನಿರೀಕ್ಷಿಸಲಾಗುತ್ತಿದೆ ಎಂದು ಬ್ರಿಫಿಂಗ್ ನಲ್ಲಿ ವಿವರಿಸಲಾಗಿದೆ. ರಷ್ಯಾ ಸೇನೆ ಶೀಘ್ರದಲ್ಲಿಯೇ ಉಕ್ರೇನ್ ರಾಜಧಾನಿ ಕೀವ್ ಅನ್ನು ಸುತ್ತುವರೆಯುವ ಸಾಧ್ಯತೆಯನ್ನು ಮತ್ತೊಂದು ಮೂಲ ಬಹಿರಂಗಪಡಿಸಿದೆ.

ಇದನ್ನೂ ಓದಿ-ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಉಕ್ರೇನ್ ಸರ್ಕಾರದ ಮುಖ್ಯಕಚೇರಿ

ರಷ್ಯಾದ ಶೇ.75ರಷ್ಟು ಸೇನೆ ಉಕ್ರೇನ್ ನಲ್ಲಿದೆ: ವರದಿ
ಶೇ. 75ರಷ್ಟು ರಷ್ಯಾದ ಸೈನ್ಯವು ಉಕ್ರೇನ್‌ನಲ್ಲಿದೆ ಎಂದು ಅಮೆರಿಕದ ಗುಪ್ತಚರ ಮೂಲಗಳು ತಿಳಿಸಿವೆ. ವಾಟ್ಲಿಂಗ್ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಭೂ ಯುದ್ಧ ಮತ್ತು ಮಿಲಿಟರಿ ವಿಜ್ಞಾನದಲ್ಲಿ ಸಂಶೋಧನಾ  ಸಹೋದ್ಯೋಗಿಯಾಗಿರುವ  ಹಿರಿಯ ಯುಎಸ್ ರಕ್ಷಣಾ ಅಧಿಕಾರಿ ಡಾ ಜ್ಯಾಕ್ ಅವರು ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ರಷ್ಯಾದ ಸೈನ್ಯದ ದೊಡ್ಡ ಗುಂಪು ಬೆಲಾರಸ್‌ನಿಂದ ದಕ್ಷಿಣಕ್ಕೆ ಚಲಿಸುತ್ತಿದೆ ಮತ್ತು ಕೀವ್ ಮೇಲೆ ದಾಳಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಅವರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-Air India News: Air India ಗೆ Ilker Ayci ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬರುತ್ತಿಲ್ಲ! ಕಾರಣ ಇಲ್ಲಿದೆ

ರಷ್ಯಾದ ಬೆಂಗಾವಲು ಪಡೆ ಎಷ್ಟು ಉದ್ದವಾಗಿದೆ ಸ್ಯಾಟಲೈಟ್ ಕಣ್ಣುಗಳಲ್ಲಿಯೂ ಕೂಡ ಸಂಪೂರ್ಣ ಸೇರೆಯಾಗಿಲ್ಲ

ಸೋಮವಾರ ರಷ್ಯಾ ವಾಹನಗಳ ಬೆಂಗಾವಲು ಪಡೆ ಎಷ್ಟು ದೊಡ್ಡದಾಗಿತ್ತೆಂದರೆ ಅದು ಸಂಪೂರ್ಣವಾಗಿ ಉಪಗ್ರಹ ಚಿತ್ರಣದಲ್ಲಿಯೂ ಕೂಡ ಸೆರೆಹಿಡಿಯಲ್ಪಟ್ಟಿಲ್ಲ. ಕೆಲವೆಡೆ ಎರಡರಿಂದ ಮೂರು ಸಾಲುಗಳಲ್ಲಿ ವಾಹನಗಳಿವೆ.  ಆದರೆ, ಬೆಂಗಾವಲು ಪಡೆಯಲ್ಲಿರುವ ಎಲ್ಲಾ ವಾಹನಗಳು ಒಂದೇ ಅಂತಿಮ ಗಮ್ಯಸ್ಥಾನದತ್ತ ಹೊರಟಿವೆಯೇ ಅಥವಾ ಪಡೆಗಳು ವಿಭಜನೆಗೊಂಡು ರಾಜಧಾನಿಯನ್ನು ಸುತ್ತುವರಿಯುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾನುವಾರ, ಮ್ಯಾಕ್ಸರ್ ಬೆಂಗಾವಲು ಪಡೆಯ ಅಳತೆ ಮಾಡಿದಾಗ ನಂತರ ಉಕ್ರೇನ್‌ನ ಇವಾನ್‌ಕಿವ್ ಬಳಿ - ಅದು ಕೇವಲ 3.5 ಮೈಲುಗಳಷ್ಟು ಉದ್ದವಾಗಿತ್ತು.

ಇದನ್ನೂ ಓದಿ-ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಅನ್ನೇ ಏಕೆ ಆಯ್ಕೆ ಮಾಡುತ್ತಾರೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News