ಕೀವ್: Russia-Ukrain War Updates - ರಷ್ಯಾದ (Rashya) ತೋಪುಗಳು ಉಕ್ರೇನ್ ವಿರುದ್ಧ ಬೆಂಕಿ ಉಗುಳುತ್ತಿವೆ. ಮಾಸ್ಕೋ ಮೂಲಕ ನಡೆಸಲಾಗುತ್ತಿರುವ ವಿಧ್ವಂಸ ಕೃತ್ಯದ ವಿಡಿಯೋವೊಂದು ಬಹಿರಂಗವಾಗಿದೆ. ಈ ವಿಡಿಯೋ ನೋಡಿ ವ್ಲಾಡಿಮಿರ್ ಪುಟಿನ್ (Vladimir Putin) ಅವರ ಕೋಪದ ಪರಿಣಾಮ ಉಕ್ರೇನ್ (Ukraine) ಜನತೆ ಯಾವ ರೀತಿ ಎದುರಿಸುತ್ತಿದೆ ಎಂಬುದನ್ನು ನೀವು ಅಂದಾಜಿಸಬಹುದು. ವಿಡಿಯೋದಲ್ಲಿ ಉಕ್ರೇನ್ ರಸ್ತೆಯ ಮೇಲೆ ಸೈಕಲ್ ಸವಾರ ಹೊರಟಿರುವುದನ್ನು ನೀವು ಗಮನಿಸಬಹುದು. ಆಗಲೇ ಆಕಸ್ಮಿಕವಾಗಿ ವಾಯುದಾಳಿ ನಡೆಯುತ್ತದೆ ಹಾಗೂ ನೋಡುತ್ತಿದ್ದಂತೆಯೇ ಸ್ಫೋಟಗಳೊಂದಿಗೆ ಬೆಂಕಿ ಸದೃಶ್ಯದ ವಾತಾವರಣ ಎಲ್ಲೆಡೆ ಹರಡುತ್ತದೆ.
ಅಮಾಯಕ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ
ರಷ್ಯಾ ಗುರುವಾರ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ದಾಳಿ ಮುಂದುವರೆದಿದೆ ಉಕ್ರೇನ್‌ನ ಹಲವು ನಗರಗಳಲ್ಲಿ ಸ್ಫೋಟದ ಸದ್ದು ಪ್ರತಿಧ್ವನಿಸಿದೆ. ರಷ್ಯಾದ ಸೇನೆಯು ಇದವರೆಗೆ ಉಕ್ರೇನ್‌ನ 137 ಜನರನ್ನು ಹತ್ಯೆಗೈದಿದೆ ಎನ್ನಲಾಗುತ್ತಿದೆ. ಆದರೆ ನೂರಾರು ಮಂದಿ ಗಾಯಗೊಂಡಿದ್ದಾರೆ. ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ, ಈ ದಾಳಿಯಲ್ಲಿ ಅಮಾಯಕ ಜನರು ಸಹ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ವೈಮಾನಿಕ ದಾಳಿಯಲ್ಲಿ ಸೈಕಲ್ ಸವಾರರೊಬ್ಬರು (Ukraine War Viral Video) ಕೂಡ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಸೂರು ಕಳೆದುಕೊಂಡವರು ಆಶ್ರಯ ಹುಡುಕುತ್ತಿದ್ದಾರೆ.
ಈ ವಿಡಿಯೋ ಬಹಿರಂಗಗೊಳ್ಳುವ ಮುನ್ನ ಮತ್ತೊಂದು ವಿಡಿಯೋ ಹೊರಹೊಮ್ಮಿತ್ತು, ಅದರಲ್ಲಿ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಓಡುತ್ತಿರುವುದನ್ನು ನೀವು ಕಾಣಬಹುದು. ಸೂರು ಕಳೆದುಕೊಂಡ ಜನರು ದಾಳಿಯಿಂದ ತಪ್ಪಿಸಿಕೊಳ್ಳಲು ಆಶ್ರಯ ಹುಡುಕುತ್ತಿದ್ದಾರೆ. ಏತನ್ಮಧ್ಯೆ, ರಷ್ಯಾ ತನ್ನ ದಾಳಿಯನ್ನು ಬಹುಪಟ್ಟು ಹೆಚ್ಚಿಸಿರುವುದರಿಂದ ಶುಕ್ರವಾರ ಉಕ್ರೇನ್‌ಗೆ ಕಪ್ಪು ಸಾಬೀತಾಗಬಹುದು ಎಂದು ಉಕ್ರೇನಿಯನ್ ಅಧಿಕೃತ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಜನರನ್ನು ಸಿದ್ಧಪಡಿಸಲು ಸೂಚನೆಗಳು
ಉಕ್ರೇನ್ ರಾಜಧಾನಿ ಕೀವ್ ಅನ್ನು ಸುತ್ತುವರಿಯಲು ರಷ್ಯಾ ಯೋಜಿಸುತ್ತಿದೆ. ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ (Volodymyr Zelensky) ಅಸಹಾಯಕ ಸ್ಥಿತಿಯಲಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಬಲಕ್ಕೆ ಬಾರದ ಅಮೆರಿಕ ಮತ್ತು NATOವನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ. ಸೇನೆಯನ್ನು ಒಗ್ಗೂಡಿಸುವ ಆದೇಶ ಕೂಡ ನೀಡಿದ್ದಾರೆ. ಇದೇ ವೇಳೆ ಯುದ್ಧದಲ್ಲಿ ಹೋರಾಡಲು ಅರ್ಹರನ್ನು ಕೂಡ ಸಿದ್ಧಪಡಿಸಬೇಕು ಎಂದು ಅವರು ಉಕ್ರೇನ್ ಸೇನೆಗೆ ಹೇಳಿದ್ದಾರೆ.
The moment when civilians were shot in Ukraine. pic.twitter.com/VfrjtE3lCX
— REALIST (@realistqx1) February 24, 2022
ಇದನ್ನೂ ಓದಿ-Russia-Ukraine Conflict: ಇಂದು ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಪ್ರಧಾನಿ ಮೋದಿ ಮಾತುಕತೆ ಸಾಧ್ಯತೆ
ಸ್ಫೋಟಕ್ಕೆ ರಾಜಧಾನಿ ತತ್ತರ
ಶುಕ್ರವಾರ ಬೆಳಗ್ಗೆಯಿಂದ ಕೀವ್‌ನಲ್ಲಿ 6 ಸ್ಫೋಟಗಳು ಸಂಭವಿಸಿವೆ ಎಂದು ಉಕ್ರೇನ್‌ನ ಆಂತರಿಕ ಸಚಿವ Anton Gerashchenko ಹೇಳಿದ್ದಾರೆ. ಈ ಸ್ಫೋಟಗಳನ್ನು ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ನಡೆಸಲಾಗಿದೆ. ಆದಾಗ್ಯೂ, ರಷ್ಯಾ ದಾಳಿಗೆ ಪ್ರತ್ಯುತ್ತರ ನೀಡಿರುವ ಉಕ್ರೇನ್, ರಷ್ಯಾದ ವಿಮಾನವನ್ನು ಪತನಗೊಳಿಸಿದೆ ಎಂದು ಹೇಳಿದೆ. ಇಂದು ಬೆಳಗ್ಗೆಯಿಂದಲೇ ಉಕ್ರೇನ್‌ನ ರಾಜಧಾನಿ ಕೀವ್ (Kyiv) ಭಾರೀ ಸ್ಫೋಟಗಳಿಂದ ನಲುಗಿದೆ. ಇದಲ್ಲದೆ, ರಷ್ಯಾದ ಪಡೆಗಳು ಉಕ್ರೇನಿಯನ್ ನಗರವಾದ ಕೊನೊಟಾಪ್ ಅನ್ನು ಸುತ್ತುವರೆದಿವೆ ಮತ್ತು ಉಳಿದ ಪಡೆಗಳು ಕೀವ್ ಕಡೆಗೆ ಚಲಿಸುತ್ತಿವೆ ಎಂದು ಕೂಡ ವರದಿಯಾಗಿದೆ.
ಇದನ್ನೂ ಓದಿ-Russia-Ukraine War:ಯುದ್ಧದ ಮಧ್ಯೆ ಭಾವನಾತ್ಮಕ ಚಿತ್ರ! ಉಕ್ರೇನಿಯನ್ ಮಹಿಳೆ ಅಳುತ್ತಿರುವ ಫೋಟೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ