Covid-19 Second Wave: ಕೋವಿಡ್ 2ನೇ ಅಲೆಯ 'ಹೊಸ ರೋಗ ಲಕ್ಷಣಗಳ' ಬಗ್ಗೆ ಇರಲಿ ಎಚ್ಚರ!

ಹೊಸ ಅಧ್ಯಯನದ ಪ್ರಕಾರ, ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತಿವೆ, 

Last Updated : Apr 9, 2021, 10:49 AM IST
  • ಕೋವಿಡ್ ಎರಡನೇ ಅಲೆ ಹೊಸ ರೋಗ ಲಕ್ಷಣಗಳು ಕೊರೋನಾದ ಸಾಮಾನ್ಯ ಲಕ್ಷಣಗಳು ಜ್ವರ, ಬಾಡಿ ಪೆನ್, ವಾಸನೆ ಮತ್ತು ನಳಿಗೆ ರುಚಿ ಕಳೆದುಕೊಳ್ಳುವುದು
  • ಹೊಸ ಅಧ್ಯಯನದ ಪ್ರಕಾರ, ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತಿವೆ,
  • ಇವುಗಳಲ್ಲಿ ಯಾವುದಾದರು ನಿಮ್ಮಲ್ಲಿ ಕಂಡು ಬಂದರೆ ಲಘುವಾಗಿ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಬಹಳ ಒಳ್ಳೆಯದು.
Covid-19 Second Wave: ಕೋವಿಡ್ 2ನೇ ಅಲೆಯ 'ಹೊಸ ರೋಗ ಲಕ್ಷಣಗಳ' ಬಗ್ಗೆ ಇರಲಿ ಎಚ್ಚರ! title=

ನವದೆಹಲಿ: ದೇಶದಲ್ಲಿ ಕರೋನವೈರಸ್ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಂಡು ಬರುತ್ತಿವೆ. ದೇಶದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಆಗುವ ಸಾಧ್ಯತೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಸಧ್ಯದ ಪರಿಸ್ಥಿತಿಯು ಸರ್ಕಾರದ ಕಳವಳವನ್ನೂ ಹೆಚ್ಚಿಸಿದೆ. ಕೋವಿಡ್-19 ದೇಶದ ಜನರ ಆರೋಗ್ಯದ ವ್ಯವಸ್ಥೆಯ ಮೇಲೆ ತೀವ್ರವಾಗಿ ಪರಿಣಾಮ ಬರುತ್ತಿದೆ.

ಭಾರತದಲ್ಲಿ ಸಧ್ಯ ಕರೋನವೈರಸ್ ಎರಡನೇ ಅಲೆ(Second Wave Coronavirus) ತಾಂಡವಾಡುತ್ತಿದೆ. ತಜ್ಞರು ಹೇಳುವ ಪ್ರಕಾರ, ಎರಡನೇ ಅಲೆಯುವು ಕಳೆದ ವರ್ಷಕ್ಕಿಂತ ಈ ವರ್ಷ ಬಹಳ ವೇಗವಾಗಿ ಹರಡುತ್ತಿದೆ ಏಕೆಂದರೆ ಕಳೆದ ವರ್ಷ ಹೆಚ್ಚಾಗಿ ಕರೋನವೈರಸ್ ಸೋಂಕಿಗೆ ವಯೋವೃದ್ಧರು ಒಳಗಾಗಿದ್ದರು.  ಆದ್ರೆ, ಈ ವರ್ಷ ಹೆಚ್ಚಾಗಿ ಮಕ್ಕಳು ಮತ್ತು ಗರ್ಭಿಣಿಯರು ಒಳಗಾಗಿದ್ದಾರೆ.

ಇದನ್ನೂ ಓದಿ : Chia Seeds with Milk: ದೇಹ ತೂಕ ಇಳಿಸಲು ಮತ್ತು ಆರೋಗ್ಯಕ್ಕೆ ಒಳ್ಳೆಯದು 'ಚಿಯಾ ಬೀಜಗಳು'..!

ಕೋವಿಡ್ ಎರಡನೇ ಅಲೆ ಹೊಸ ರೋಗ ಲಕ್ಷಣಗಳು ಕೊರೋನಾದ ಸಾಮಾನ್ಯ ಲಕ್ಷಣಗಳು ಜ್ವರ, ಬಾಡಿ ಪೆನ್(Body Pain), ವಾಸನೆ ಮತ್ತು ನಳಿಗೆ ರುಚಿ ಕಳೆದುಕೊಳ್ಳುವುದು, ಶೀತ, ಉಸಿರಾಟದ ತೊಂದರೆ ಇವು ಅಲ್ಲದೆ ಕೆಲವು ಅಧ್ಯಯನಗಳು ಕಣ್ಣುಗಳು ಕೆಂಪಗಾಗುವುದು, ಗ್ಯಾಸ್ಟ್ರೋನೊಮಿಕಲ್  ಕಂಡಿಷನ್ಸ್ ಮತ್ತು ಶ್ರವಣದೋಷ ವೈರಸ್ ಸೋಂಕಿನಿಂದ ಕಂಡು ಬರುತ್ತಿರುವ ಲಕ್ಷಣಗಳು ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು

ನೀವು ಗಮನಿಸಬೇಕಾದ ಇನ್ನೂ ಕೆಲವು ಹೊಸ ರೋಗ ಲಕ್ಷಣಗಳು ಇಲ್ಲಿವೆ:

ಜಠರಗೆ ಸಂಬಂಧಿಸಿದ ರೋಗ ಲಕ್ಷಣಗಳು: ಎರಡನೇ ಅಲೆ ಕೋವಿಡ್(Covid 19) ಸೋಂಕು ಉಸಿರಾಟದ ಮೇಲೆ ಮೊದಲು ಪರಿಣಾಮ ಬೀರುತ್ತದೆ. ಹೊಸ ಅಧ್ಯಯನದ ಪ್ರಕಾರ, ಅತಿಸಾರ, ವಾಂತಿ, ಹೊಟ್ಟೆ ನೋವು ಮತ್ತು ವಾಕರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತಿವೆ, ಇವುಗಳಲ್ಲಿ ಯಾವುದಾದರು ನಿಮ್ಮಲ್ಲಿ ಕಂಡು ಬಂದರೆ ಲಘುವಾಗಿ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮನ್ನು ಪರೀಕ್ಷಿಸಿಕೊಳ್ಳುವುದು ಬಹಳ ಒಳ್ಳೆಯದು.

ಇದನ್ನೂ ಓದಿ : Benefits of Flaxseeds: ಪ್ರತಿದಿನ 1 ಚಮಚ 'ಅಗಸೆಬೀಜ ಸೇವಿಸಿದ್ರೆ ದೇಹಕ್ಕೆ ಎಷ್ಟು ಲಾಭಗಳು ಗೊತ್ತಾ?

ಕಣ್ಣುಗಳು ಕೆಂಪಗಾಗುವುದು: ಕೆಂಪು ಕಣ್ಣುಗಳು ಅಥವಾ ಕಾಂಜಂಕ್ಟಿವಿಟಿಸ್ ಇವು ಕೋವಿಡ್ ಎರಡನೇ ಅಲೆಯ ಸಂಕೇತವಾಗಿದೆ. ಇದರಿಂದ ನಿಮಗೆ ಕಣ್ಣು ಕೆಂಪಾಗಿ(Red Eyes) ಕಣ್ಣಲ್ಲಿ ನೀರು ಸುರಿಯಲು ಶುರುವಾಗುತ್ತದೆ. ಅಲ್ಲದೆ ಕಣ್ಣು ನೋವು ಬರಲು ಕಾರಣವಾಗುತ್ತದೆ. ಚೀನಾದ ಅಧ್ಯಯನದ ಪ್ರಕಾರ ಈ ರೋಗ ಲಕ್ಷಣಗಳು ಕಂಡು ಬಂದರೆ ನೀವು ಎರಡನೇ ಅಲೆ ಕೋವಿಡ್ ಸೋಂಕಿಗೆ ತುತ್ತಾಗಿದ್ದಿರಿ ಅಂತಲೇ ಅರ್ಥ ಎಂದು ಹೇಳಿದ್ದಾರೆ. 

ಇದನ್ನೂ ಓದಿ : Watermelon Peel Benefits: ಕಲ್ಲಂಗಡಿ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ?

ಮಿದುಳಿನ ಮೇಲೆ ಬೀರುತ್ತೆ ಬಲವಾದ ಪರಿಣಾಮ: ಈ ಎರಡನೇ ಅಲೆ ಕೊರೊನಾವೈರಸ್(Coronavirus) ನೆನಪಿನ ಶಕ್ತಿ ಮೇಲೆ ಬಲವಾದ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಗೊಂದಲಕ್ಕೆ ಒಳಗಾಗುವುದು ಅಥವಾ ವಿಷಯಗಳನ್ನು ನೆನಪಿಟ್ಟುಕೊಳ್ಳುವಲ್ಲಿ ತೊಂದರೆ ಅನುಭವಿಸುವುದು ಎರಡನೇ ಅಲೆಯ ಸಂಕೇತವಾಗಿದೆ. ಈ ರೋಗಲಕ್ಷಣಗಳಿಗೆ ಇತರ ಕಾರಣಗಳಿರಬಹುದು, ಆದರೆ ಯಾವುದಕ್ಕೂ ಒಂದು ಸಲ ಪರೀಕ್ಷಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ : World Health Day 2021: ಈ 5 ಸರಳ ಅಭ್ಯಾಸಗಳು ನಿಮ್ಮ ದೇಹದ ಜೊತೆಗೆ ಮನಸ್ಸನ್ನೂ ಸದೃಢವಾಗಿರಿಸುತ್ತೆ

ವಿಚಿತ್ರ ರೀತಿಯ ಕೆಮ್ಮು: ಎರಡನೇ ಅಲೆ ಕೊರೊನಾವೈರಸ್ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಈ ವಿಚಿತ್ರ ರೀತಿಯ ಕೆಮ್ಮು ಕೂಡ ಒಂದಾಗಿದೆ. ಏಕೆಂದರೆ ಈ ವೈರಸ್(Virus) ಪ್ರಾಥಮಿಕವಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ದಾಳಿ ಮಾಡುತ್ತದೆ. ಇದರಿಂದ ವ್ಯಕ್ತಿ ಬದುಕುಳಿಯುವುದು ಕಷ್ಟವಾಗುತ್ತದೆ.  ಈ ಕೆಮ್ಮು ಹೆಚ್ಚಾದರೆ ನಿಮ್ಮ ಧ್ವನಿಯನ್ನು ಬದಲಾಯಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Nail Biting Habit: ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಆರೋಗ್ಯದ ಮೇಲೆ ಬೀಳಲಿದೆ ಭಾರೀ ಪರಿಣಾಮ

ಶ್ರವಣ ದೋಷ: ಇಂಟರ್ನ್ಯಾಷನಲ್ ಜರ್ನಲ್ ಆಫ್ ಆಡಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎರಡನೇ ಅಲೆಯ ಕೋವಿಡ್ ಸೋಂಕು ಶ್ರವಣೇಂದ್ರಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ. ಕೋವಿಡ್ ನಿಂದ ಶ್ರವಣ ದೋಷ ಮತ್ತು ವೆಸ್ಟಿಬುಲರ್ ಸಮಸ್ಯೆಗಳ ನಡುವಿನ ಸಂಬಂಧ ಪಟ್ಟ ಹಾಗೆ 56 ಅಧ್ಯಯನಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ನೀವು ಕೆಲವು ರೀತಿಯ ಶ್ರವಣ ದೋಷ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಅದು ಕರೋನವೈರಸ್ ಎರಡನೇ ಅಲೆಯ ಸಂಕೇತವಾಗಿರಬಹುದು.

ಇದನ್ನೂ ಓದಿ : Warm Water In Summers: ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿಯೂ ಬಿಸಿ ನೀರು ಸೇವಿಸಿ, ಈ ಸಮಸ್ಯೆಗಳಿಂದ ದೂರವಿರಿ

ಮೂಗು ಮತ್ತು ನಾಲಿಗೆ ರುಚಿ-ವಾಸನೆ ಕೆಳೆದುಕೊಳ್ಳುವುದು: ಮೂಗು ವಾಸನೆ ಕಳೆದುಕೊಳ್ಳುವುದು ಮತ್ತು ನಾಲಿಗೆ ರುಚಿ ಕೆಳೆದುಕೊಳ್ಳುವುದು ಕೋವಿಡ್ ಎರಡನೇ ಅಲೆಯ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News