ವಾಷಿಂಗ್ಟನ್ ಡಿಸಿ: ಫೆಡರಲ್ ಸೇವೆಯಲ್ಲಿ ಎಚ್ 1-ಬಿ ವೀಸಾ ಹೊಂದಿರುವವರನ್ನು ನೇಮಕ ಮಾಡುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಷೇಧಿಸಿದ್ದಾರೆ. ಇದು ಭಾರತೀಯ ಐಟಿ ವೃತ್ತಿಪರರಿಗೆ ದೊಡ್ಡ ಹಿನ್ನಡೆಯೆಂದು ಪರಿಗಣಿಸಲಾಗುತ್ತಿದೆ. ಅಮೆರಿಕದ ಸರ್ಕಾರಿ ಉದ್ಯೋಗಗಳಲ್ಲಿ ಅಮೆರಿಕದ ನಾಗರಿಕರಿಗೆ ಆದ್ಯತೆ ನೀಡುವ ಡೊನಾಲ್ಡ್ ಟ್ರಂಪ್ (Donald Trump) ಈ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ.
ಈ ಮೊದಲು ಜೂನ್ 23 ರಂದು ಡೊನಾಲ್ಡ್ ಟ್ರಂಪ್ ಎಚ್ 1-ಬಿ ವೀಸಾಗಳನ್ನು ನೀಡುವುದನ್ನು ನಿಷೇಧಿಸಿದ್ದರು. ಇದರೊಂದಿಗೆ ಇತರ ವಿದೇಶಿ ಪ್ರಜೆಗಳಿಗೆ ಕೆಲಸದ ಪರವಾನಗಿ ನೀಡುವುದನ್ನು ನಿಷೇಧಿಸಿದರು. ಕೋವಿಡ್ -19 ಅಂದರೆ ಕರೋನಾದ ಕಾರಣದಿಂದಾಗಿ ಹೋಗುತ್ತಿರುವ ಅಮೆರಿಕನ್ ನಾಗರಿಕರ ಉದ್ಯೋಗವನ್ನು ಉಳಿಸುವುದೇ ಇದರ ಹಿಂದಿನ ಕಾರಣ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ. ಈ ನಿಷೇಧವು ಜೂನ್ 24 ರಿಂದ ಮಾತ್ರ ಜಾರಿಯಾಗಿದೆ.
ಅಮೆರಿಕದಲ್ಲಿ ಮುಂದುವರೆದ ಕರೋನಾ ಹಾವಳಿ, ಈ ಮೂರು ದೊಡ್ಡ ನಗರಗಳಲ್ಲಿ ಅತಿ ಹೆಚ್ಚು ಸಾವು
ಎಚ್ 1-ಬಿ ವೀಸಾವನ್ನು ಭಾರತೀಯ ಐಟಿ ವೃತ್ತಿಪರರ ಮೊದಲ ಆಯ್ಕೆಯೆಂದು ಪರಿಗಣಿಸಲಾಗಿದೆ, ಏಕೆಂದರೆ ಅದು ಅವರಿಗೆ ಅಮೆರಿಕನ್ ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶಗಳನ್ನು ನೀಡುತ್ತದೆ.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, "ನಾನು ಇಂದು ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶ ಎಂದರೆ ಅಮೆರಿಕದ ನಾಗರಿಕರಿಗೆ ಮಾತ್ರ ಯುಎಸ್ ಸರ್ಕಾರಿ ಉದ್ಯೋಗಗಳಲ್ಲಿ ಉದ್ಯೋಗ ಸಿಗುತ್ತದೆ" ಎಂದು ಹೇಳಿದರು. ಅಮೆರಿಕದ ನಾಗರಿಕರು ನಿರುದ್ಯೋಗಿಗಳಾಗುವುದನ್ನು ಸಹಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.
"Today, I am signing an executive order to ensure that the Federal government lives by a very simple rule: Hire American." 🇺🇸 pic.twitter.com/G8YGU99XMb
— The White House (@WhiteHouse) August 3, 2020
ನಾವು ಕೊಟ್ಟ ಮಾತಿನಂತೆ ಎಚ್ 1- ಬಿ (H1-B) ವೀಸಾ ನೀತಿಯನ್ನು ಬದಲಾಯಿಸಿದ್ದೇವೆ. ಇದರಿಂದ ವಲಸೆ ಕಾರ್ಮಿಕರನ್ನು ಅಮೆರಿಕದ ಪ್ರಜೆಯಿಂದ ಬದಲಾಯಿಸಲಾಗುವುದಿಲ್ಲ. ಎಚ್ 1-ಬಿ ವೀಸಾಗಳು ಉನ್ನತ ಮಟ್ಟದ ವೃತ್ತಿಪರರಿಗಾಗಿರಬೇಕು, ಇದರಿಂದಾಗಿ ಅವರು ಅಮೆರಿಕಾದ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತಾರೆ, ಅಗ್ಗದ ದುಡಿಮೆಗೆ ಬದಲಾಗಿ ನಿರುದ್ಯೋಗಿ ಅಮೆರಿಕನ್ ನಾಗರಿಕರಲ್ಲ ಎಂದು ಟ್ರಂಪ್ ವಿವರಿಸಿದರು.
ಅಮೆರಿಕದಲ್ಲಿ ಅನಿಯಂತ್ರಿತ ಕರೋನಾವೈರಸ್ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಿಷ್ಟು
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೆನ್ನೆಸ್ಸೀ ಥಾಂಪ್ಸನ್ ಪ್ರಾಧಿಕಾರದ ಅಧಿಕಾರಿ ಸ್ಕಿಪ್ ಥಾಂಪ್ಸನ್ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಿದ್ದಾರೆಂದು ತಿಳಿಸಿದರು. ಏಕೆಂದರೆ ಅವರು ವಿದೇಶಿ ವೃತ್ತಿಪರರನ್ನು ನೇಮಿಸಿಕೊಂಡಿದ್ದಾರೆ. ಟೆನ್ನೆಸ್ಸೀ ಕಣಿವೆ ಪ್ರಾಧಿಕಾರದ ಯಾವುದೇ ಅಧಿಕಾರಿಗಳು ಮತ್ತೆ ಈ ತಪ್ಪನ್ನು ಮಾಡಿದರೆ ಅವರನ್ನು ಸಹ ಹುದ್ದೆಯಿಂದ ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಮೆರಿಕದ ನಾಗರಿಕರಿಗೆ ಮೋಸ ಮಾಡುವ ಮೂಲಕ ವಿದೇಶಿ ಕಾರ್ಮಿಕರಿಗೆ ಉದ್ಯೋಗ ನೀಡುವವರನ್ನು ಕೂಡಲೇ ತೆಗೆದುಹಾಕುತ್ತೇನೆ ಎಂದು ಟ್ರಂಪ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.