Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!

ಬುರ್ಜ್ ಖಲೀಫಾ ಕಟ್ಟಡದ ಮೇಲೆ ಎಲ್ಇಡಿ ಪ್ರೊಜೆಕ್ಟರ್ ಮೂಲಕ ಗಾಂಧೀಜಿ ಅವರ ಜೀವನ ಸಂದೇಶವನ್ನು ಸಾರುವ ಮೂಲಕ ದುಬೈ ವಿಶೇಷ ಗೌರವ ಸಲ್ಲಿಸಿದೆ. 

Last Updated : Oct 3, 2018, 03:33 PM IST
Superb Video: ದುಬೈನ ಬುರ್ಜ್‌ ಖಲೀಫಾ ಮೇಲೆ ಮೂಡಿದ ಗಾಂಧೀಜಿ!  title=

ನವದೆಹಲಿ: ದೇಶಾದ್ಯಂತ ಮಹಾತ್ಮ ಗಾಂಧೀಜಿ 150ನೇ ಜನ್ಮದಿನಚರನೆಯನ್ನು ಆಚರಿಸಿದಂತೆಯೇ ದುಬೈ ಗಾಂಧೀಜಿಗೆ ವಿಶೇಷ ನಮನ ಸಲ್ಲಿಸಿದೆ. 

ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಎಲ್ಇಡಿ ಪ್ರೊಜೆಕ್ಟರ್ ಮೂಲಕ ಗಾಂಧೀಜಿ ಅವರ ಜೀವನ ಸಂದೇಶವನ್ನು ಸಾರುವ ಮೂಲಕ ವಿಶೇಷ ರೀತಿಯ ಗೌರವ ಸಲ್ಲಿಸಿದೆ. 

ಈ ಹಿಂದೆಯೂ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಬುರ್ಜ್ ಖಲಿಫಾ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಮೂಡಿಸಿ ಸಂಭ್ರಮಿಸಲಾಗಿತ್ತು.

Trending News