ghost of Princess Diana: ಬ್ರಿಟನ್ ಅರಮನೆಯಲ್ಲಿ ಕಂಡಿತು ಪ್ರಿನ್ಸಸ್ ಡಯಾನಾ ಪ್ರೇತಾತ್ಮ! ಆತ್ಮದ ವಿಡಿಯೋ ನೋಡಿ

ಇತ್ತೀಚಿಗೆ ರಾಣಿ ಎಲಿಜಬೆತ್ II ರ ಮರಣದ ನಂತರ ಚಾರ್ಲ್ಸ್ III ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರ ಮೊದಲ ಪತ್ನಿ ಹೆಸರು ಡಯಾನ. ಇಂದಿಗೂ ಈಕೆಯ ಹೆಸರು ಕೇವಲ ರಾಜಮನೆತನವಲ್ಲದೆ, ಬ್ರಿಟನ್ ದೇಶದ ಜನರು ಕೊಂಡಾಡುವಂತೆ ಮಾಡುತ್ತದೆ.

Written by - Bhavishya Shetty | Last Updated : Sep 16, 2022, 12:25 PM IST
    • ಡಯಾನಳ ಆತ್ಮ ಇಂದಿಗೂ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ
    • ಪ್ರವಾಸಿಗನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ಪ್ರಿನ್ಸಸ್ ಡಯಾನಾ ಪ್ರೇತಾತ್ಮ!
    • ಬ್ರಿಟನ್ ರಾಜಮನೆತನದ ಕೆಲವೊಂದು ವಿಚಾರಗಳು ಜನರನ್ನು ಬೆಂಬಿಡದೆ ಕಾಡುವಂತೆ ಮಾಡಿದೆ
ghost of Princess Diana: ಬ್ರಿಟನ್ ಅರಮನೆಯಲ್ಲಿ ಕಂಡಿತು ಪ್ರಿನ್ಸಸ್ ಡಯಾನಾ ಪ್ರೇತಾತ್ಮ! ಆತ್ಮದ ವಿಡಿಯೋ ನೋಡಿ title=
ghost of Princess Diana

ಬ್ರಿಟನ್ ರಾಜಮನೆತನದ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ! ಈ ಮನೆತನದ ಬಗ್ಗೆ ಅನೇಕರಿಗೆ ಅನೇಕ ವಿಚಾರಗಳು ತಿಳಿದಿಲ್ಲ. ಆದರೆ ಗೌಪ್ಯತೆ ಕಾಪಾಡಬೇಕೆಂದುಕೊಂಡರೂ ಕೆಲವೊಂದು ವಿಚಾರಗಳು ಜನರನ್ನು ಬೆಂಬಿಡದೆ ಕಾಡುವಂತೆ ಮಾಡಿದೆ. ಅದರಲ್ಲಿ ಈಗಿನ ರಾಜನ ಚಾರ್ಲ್ಸ್ III ಅವರ ಮೊದಲ ಪತ್ನಿ ಪ್ರಿನ್ಸಸ್ ಡಯಾನ ಜೊತೆಗಿನ ಸಂಬಂಧ, ಜೀವನ ಮತ್ತು ಆಕೆಯ ಸಾವಿನ ರಹಸ್ಯ. 

ಇದನ್ನೂ ಓದಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆಗೆ ಯತ್ನ..!

ಇತ್ತೀಚಿಗೆ ರಾಣಿ ಎಲಿಜಬೆತ್ II ರ ಮರಣದ ನಂತರ ಚಾರ್ಲ್ಸ್ III ಬ್ರಿಟನ್ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರ ಮೊದಲ ಪತ್ನಿ ಹೆಸರು ಡಯಾನ. ಇಂದಿಗೂ ಈಕೆಯ ಹೆಸರು ಕೇವಲ ರಾಜಮನೆತನವಲ್ಲದೆ, ಬ್ರಿಟನ್ ದೇಶದ ಜನರು ಕೊಂಡಾಡುವಂತೆ ಮಾಡುತ್ತದೆ. ರಾಜಕುಮಾರಿಯಾಗಿದ್ದರೂ ಸಹ ಸಾಮಾನ್ಯ ಮಹಿಳೆಯಂತೆ ಬದುಕುತ್ತಿದ್ದ ಡಯಾನ ಜನರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.

ಆದರೆ ಚಾರ್ಲ್ಸ್ III ಕ್ಯಾಮಿಲಾ (ಚಾರ್ಲ್ಸ್ ಅವರ ಈಗಿನ ಪತ್ನಿ) ಜೊತೆಗೆ ಹೊಂದಿದ್ದ ಅಕ್ರಮ ಸಂಬಂಧ ಡಯಾನ ಜೊತೆಗಿನ ದಾಂಪತ್ಯವನ್ನು ಕೊನೆಯಾಗುವಂತೆ ಮಾಡಿತ್ತು. 1996ರಲ್ಲಿ ಬೇರೆ ಬೇರೆಯಾಗಿ ಜೀವನ ನಡೆಸಲು ಮುಂದಾದ ಡಯಾನ ಮತ್ತು ಚಾರ್ಲ್ಸ್ III ತಮ್ಮ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದರು. ಆದರೆ ಇದಾಗಿ ಒಂದು ವರ್ಷ ಕಳೆಯುದರೊಳಗೆ ಅಂದರೆ 1997ರಲ್ಲಿ ಭೀಕರ ಕಾರ್ ಆಕ್ಸಿಡೆಂಟ್ ನಲ್ಲಿ ಡಯಾನ ಸಾವನ್ನಪ್ಪಿದರು.

ಡಯಾನ ಸಾವಿನ ಸುದ್ದಿ ಕೇಳಿದ ಬ್ರಿಟನ್ ಒಂದು ಬಾರಿ ಶಾಕ್ ಗೆ ಒಳಗಾಗಿತ್ತು. ಅಷ್ಟೇ ಅಲ್ಲದೆ, ಡಯಾನ ವಿವಾಹ ವೈಭವವನ್ನು ಸಂತೋಷದಿಂದ ಕಂಡಿದ್ದ ಬ್ರಿಟನ್, ಆಕೆಯ ಅಂತಿಮ ಸಂಸ್ಕಾರವನ್ನೂ ಸಹ ಕಣ್ಣೀರಿನಿಂದ ಕಂಡಿತ್ತು ಎಂಬುದು ವಿಷಾದ. ಆದರೆ ಡಯಾನಳ ಆತ್ಮ ಇಂದಿಗೂ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಾರೆ.

 

 

ಕೆಲ ಸಾಕ್ಷ್ಯಚಿತ್ರಗಳು ಈ ಬಗ್ಗೆ ಮಾಹಿತಿಯನ್ನು ನೀಡಿವೆ. ಇದಕ್ಕೆ ಪುರಾವೆ ಎಂಬಂತೆ, ಚೀನಾದ ಪ್ರವಾಸಿಗನೊಬ್ಬ ಅರಮನೆಯಲ್ಲಿ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಪ್ರಿನ್ಸಸ್ ಡಯಾನರನ್ನು ಹೋಲುವ ಚಿತ್ರ ಗೋಡೆಯ ಮೇಲೆ ಗೋಚರವಾಗಿದೆ. ಒಂದು ಬಾರಿ ಮಾತ್ರ ಈ ಚಿತ್ರ ಕಂಡಿದ್ದು, ಇದನ್ನು ನೋಡಿದ ಅನೇಕರು ಡಯಾನ ಆತ್ಮವಿದು ಎಂದು ಹೇಳಿದ್ದಾರೆ. 

ಇದನ್ನೂ ಓದಿ: BRITAIN : ಭಾರತದ ಕೊಹಿನೂರ್ ಸೇರಿ ಬ್ರಿಟನ್‌ ದೋಚಿದ ಅಮೂಲ್ಯ ವಸ್ತಗಳಿವು!

ಆದರೆ ಈ ವಿಡಿಯೋ ಎಷ್ಟರ ಮಟ್ಟಿಗೆ ನಿಜ ಎಂಬುದು ತಿಳಿದಿಲ್ಲ. ಸದ್ಯ ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ನೋಡಬಹುದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News