ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಭಾರಿ ಹವಾ..!

'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ಟೈಟಲ್‌ನ ಕೇಳಿದರೆ ಸಾಕು ಮೈನವಿರೇಳುವುದು ಪಕ್ಕಾ. ಯಾಕಂದ್ರೆ ವೆಬ್ ಸಿರೀಸ್ ಲೋಕದಲ್ಲಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಅಷ್ಟು ಹವಾ ಇಟ್ಟಿದೆ. ಇದೀಗ ಅಮೆಜಾನ್‌ ಪ್ರೈಮ್‌ನಲ್ಲಿ ಹೊಸ ಸೀರಿಸ್‌ ಶುರುವಾಗೋದಕ್ಕೆ ಕೌಂಟ್‌ಡೌನ್‌ ಆರಂಭವಾಗಿದೆ. ಹೀಗಾಗಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಪಾರ್ಟ್‌ನ ಟ್ರೇಲರ್‌ ಹೈಪ್‌ ಕ್ರಿಯೇಟ್‌ ಮಾಡಿದೆ.

Written by - Malathesha M | Edited by - Manjunath N | Last Updated : Aug 28, 2022, 04:17 PM IST
  • ಇದೀಗ ಅಮೆಜಾನ್‌ ಪ್ರೈಮ್‌ನಲ್ಲಿ ಹೊಸ ಸೀರೀಸ್ ಪ್ರೀಮಿಯರ್‌ಗೂ ಮೊದಲೇ ಫೈನಲ್ ಟ್ರೇಲರ್‌ ಅನ್ನ ರಿಲೀಸ್‌ ಮಾಡಿರುವುದು ಕುತೂಹಲ ಕೆರಳಿಸಿದೆ.
  • ಅದರಲ್ಲೂ ಜಗತ್ತಿನ ಹಲವು ಭಾಷೆಗಳಲ್ಲಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಸ್ಟ್ರೀಮ್‌ ಆಗುತ್ತಿರುವುದು ಫ್ಯಾನ್ಸ್‌ಗೆ ಖುಷಿಯ ವಿಚಾರ.
ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಭಾರಿ ಹವಾ..!  title=

ನ್ಯೂಯಾರ್ಕ್ : 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ಟೈಟಲ್‌ನ ಕೇಳಿದರೆ ಸಾಕು ಮೈನವಿರೇಳುವುದು ಪಕ್ಕಾ. ಯಾಕಂದ್ರೆ ವೆಬ್ ಸಿರೀಸ್ ಲೋಕದಲ್ಲಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಅಷ್ಟು ಹವಾ ಇಟ್ಟಿದೆ. ಇದೀಗ ಅಮೆಜಾನ್‌ ಪ್ರೈಮ್‌ನಲ್ಲಿ ಹೊಸ ಸೀರಿಸ್‌ ಶುರುವಾಗೋದಕ್ಕೆ ಕೌಂಟ್‌ಡೌನ್‌ ಆರಂಭವಾಗಿದೆ. ಹೀಗಾಗಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಪಾರ್ಟ್‌ನ ಟ್ರೇಲರ್‌ ಹೈಪ್‌ ಕ್ರಿಯೇಟ್‌ ಮಾಡಿದೆ.

ಸುಮಾರು 2 ನಿಮಿಷ 40 ಸೆಕೆಂಡ್‌ ಇರುವ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಟ್ರೇಲರ್‌ ಸದ್ಯ ಯುಟ್ಯೂಬ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ. ಈ ಹಿಂದಿನ 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್' ವೆಬ್‌ ಸೀರಿಸ್‌ಗಳು ದೊಡ್ಡ ಹಿಟ್‌ ಕಂಡಿದ್ದು, ಇದೀಗ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಮತ್ತೇ ಅಂತಹದ್ದೇ ಹವಾ ಕ್ರಿಯೇಟ್‌ ಮಾಡಲು ಮುಂದಾಗಿದೆ.

ಸಮ್ ಥಿಂಗ್‌ ಸ್ಪೆಷಲ್..!

ಈ ಟ್ರೇಲರ್‌ನಲ್ಲಿ ಸೆಕೆಂಡ್‌ ಏಜ್‌ನ ಮಿಡಲ್‌ ಅರ್ಥ್‌ ಕಥಾನಕವಿದೆ. ಎಲ್ಲಾ ವೈರುಧ್ಯದ ನಡುವೆ ಟಾಕೀನ್‌ ಜನಪ್ರಿಯ ಪಾತ್ರಗಳ ಅನಾವರಣ ಹೇಗಾಗುತ್ತೆ ಮತ್ತು ಮಿಡಲ್ ಅರ್ಥ್‌ ದುಷ್ಟಕೂಟ ಪುನಃ ಬಲಶಾಲಿ ಆಗುವುದೇಗೆ ಎಂಬ ವಿವರಣೆ ಇದೆ. ಸಿರೀಸ್ ಪ್ರೀಮಿಯರ್‌ಗೂ ಮೊದಲೇ ಫೈನಲ್ ಟ್ರೇಲರ್‌ ಅನ್ನ ರಿಲೀಸ್‌ ಮಾಡಿರುವುದು ಕುತೂಹಲ ಕೆರಳಿಸಿದೆ. ಅದರಲ್ಲೂ ಜಗತ್ತಿನ ಹಲವು ಭಾಷೆಗಳಲ್ಲಿ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಸ್ಟ್ರೀಮ್‌ ಆಗುತ್ತಿರುವುದು ಫ್ಯಾನ್ಸ್‌ಗೆ ಖುಷಿಯ ವಿಚಾರ.

ಕನ್ನಡ ಟ್ರೇಲರ್..!‌

'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ‌ಜಗತ್ತಿನಾದ್ಯಂತ ಹತ್ತಾರು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ಅದರಲ್ಲೂ ಪ್ರಮುಖವಾಗಿ ಕನ್ನಡಿಗರ ತಾಯ್ನುಡಿ ಕನ್ನಡದಲ್ಲೂ ಪ್ರಸಾರವಾಗಲಿದೆ. ಹೀಗಾಗಿ ಅಮೆಜಾನ್‌ ಪ್ರೈಮ್‌ ಸಾಕಷ್ಟು ಮುತುವರ್ಜಿ ವಹಿಸಿದೆ. ಟ್ರೇಲರ್‌ ಲಾಂಚ್‌ ಹಿನ್ನೆಲೆ ಮುಂಬೈನಲ್ಲಿ ವಿಶೇಷ ಕಾರ್ಯಕ್ರಮ ಕೂಡ ನಡೆದಿತ್ತು. ಹೃತಿಕ್ ರೋಷನ್ ಮತ್ತು ತಮನ್ನಾ ಭಾಟಿಯಾ 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ತಂಡಕ್ಕೆ ಸಾಥ್‌ ನೀಡಿದ್ದರು. ಹಾಗೇ ಕನ್ನಡ ಟ್ರೇಲರ್‌ ರಿಲೀಸ್‌ ಅಗಿರುವುದು 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಮಾರ್ಫಿಡ್ ಕ್ಲಾರ್ಕ್ ಅವರು ಗಲಾಡ್ರಿಯಲ್ ಪಾತ್ರ ನಿರ್ವಹಿಸಿದ್ದಾರೆ. ಹಾಗೇ ಎಲ್ರಾಂಡ್‌ ಪಾತ್ರದಲ್ಲಿ ರಾಬರ್ಟ್‌ ಅರಮಾಯೋ, ಹೈ ಕಿಂಗ್‌ ಜಿಲ್ ಗಾಲಾಡ್ ಪಾತ್ರದಲ್ಲಿ ಬೆಂಜಮಿನ್ ವಾಕರ್ ಹಾಗೂ ಸೆಲೆಬ್ರಿಂಬೋರ್ ಕ್ಯಾರೆಕ್ಟರ್‌ನಲ್ಲಿ ಚಾರ್ಲ್ಸ್‌ ಎಡ್ವರ್ಡ್ಸ್ ಮಿಂಚಿದ್ದಾರೆ. ಹಾಗೇ ಇನ್ನೂ ಹಲವು ಪಾತ್ರಗಳು ಈ ಬಾರಿ ಕಮಾಲ್‌ ಮಾಡೋದು ಪಕ್ಕಾ ಆಗಿದೆ. 'ಲಾರ್ಡ್‌ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್' ಹವಾ ಜೋರಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News