ಕ್ರಿಕೆಟ್‌ನಲ್ಲಿ 'ಜಂಟಲ್ಮೆನ್ ಗೇಮ್' ಆಡಿದ ವ್ಯಕ್ತಿಯ ಯುಎನ್ ಭಾಷಣ ದ್ವೇಷದಿಂದ ತುಂಬಿತ್ತು

ಯುಎನ್ ಜನರಲ್ ಅಸೆಂಬ್ಲಿ: ಯುಎನ್‌ನಲ್ಲಿ ಭಾರತದ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ ಅವರು ಉತ್ತರಿಸುವ ಹಕ್ಕನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಕನ್ನಡಿ ತೋರಿಸಿದರು. ಯುಎನ್ ನಲ್ಲಿ ಇಮ್ರಾನ್ ಖಾನ್ ಅವರ ಭಾಷಣವು ದ್ವೇಷದಿಂದ ತುಂಬಿದೆ ಎಂದು ಅವರು ಹೇಳಿದರು.

Last Updated : Sep 28, 2019, 10:27 AM IST
ಕ್ರಿಕೆಟ್‌ನಲ್ಲಿ 'ಜಂಟಲ್ಮೆನ್ ಗೇಮ್' ಆಡಿದ ವ್ಯಕ್ತಿಯ ಯುಎನ್ ಭಾಷಣ ದ್ವೇಷದಿಂದ ತುಂಬಿತ್ತು title=
Pic courtesy: ANI

ನ್ಯೂಯಾರ್ಕ್: ನ್ಯೂಯಾರ್ಕ್ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಯ ಸಾಮಾನ್ಯ ಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್, ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಿರುವ ಭಾರತದ ಮೊದಲ ಕಾರ್ಯದರ್ಶಿ ವಿದಿಶಾ ಮೈತ್ರಾ, ಕ್ರಿಕೆಟ್‌ನಲ್ಲಿ 'ಜಂಟಲ್ಮೆನ್ ಗೇಮ್' ಆಡಿದ ವ್ಯಕ್ತಿಯ ಯುಎನ್ ಭಾಷಣ ದ್ವೇಷದಿಂದ ತುಂಬಿತ್ತು ಎಂದು ಹೇಳಿದ್ದಾರೆ.

ಯುಎನ್ ಜನರಲ್ ಅಸೆಂಬ್ಲಿಯಲ್ಲಿ ತಮ್ಮ ಹಕ್ಕನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಕನ್ನಡಿ ತೋರಿಸಿದ ವಿದಿಶಾ ಮೈತ್ರಾ, ಯುಎನ್‌ನಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಭಾಷಣವು ದ್ವೇಷದಿಂದ ತುಂಬಿದೆ ಎಂದರು.

ವಿದಿಷಾ ಮೈತ್ರ ಹೇಳಿದ ಪ್ರಮುಖ ವಿಷಯಗಳು ...

- ಇಮ್ರಾನ್ ವಿಶ್ವದ ಅತಿದೊಡ್ಡ ವೇದಿಕೆಯನ್ನು ದುರುಪಯೋಗಪಡಿಸಿಕೊಂಡರು.

- ಪಾಕಿಸ್ತಾನವು ಯುಎನ್ ವೇದಿಕೆಯಲ್ಲಿ ಪರಮಾಣು ಯುದ್ಧದ ಬೆದರಿಕೆ ಹಾಕಿದೆ.

- ಪಾಕಿಸ್ತಾನ ತನ್ನ ಜನರನ್ನೇ ಹತ್ಯಾಕಾಂಡ ಮಾಡುತ್ತದೆ.

- ಪಾಕಿಸ್ತಾನ 130 ಭಯೋತ್ಪಾದಕರಿಗೆ ಪಿಂಚಣಿ ನೀಡುತ್ತದೆ.

- ಪಾಕಿಸ್ತಾನದ ಅಲ್ಪಸಂಖ್ಯಾತರು ಶೇಕಡಾ 23 ರಿಂದ 1 ಕ್ಕೆ ಇಳಿದಿದ್ದಾರೆ.

- ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಹಿಂಸಿಸಲಾಗುತ್ತಿದೆ.

- ಅಲ್ಪಸಂಖ್ಯಾತರನ್ನು ಕಿರುಕುಳ ನೀಡುವವರು ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ.

- ಇಮ್ರಾನ್ ಖಾನ್ ಯುಎನ್‌ಜಿಎದಲ್ಲಿ ಭಾರತದ ಬಗ್ಗೆ ಸುಳ್ಳು ಹೇಳಿದ್ದಾರೆ.
 

Trending News