ಜಪಾನಿಗೆ ಅಪ್ಪಳಿಸಿದ ಭೀಕರ ಟೈಫೂನ್ ಹಗಿಬಿಸ್, 5 ಮಿಲಿಯನ್ ಜನರ ಸ್ಥಳಾಂತರಕ್ಕೆ ಮನವಿ

 ಶನಿವಾರ ಸ್ಥಳೀಯ ಸಮಯ ರಾತ್ರಿ 7 ಗಂಟೆಗೂ ಮೊದಲು ಟೈಫೂನ್ ಹಗಿಬಿಸ್ ನಿಂದಾಗಿ ಭೂಕುಸಿತವನ್ನು ಉಂಟಾಗಿದ್ದು, ಇದರಿಂದಾಗಿ ಓರ್ವ ಸಾವನ್ನಪ್ಪಿದ್ದು, ಸುಮಾರು 33 ಜನರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಇದು ಆರು ದಶಕಗಳಲ್ಲಿ ಅತಿ ಭೀಕರ ಚಂಡಮಾರುತ ಎಂದು ಹೇಳಲಾಗಿದೆ.

Last Updated : Oct 12, 2019, 05:40 PM IST
ಜಪಾನಿಗೆ ಅಪ್ಪಳಿಸಿದ ಭೀಕರ ಟೈಫೂನ್ ಹಗಿಬಿಸ್, 5 ಮಿಲಿಯನ್ ಜನರ ಸ್ಥಳಾಂತರಕ್ಕೆ ಮನವಿ  title=
Photo courtesy: Twitter

ನವದೆಹಲಿ: ಶನಿವಾರ ಸ್ಥಳೀಯ ಸಮಯ ರಾತ್ರಿ 7 ಗಂಟೆಗೂ ಮೊದಲು ಟೈಫೂನ್ ಹಗಿಬಿಸ್ ನಿಂದಾಗಿ ಭೂಕುಸಿತವನ್ನು ಉಂಟಾಗಿದ್ದು, ಇದರಿಂದಾಗಿ ಓರ್ವ ಸಾವನ್ನಪ್ಪಿದ್ದು, ಸುಮಾರು 33 ಜನರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಇದು ಆರು ದಶಕಗಳಲ್ಲಿ ಅತಿ ಭೀಕರ ಚಂಡಮಾರುತ ಎಂದು ಹೇಳಲಾಗಿದೆ.

ಜಪಾನಿನ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ ಸ್ಥಳೀಯ ಸಮಯ ಸಂಜೆ 7 ಗಂಟೆಗೂ ಮೊದಲು ಟೋಕಿಯೊದ ನೈರುತ್ಯ ದಿಕ್ಕಿನಲ್ಲಿರುವ ಇಜು ಪೆನಿನ್ಸುಲಾದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಹೇಳಿದೆ. ತುರ್ತು ಹವಾಮಾನ ಎಚ್ಚರಿಕೆ (ಹಂತ 5) ನೀಡಿದ ನಂತರ, ಮಳೆ ಮತ್ತು ಗಾಳಿಯ ಹಿನ್ನಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಸಂಸ್ಥೆ ಕರೆ ನೀಡಿದೆ. ಟೋಕಿಯೊ ಸೈತಮಾ, ಕನಗಾವಾ, ಗುನ್ಮಾ, ಯಮನಶಿ, ನಾಗಾನೊ ಮತ್ತು ಶಿಜುವಾಕಾ ಸೇರಿದಂತೆ ಏಳು ಪ್ರಾಂತ್ಯಗಳ ಪಟ್ಟಣಗಳು ​​ಮತ್ತು ನಗರಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ಇದು 5 ನೇ ಹಂತದ ಪರಿಸ್ಥಿತಿ; ಒಂದು ರೀತಿಯ ವಿಪತ್ತು ಈಗಾಗಲೇ ಸಂಭವಿಸಿರಬಹುದು, ಜನರು ತಮ್ಮ ಜೀವವನ್ನು ಈಗಿನಿಂದಲೇ ರಕ್ಷಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ ಎಂದು ಜೆಎಂಎ ಹವಾಮಾನ ಮುನ್ಸೂಚಕ ಯಸುಶಿ ಕಾಜಿವಾರ ಹೇಳಿದ್ದಾರೆ.

ಜಪಾನ್‌ನ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ (ಎಫ್‌ಡಿಎಂಎ) ಪ್ರಕಾರ 33 ಜನರು ಗಾಯಗೊಂಡಿದ್ದಾರೆ ಮತ್ತು ಇಚಿಯಾರಾ ನಗರದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.ಗೊಟೆನ್ಬಾ ಸಿಟಿಯಲ್ಲಿ ಒಬ್ಬ ವ್ಯಕ್ತಿಯನ್ನು ಕಾಣೆಯಾಗಿದ್ದಾನೆ ಎಂದು ಹೇಳಿದೆ. ಟೋಕಿಯೊ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಸ್ಥಳಾಂತರಿಸುವ ಸಲಹೆಗಳನ್ನು ನೀಡಲಾಗಿದೆ, ಇದರಿಂದಾಗಿ ಸುಮಾರು ಹತ್ತು ಲಕ್ಷ ಜನರಿಗೆ ಪರಿಣಾಮ ಬೀರುತ್ತದೆ.ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂಪನಿ (ಟೆಪ್ಕೊ) ಮತ್ತು ಚಬ್ ಎಲೆಕ್ಟ್ರಿಕ್ ಪವರ್ ಕಂಪನಿ ಪ್ರಕಾರ, ಕನಿಷ್ಠ ಎಂಟು ಪ್ರಾಂತ್ಯಗಳಿಂದ ಒಟ್ಟು 936,113 ಜನರನ್ನು ಸ್ಥಳಾಂತರಿಸಲು ಆದೇಶಿಸಿವೆ ಎಂದು ಎಫ್ಡಿಎಂಎ ತಿಳಿಸಿದೆ.

ಏತನ್ಮಧ್ಯೆ, ಭಾರಿ ಮಳೆಯಿಂದಾಗಿ ಮೂರು ಅಣೆಕಟ್ಟುಗಳಿಂದ ನೀರನ್ನು ಹೊರಹಾಕುವ ಬಗ್ಗೆ ಯೋಚಿಸುತ್ತಿರುವುದಾಗಿ ಭೂ,ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯ ತಿಳಿಸಿದೆ.ಇದರಿಂದಾಗಿ ಅಣೆಕಟ್ಟೆಯ ಕೆಳಭಾಗದ ಪ್ರದೇಶಗಳಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಎನ್ನಲಾಗಿದೆ. ಚಂಡಮಾರುತವು ಜಪಾನ್ ಸಮೀಪಿಸುತ್ತಿದ್ದಂತೆ ದುರ್ಬಲಗೊಂಡಿತು, ಇದು ಗಂಟೆಗೆ ಗರಿಷ್ಠ 195 ಕಿಲೋಮೀಟರ್ ವೇಗದಲ್ಲಿ (122 ಎಮ್ಪಿಎಚ್) ಆಗಮಸುತ್ತಿದೆ. ಇದರ ವೇಗವು ಇದು ವರ್ಗ 3 ಅಟ್ಲಾಂಟಿಕ್ ಚಂಡಮಾರುತಕ್ಕೆ ಸಮ ಎನ್ನಲಾಗಿದೆ. ಟೋಕಿಯೊ ಮತ್ತು ಹತ್ತಿರದ ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನು ಕನಿಷ್ಠ ಭಾನುವಾರ ಬೆಳಿಗ್ಗೆ ತನಕ ರದ್ದುಪಡಿಸಲಾಗಿದೆ. ಟೋಕಿಯೊ, ನಾಗೋಯಾ ಮತ್ತು ಒಸಾಕಾ ನಡುವಿನ ಎಲ್ಲಾ ಬುಲೆಟ್ ರೈಲುಗಳನ್ನು ಸಹ ರದ್ದುಪಡಿಸಲಾಗಿದೆ.

ಚಿಬಾ ಪ್ರಾಂತ್ಯದ ಇಚಿಹಾರ ನಗರದಲ್ಲಿ 49 ವರ್ಷದ ವ್ಯಕ್ತಿಯೊಬ್ಬ ಶನಿವಾರ ಬೆಳಿಗ್ಗೆ ಸುಂಟರಗಾಳಿಯಿಂದಾಗಿ ಕಾರ್ ಪಲ್ಟಿ  ಹೊಡೆದಿದ್ದರಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಟೋಕಿಯೊದಿಂದ ಆಗ್ನೇಯಕ್ಕೆ 30 ಕಿಲೋಮೀಟರ್ (18 ಮೈಲಿ) ದೂರದಲ್ಲಿರುವ ನಗರದಾದ್ಯಂತ ಸುಂಟರಗಾಳಿ ಬೀಸುತ್ತಿದ್ದಂತೆ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

Trending News