ಪೊಂಗಾಲ್ ಪ್ರಯುಕ್ತ ಕಚೇರಿ ಸಿಬ್ಬಂದಿಗೆ ಯುಕೆ ಪ್ರಧಾನಿ ರಿಷಿ ಸುನಕ್ ರಿಂದ ಭರ್ಜರಿ ಔತಣಕೂಟ

 

Written by - Zee Kannada News Desk | Last Updated : Jan 17, 2023, 07:07 PM IST
  • ಪೊಂಗಾಲ್ ಹಬ್ಬವನ್ನು ಭಾರತದಲ್ಲಿ ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ
  • ಮಕರ ಸಂಕ್ರಾಂತಿ, ಬಿಹು ಹೀಗೆ ವಿವಿಧ ಹೆಸರುಗಳಲ್ಲಿ ಅದನ್ನು ಕರೆಯುತ್ತಾರೆ
  • ಸಾಮಾನ್ಯವಾಗಿ ಇದನ್ನು ಜನವರಿ 14-15 ಕ್ಕೆ ದೇಶಾದ್ಯಂತ ಆಚರಿಸಲಾಗುತ್ತದೆ
ಪೊಂಗಾಲ್ ಪ್ರಯುಕ್ತ ಕಚೇರಿ ಸಿಬ್ಬಂದಿಗೆ ಯುಕೆ ಪ್ರಧಾನಿ ರಿಷಿ ಸುನಕ್ ರಿಂದ ಭರ್ಜರಿ ಔತಣಕೂಟ  title=
screengrab

ಲಂಡನ್: ಪೊಂಗಲ್ ಹಬ್ಬ ಭಾರತೀಯ ಹಬ್ಬವಾಗಿದ್ದರೂ ಸಹಿತ ಈ ಹಬ್ಬವನ್ನು ಜಗತ್ತಿನೆಲ್ಲೆಡೆ ಆಚರಿಸುತ್ತಾರೆ.ಈಗ ಅದರ ಭಾಗವಾಗಿ ಇಂಗ್ಲೆಂಡ್ ನಲ್ಲಿಯೂ ಈ ಹಬ್ಬ ಜನಪ್ರಿಯವಾಗಿದೆ.ಅದರಲ್ಲೂ ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಈಗ ಪೊಂಗಾಲ್ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ಹೌದು, ಕಳೆದ ವರ್ಷ ಅಕ್ಟೋಬರ್ 24 ರಂದು ಯುಕೆ ನೂತನ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರು ಭಾರತೀಯ ಮೂಲದ ಬ್ರಿಟನ್ನಿನ 57 ನೇ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಅದರಲ್ಲೂ ವಿಶೇಷ ಏನೆಂದರೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದೇ ಮೊದಲು.ಈಗ ಅಧಿಕಾರ ಸ್ವೀಕರಿಸಿದ ಮೊದಲ ಬಾರಿಗೆ ತಮ್ಮ ಅಧಿಕಾರ ಅವಧಿಯಲ್ಲಿ ಪೊಂಗಾಲ್ ಹಬ್ಬವನ್ನು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಚೇರಿ ಸಿಬ್ಬಂಧಿಗೆ ಭರ್ಜರಿ ಔತಣಕೂಟವನ್ನು ಏರ್ಪಡಿಸುವ ಮೂಲಕ ಭಾರತೀಯ ಸಾಂಪ್ರದಾಯಿಕ ಹಬ್ಬದ ಸೊಬಗನ್ನು ವಿದೇಶಿಗರಿಗೂ ಪರಿಚಯಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಜನವರಿಯಲ್ಲಿ ಆಚರಿಸುವ ಥಾಯ್ ಪೊಂಗಲ್ ಹಬ್ಬಕ್ಕೆ ಎಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ. ದೇಶಾದ್ಯಂತದ ಕುಟುಂಬಗಳಿಗೆ ಈ ಹಬ್ಬವು ಮುಖ್ಯವಾಗಿದೆ ಎಂದು ತಿಳಿದಿದೆ.ಈ ಥಾಯ್ ಪೊಂಗಲ್‌ನಲ್ಲಿ ಇಲ್ಲಿ ಮತ್ತು ಪ್ರಪಂಚದಾದ್ಯಂತ ಇರುವ ಎಲ್ಲರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ನಾನು ಬಯಸುತ್ತೇನೆಂದು " ಎಂದು ರಿಷಿ ಸುನಕ್ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪೊಂಗಾಲ್ ಹಬ್ಬವನ್ನು ಭಾರತದಲ್ಲಿ ವಿವಿಧ ಹೆಸರಿನಲ್ಲಿ ಕರೆಯಲಾಗುತ್ತದೆ, ಮಕರ ಸಂಕ್ರಾಂತಿ, ಬಿಹು ಹೀಗೆ ವಿವಿಧ ಹೆಸರುಗಳಲ್ಲಿ ಅದನ್ನು ಕರೆಯುತ್ತಾರೆ, ಸಾಮಾನ್ಯವಾಗಿ ಇದನ್ನು ಜನವರಿ 14-15 ಕ್ಕೆ  ದೇಶಾದ್ಯಂತ ಆಚರಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News