ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆಫ್ಘಾನಿಸ್ತಾನದ ಕುರಿತು ಸಭೆ

       

Last Updated : Jan 3, 2018, 03:15 PM IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆಫ್ಘಾನಿಸ್ತಾನದ ಕುರಿತು ಸಭೆ  title=

ವಿಶ್ವಸಂಸ್ಥೆ:  ಭದ್ರತಾ ಮಂಡಳಿಯು ಅಫ್ಘಾನಿಸ್ತಾನದ ವಿಚಾರವಾಗಿ ಉನ್ನತ ಮಟ್ಟದ ಸಭೆಯನ್ನು ನಡೆಸಲಿದೆ ಎಂದು ಭದ್ರತಾ ಮಂಡಳಿಯ ಅಧ್ಯಕ್ಷ ಕೈರತ್ ಉಮಾರೊವ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಯನ್ನು ತರಲು ಕೇಂದ್ರ ಏಷ್ಯಾದ ದೇಶಗಳ ಅಭಿವೃದ್ಧಿಯ ಪ್ರಾದೇಶಿಕ ಪಾಲುದಾರಿಕೆಯನ್ನು ನಿರ್ಮಿಸುವ ಬಗ್ಗೆ ಸಭೆಯು ಗಮನಹರಿಸುತ್ತದೆ ಎಂದು ಕಝಾಕಿಸ್ತಾನದ ಶಾಶ್ವತ ಪ್ರತಿನಿಧಿಯಾದ ಉಮಾರೋವ್ ಹೇಳಿದ್ದಾರೆ. 

ಕಝಾಕಿಸ್ತಾನ್ ವಿದೇಶಾಂಗ ಸಚಿವ ಕೈರತ್ ಅಬ್ದುಕ್ಮಾನಮೋವ್ ಅವರು ಜನವರಿ 19 ರಂದು ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಸಲಾಹದ್ದೀನ್ ರಬ್ಬಾನಿ ಮತ್ತು ಇತರ ರಾಷ್ಟ್ರಗಳ ಮಂತ್ರಿಗಳು ಕೂಡ ಹಾಜರಿರುತ್ತಾರೆ  ಎಂದು ತಿಳಿದು ಬಂದಿದೆ. 

ಉಮಾರೋವ್ ಈ ಕುರಿತಾಗಿ ಮಾತನಾಡುತ್ತಾ ಅಫ್ಘಾನಿಸ್ಥಾನ ನಮಗೆ ಬಹಳ ಮುಖ್ಯ, ಆದ್ದರಿಂದ ಈ ಪ್ರದೇಶದಲ್ಲಿ ಸುರಕ್ಷತೆ ಮತ್ತು ಅಭಿವೃದ್ಧಿ ನಡುವಿನ ಸಂಬಂಧವನ್ನು  ಹೊಸ ದೃಷ್ಟಿಕೋನದಿಂದ ನೋಡಬೇಕಾಗಿದೆ ಆ ನಿಟ್ಟಿನಲ್ಲಿ ಈ ಸಭೆ ಮಹತ್ವವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರು ಅಫ್ಘಾನಿಸ್ಥಾನ ಒಂದು ಪ್ರಾದೇಶಿಕ ಸಮಸ್ಯೆ. ಅದು ಕೇವಲ ಒಂದು ದೇಶದ ಸಮಸ್ಯೆಯಲ್ಲ, ಅದರ ಪರಿಣಾಮವು ಪ್ರದೇಶದ-ವ್ಯಾಪ್ತಿಯಾಗಿದ್ದು. ಆದ್ದರಿಂದ, ಆ ನಿಟ್ಟಿನಲ್ಲಿ ಇತರ ದೇಶಗಳು ಸಹಿತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು 

 

Trending News