ನವದೆಹಲಿ: ಜೀವನದಲ್ಲಿ ಪ್ರೀತಿಯನ್ನು ಗಳಿಸಲು ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದಕ್ಕೆ ಈ ಸುದ್ದಿಯೇ ಹಿಡಿದ ಕನ್ನಡಿ. ವೈವಿಧ್ಯಮಯ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ನಲ್ಲಿ ಪ್ರೀತಿಯನ್ನು ಹುಡುಕಿದ ನಂತರವೂ ಜೀವನದಲ್ಲಿ ಖಾಲಿತನ ಎದುರಾದಾಗ 30 ವರ್ಷದ ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ (Facebook) ಮಾಡಿದ ಕೆಲಸ ಇದು
ಇದನ್ನು ಓದಿ- Corona Vaccine ತಯಾರಿಕೆಗೆ 5 ಲಕ್ಷ ಶಾರ್ಕ್ ಗಳ ಬಲಿ
ಫೇಸ್‌ಬುಕ್‌ನಲ್ಲಿ, ನೀವು ವಿವಿಧ ರೀತಿಯ ಜಾಹೀರಾತುಗಳನ್ನು ನೋಡುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಗೆಳತಿಯನ್ನು ಹುಡುಕಲು ಫೇಸ್ಬುಕ್ನಲ್ಲಿ ತನ್ನನ್ನು ತಾನು ಮಾರಿಕೊಂಡಿದ್ದಾನೆ! 30 ರ ಹರೆಯದ ಅಲನ್ ಕ್ಲೇಟನ್ ಸುಮಾರು ಒಂದು ದಶಕದಿಂದ ತನ್ನನ್ನು ತಾನು ಒಂದು ಸಿಂಗಲ್ ಎಂದು ಕರೆಯಿಸಿಕೊಳ್ಳುತ್ತಿದ್ದಾನೆ. ತಾನು ನೀಡಿರುವ ಜಾಹೀರಾತಿನಲ್ಲಿ ವ್ಯಕ್ತಿ ತನ್ನನ್ನು ತಾನು ಮುಕ್ತ ಹಾಗೂ ಉತ್ತಮ ಸ್ಥಿತಿಯಲ್ಲಿರುವುದಾಗಿ ಘೋಷಿಸಿಕೊಂಡಿದ್ದಾನೆ. ಈ ಜಾಹೀರಾತಿನಿಂದ, ಅವರ ಇನ್‌ಬಾಕ್ಸ್‌ನಲ್ಲಿ ಸಂದೇಶಗಳ ಮಹಾಪೂರವೇ ಹರಿದುಬಂದಿದೆ ಮತ್ತು ಪ್ರತಿಯೊಬ್ಬರೂ ಗುಡ್ ಲಕ್ ಸಂದೇಶಗಳ ಜೊತೆಗೆ ಉತ್ತಮ ಮ್ಯಾಚ್ ಕೂಡ ಸೂಚಿಸುತ್ತಿದ್ದಾರೆ.
ಡೇಟಿಂಗ್ ನ ನೂತನ ಪ್ರಕಾರ
ಅಲನ್ ನೀಡಿರುವ ಜಾಹೀರಾತು ಈ ರೀತಿ ಇದೆ. 'ಹಲೋ ಮಹಿಳೆಯರೇ, ನಾನು ಅಲನ್ ನನಗೆ 30 ವರ್ಷ. ನಾನು ಮಾತನಾಡಲು ಒಳ್ಳೆಯ ಮಹಿಳೆಯನ್ನು ಹುಡುಕುತ್ತಿದ್ದೇನೆ, ಅದಕ್ಕಿಂತ ಹೆಚ್ಚು ನಾನು ಹಲವು ಮದುವೆಗಳಿಗೆ ಹಾಜರಾಗಲು ಬಯಸುತ್ತೇನೆ ಮತ್ತು ನಾನು ಒಬ್ಬಂಟಿಯಾಗಿ ಹೋಗಲು ಬಯಸುವುದಿಲ್ಲ. ನಾನು ಡೇಟಿಂಗ್ ಸೈಟ್‌ಗಳಲ್ಲಿ ಪ್ರಯತ್ನಿಸಿದೆ. ಆದರೆ ನನ್ನ ಅದೃಷ್ಟವು ಕೆಲಸ ಮಾಡಲಿಲ್ಲ ಮತ್ತು ಈಗ ನಾನು ಇಲ್ಲಿ ಪೋಸ್ಟ್ ಮಾಡಿದ್ದೇನೆ. ಕ್ಲೇಟನ್ ಈ ಪೋಸ್ಟ್ ಜೊತೆಗೆ ಅವರ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅವು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ಇದನ್ನು ಓದಿ- ಮಹಿಳೆಯ ಜೊತೆಗೆ ಸಂಬಂಧದಿಂದ ಹೆಡ್ಲೈನ್ ಗಿಟ್ಟಿಸಿದ French Envoy
ಕೇವಲ ಒಂದೇ ಒಂದು ಡೇಟ್ ಒಲಿದು ಬಂದಿತ್ತು
ಕೆಟ್ಟರಿಂಗ್ ವೊಂದರ ಲಾರಿ ಚಾಲಕಿಯೋರ್ವಳ ಜೊತೆಗೆ ಅಲನ್ ಕ್ಲೇಟನ್ ಇಲ್ಲಿಯವರೆಗೆ ಡೇಟ್ ಗೆ ಹೋಗಿದ್ದಾರೆ ಆದರೆ ಅದು ಅವರಿಗೆ ಸಂತೃಪ್ತಿ ತಂದಿಲ್ಲ. ಹೇಗಾದರೂ, ತಾವು ಶೀಘ್ರದಲ್ಲೇ ತಮ್ಮ ಜೀವನದ ಪ್ರೀತಿಯನ್ನು ಕಂಡುಕೊಳ್ಳುವ ಸಾಕಷ್ಟು ಆಶಾವಾದಿಗಳಾಗಿದ್ದಾರೆ. ಶಾಲಾ ಜೀವನದಿಂದ ತಾನು ಯಾವುದೇ ಸಂಬಂಧದಲ್ಲಿಲ್ಲ ಮತ್ತು ಈಗ ಶೀಘ್ರದಲ್ಲೇ ಮದುವೆಯಾಗಿ ಸೆಟಲ್ ಆಗಲು ಬಯಸುತ್ತೇನೆ ಎಂದು ಅವರು ಹೇಳುತ್ತಾರೆ. ತಮ್ಮ ಸ್ನೇಹಿತರು ಸೆಟಲ್ ಆಗುತ್ತಿರುವುದನ್ನು ನೋಡಿ, ತಾವು ಕೂಡ ಸೆಟಲ್ ಆಗುವ ಕನಸು ಅಲನ್ ಕಾಣುತ್ತಿದ್ದಾರೆ.