ಚೀನಾಗೆ ಮತ್ತೊಂದು ದೊಡ್ಡ ಪೆಟ್ಟು ನೀಡಿದ ಅಮೇರಿಕಾ, ಭಾರತದೊಂದಿಗೆ ದೊಡ್ಡ ಡೀಲ್

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಅಮೆರಿಕ ಭಾರತಕ್ಕೆ ದೊಡ್ಡ ಸಹಾಯ ಘೋಷಿಸಿದೆ. ಭಾರತೀಯ ವಾಯುಪಡೆಯ ಅತಿದೊಡ್ಡ ಸರಕು ವಿಮಾನ ಸಿ -130 ಜೆ ಸೂಪರ್ ಹರ್ಕ್ಯುಲಸ್‌ನ ಬಿಡಿಭಾಗಗಳ ಸರಬರಾಜು ಮಾಡುವುದಾಗಿ ಅಮೇರಿಕಾ ಘೋಷಿಸಿದೆ.

Last Updated : Oct 2, 2020, 04:44 PM IST
  • ಚೀನಾ ಜೊತೆಗಿನ ಉದ್ವಿಘ್ನತೆಯ ನಡುವೆ ಅಮೇರಿಕಾ ಭಾರತಕ್ಕೆ ದೊಡ್ಡ ಸಹಾಯವನ್ನು ಘೋಷಿಸಿದೆ.
  • ಸಿ -130 ಜೆ ಸೂಪರ್ ಹರ್ಕ್ಯುಲಸ್‌ನ ಬಿಡಿಭಾಗಗಳ ಸರಬರಾಜು ಮಾಡುವುದಾಗಿ ಅಮೇರಿಕಾ ಘೋಷಿಸಿದೆ.
  • ಆರನೇ ಸಿ -130 ಜೆ -30 ರ ಸೂಪರ್ ಹರ್ಕ್ಯುಲಸ್ ವಿಮಾನಕ್ಕಾಗಿ ಭಾರತ ಶೀಘ್ರದಲ್ಲಿಯೇ ಆದೇಶ ನೀಡಲಿದೆ.
ಚೀನಾಗೆ ಮತ್ತೊಂದು ದೊಡ್ಡ ಪೆಟ್ಟು ನೀಡಿದ ಅಮೇರಿಕಾ, ಭಾರತದೊಂದಿಗೆ ದೊಡ್ಡ ಡೀಲ್ title=

ವಾಷಿಂಗ್ಟನ್: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಅಮೆರಿಕ ಭಾರತಕ್ಕೆ ದೊಡ್ಡ ಸಹಾಯ ಘೋಷಿಸಿದೆ. ಭಾರತೀಯ ವಾಯುಪಡೆಯ ಅತಿದೊಡ್ಡ ಸರಕು ವಿಮಾನ ಸಿ -130 ಜೆ ಸೂಪರ್ ಹರ್ಕ್ಯುಲಸ್‌ನ ಬಿಡಿಭಾಗಗಳ ಸರಬರಾಜು ಮಾಡುವುದಾಗಿ ಅಮೇರಿಕಾ ಘೋಷಿಸಿದೆ. ಇದಕ್ಕಾಗಿ ಉಭಯ ದೇಶಗಳು 90 ಮಿಲಿಯನ್ ಡಾಲರ್ ಒಪ್ಪಂದಕ್ಕೆ (US India Deal) ಸಹಿ ಹಾಕಿವೆ.

ಎರಡು ದೇಶಗಳ ಮಧ್ಯೆ ನಡೆದ ಈ ಒಪ್ಪಂದವು ಇಂಡೋ-ಯುಎಸ್ ಕಾರ್ಯತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಂಸ್ಥೆ ತಿಳಿಸಿದೆ. ಇದರೊಂದಿಗೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿಯಲ್ಲಿ ಉಭಯ ದೇಶಗಳು ಮುನ್ನಡೆಯಲಿವೆ.

ಇದನ್ನು ಓದಿ- ಭಾರತ ಪ್ರವಾಸದ ಮೊದಲು ವ್ಯಾಪಾರ ಒಪ್ಪಂದ ಕುರಿತಂತೆ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ!

ಒಪ್ಪಂದದ ಪ್ರಕಾರ, ಯುಎಸ್, ಭಾರತದಲ್ಲಿ ಸಿ -130 ಜೆ ಸೂಪರ್ ಹರ್ಕ್ಯುಲಸ್ ಅನ್ನು ರಿಪೇರಿ ಮಾಡಲಿದೆ. ಇದಲ್ಲದೆ, ಅವರ ಬಿಡಿಭಾಗಗಳನ್ನು ಸಹ ಸರಬರಾಜು ಮಾಡಲಾಗುತ್ತದೆ ಮತ್ತು ಗ್ರೌಂಡ್ ಸಪೋರ್ಟ್ ಕೂಡ ನೀಡಲಿದೆ. ಇದರ ಜೊತೆಗೆ ಭಾರತ ಅಮೆರಿಕಾಗೆ AN/ALR-56M ಅಡ್ವಾನ್ಸ್ಡ್ ರೇಡಾರ್ ವಾರ್ನಿಂಗ್ ಸಿಸ್ಟಂ, 10 ಲೈಟ್ ವೇಟ್ ವಿಜನ್ ಬೈನಾಕ್ಯೂಲರ್, 10 ನೈಟ್ ವಿಶನ್ ಕನ್ನಡಕ, GPS ಹಾಗೂ ಎಲೆಕ್ಟ್ರಾನಿಕ್ ವಾರ ಫೇರ್ ಗಳ ಆರ್ಡರ್ ಕೂಡ ನೀಡಿದೆ.

ಮಾಹಿತಿಯ ಪ್ರಕಾರ, ಸಿ -130 ಜೆ ಸೂಪರ್ ಹರ್ಕ್ಯುಲಸ್ ಬಿಡಿಭಾಗಗಳು ಮತ್ತು ಸೇವಾ ಸೌಲಭ್ಯಗಳನ್ನು ಪಡೆದ ನಂತರ, ಭಾರತೀಯ ವಾಯುಪಡೆಯ ಯುದ್ಧವಿಮಾನಗಳು ಎಲ್ಲಾ ಸಮಯದಲ್ಲೂ ಕಾರ್ಯಾಚರಣೆಗೆ ಸಿದ್ಧವಾಗುತ್ತವೆ ಮತ್ತು ಅವುಗಳನ್ನು ಯಾವುದೇ ಸಮಯದಲ್ಲಿ ಆಕಸ್ಮಿಕ ಸಂದರ್ಭಗಳಲ್ಲಿ ಬಳಸಬಹುದಾಗಿದೆ.

ಇದನ್ನು ಓದಿ-TikTok ಪ್ರಕರಣದಲ್ಲಿ ಟ್ರಂಪ್ ಸರ್ಕಾರಕ್ಕೆ ಶಾಕ್: ನ್ಯಾಯಾಲಯದ ಆದೇಶ ಏನೆಂದು ತಿಳಿಯಿರಿ

ಯುಎಸ್ ಕಾನೂನಿನ ಪ್ರಕಾರ, ಇತರ ದೇಶಗಳೊಂದಿಗೆ ದೊಡ್ಡ ರಕ್ಷಣಾ ಒಪ್ಪಂದಗಳನ್ನು ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯಡಿ ಇರಿಸಲಾಗುತ್ತದೆ ಮತ್ತು ಸಂಸದರು ಯಾವುದೇ ಒಪ್ಪಂದವನ್ನು 30 ದಿನಗಳಲ್ಲಿ ಪರಿಶೀಲಿಸಬಹುದು. ಮಾಹಿತಿಯ ಪ್ರಕಾರ, ಲಾಕ್ಹೀಡ್ ಮಾರ್ಟಿನ್ ಕಂಪನಿ ಅಮೆರಿಕದೊಂದಿಗಿನ ಈ ಒಪ್ಪಂದದಡಿಯಲ್ಲಿ ಸೆಲ್ ಸೇವೆಯ ಉಸ್ತುವಾರಿ ವಹಿಸಿಕೊಳ್ಳಲಿದೆ.

ಸಿ -130 ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳನ್ನು ಬಳಸುವ 17 ದೇಶಗಳಲ್ಲಿ ಭಾರತವೂ ಒಂದು. ಭಾರತೀಯ ವಾಯುಸೇನೆಯಲ್ಲಿ ಈ ರೀತಿಯ 5 ವಿಮಾನಗಳು ಶಾಮೀಲಾಗಿವೆ. ಆರನೇ ಸಿ -130 ಜೆ -30 ರ ಸೂಪರ್ ಹರ್ಕ್ಯುಲಸ್ ವಿಮಾನಕ್ಕಾಗಿ ಭಾರತ ಶೀಘ್ರದಲ್ಲಿಯೇ ಆದೇಶ ನೀಡಲಿದೆ.

Trending News