VIDEO: ಟಾಪ್ ಲೆಸ್ ಆಗಿ ಸೆರೆನಾ ವಿಲಿಯಮ್ಸ್ ಹೇಳಿದ್ದೇನು?

ಆಸ್ಟ್ರೇಲಿಯನ್ ಬ್ಯಾಂಡ್ ಈ 'ಟಚ್ ಮೈ ಸೆಲ್ಫ್' ಹಾಡಿಕೊಂಡು ತಮ್ಮ ಎದೆಯನ್ನು ಕೈಯಿಂದ ಮುಚ್ಚಿಕೊಳ್ಳುವ ಮೂಲಕ ಸೆರೆನಾ ಸೋಶಿಯಲ್ ಮಿಡಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. 

Last Updated : Sep 30, 2018, 12:35 PM IST
VIDEO: ಟಾಪ್ ಲೆಸ್ ಆಗಿ ಸೆರೆನಾ ವಿಲಿಯಮ್ಸ್ ಹೇಳಿದ್ದೇನು? title=

ವಾಷಿಂಗ್ಟನ್: ಪ್ರಸಿದ್ಧ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. 

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಟಾಪ್ ಲೆಸ್ ಆಗಿ ಹಾಡು ಹಾಡಿದ್ದಾರೆ. ಎಲ್ಲರೂ ನಿಮ್ಮ ಸ್ತನವನ್ನು ಆಗಾಗ ಮುಟ್ಟಿ ಪರಿಶೀಲಿಸಿಕೊಳ್ಳಿ, ನಾನು ಸ್ತನ ಮುಟ್ಟಿ ಪರಿಶೀಲನೆ ಮಾಡಿಕೊಳ್ಳುತ್ತೇನೆ ಎಂದು ಸೆರೆನಾ ಹೇಳಿದ್ದಾರೆ. 

ಆಸ್ಟ್ರೇಲಿಯನ್ ಬ್ಯಾಂಡ್ ಈ 'ಟಚ್ ಮೈ ಸೆಲ್ಫ್' ಹಾಡಿಕೊಂಡು ತಮ್ಮ ಎದೆಯನ್ನು ಕೈಯಿಂದ ಮುಚ್ಚಿಕೊಳ್ಳುವ ಮೂಲಕ ಸೆರೆನಾ ಸೋಶಿಯಲ್ ಮಿಡಿಯಾದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. ಯಾರು ಏನೇ ಅಂದುಕೊಂಡರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಶ್ವಾದ್ಯಂತ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದೇ ತಮ್ಮ ಉದ್ದೇಶ ಎಂದು ಸೆರೆನಾ ಹೇಳಿದ್ದಾರೆ.

Trending News