ವಾಷಿಂಗ್ಟನ್: ಶತಮಾನದಲ್ಲಿಯೇ ಕಂಡರಿಯದ ಭೀಕರ ಪ್ರವಾಹಕ್ಕೆ ಕೇರಳ ಮತ್ತು ಕರ್ನಾಟಕದ ಕೊಡಗು ಸಾಕ್ಷಿಯಾಗಿದೆ.ಈಗ ಈ ಪ್ರವಾಹಕ್ಕೆ ಕಾರಣವಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ವೀಡಿಯೋವೊಂದನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ.
ಈ ವಿಡಿಯೋದಲ್ಲಿ ನಿರಂತರವಾದ ಮಳೆಯಿಂದಾಗಿ ಈ ಭೀಕರ ಪ್ರವಾಹ ಉಂಟಾಗಿದೆ ಎನ್ನುವುದನ್ನು ಈ ವೀಡಿಯೋ ತೋರಿಸುತ್ತದೆ. ಅಮೇರಿಕಾದ ನಾಸಾ ಮತ್ತು ಜಪಾನ್ ದೇಶದ ಬಾಹ್ಯಕಾಶ ಸಂಸ್ಥೆ ಜಿಪಿಎಂ ನ ಮೂಲಕ ಮಳೆ ಪ್ರಮಾಣದ ಅಳತೆಯನ್ನು ಕಂಡು ಹಿಡಿದಿದೆ. ಈ ಡಾಟಾವನ್ನು ಪ್ರತಿ ಅರ್ಧಗಂಟೆಗೊಮ್ಮೆ ದಾಖಲಿಸುತ್ತದೆ.
ನಾಸಾ ವಿಡಿಯೋದ ಬ್ಯಾಂಡ್ ನಲ್ಲಿ ಸಾಮಾನ್ಯವಾಗಿ ಪಶ್ಚಿಮ ಘಟ್ಟದ ಭಾಗದಲ್ಲಿ ವಾರದ ಮಳೆ ಪ್ರಮಾಣ 10 ಇಂಚಿನಷ್ಟು ಇರುತ್ತದೆ. ಹೆಚ್ಚೆದಂದರೆ ಅದು 16 ಇಂಚು, ಆದರೆ ಈ ಬಾರಿ ಅದು 18.5 ಇಂಚಿನವರೆಗೆ ತಲುಪಿದೆ ಎಂದು ನಾಸಾ ತಿಳಿಸಿದೆ. ಮಳೆಯ ಪ್ರಮಾಣವು ತೀವ್ರವಾಗಿ ಹೆಚ್ಚಳವಾಗಿರುವುದು ಅಗಸ್ಟ್ 13 ರಿಂದ 20 ರವರೆಗಿನ ಅವಧಿಯಲ್ಲಿ ಲೆಕ್ಕಾಚಾರ ಹಾಕಿದೆ.
ಕೇರಳ ಈ ಭೀಕರ ಪ್ರವಾಹದಿಂದಾಗಿ ಸುಮಾರು 3.14 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.ಅಲ್ಲದೆ 231 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.