ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟರ್ ಭವಿಷ್ಯ ಅಸ್ಪಷ್ಟ.. ಸಿಇಒ ಪರಾಗ್ ಅಗರವಾಲ್ ಹೀಗೆಂದಿದ್ದೇಕೆ?

Elon Musk: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಟ್ವಿಟರ್ ಒಡೆಯನಾಗಿದ್ದಾರೆ. ಪ್ರಮುಖ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್‌ ಅನ್ನು 44 ಬಿಲಿಯನ್‌ ಅಮೆರಿಕ ಡಾಲರ್‌ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 

Written by - Chetana Devarmani | Last Updated : Apr 26, 2022, 12:15 PM IST
  • ಟ್ವಿಟರ್ ಖರೀದಿಸಿದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
  • ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟರ್ ಭವಿಷ್ಯ ಅಸ್ಪಷ್ಟ
  • ಸಿಇಒ ಪರಾಗ್ ಅಗರವಾಲ್ ಹೀಗೆಂದಿದ್ದೇಕೆ?
ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟರ್ ಭವಿಷ್ಯ ಅಸ್ಪಷ್ಟ.. ಸಿಇಒ ಪರಾಗ್ ಅಗರವಾಲ್ ಹೀಗೆಂದಿದ್ದೇಕೆ?  title=
ಪರಾಗ್ ಅಗರವಾಲ್

ನ್ಯೂಯಾರ್ಕ್:  ವಿಶ್ವದ ಪ್ರಮುಖ ಜಾಲತಾಣ ಟ್ವಿಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಪ್ರತಿ ಷೇರಿಗೆ 54.20 ಡಾಲರ್​ನಂತೆ 44 ಶತಕೋಟಿ ಡಾಲರ್​ಗೆ ಟ್ವಿಟರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ ಅವರಿಗೆ ಟ್ವಿಟರ್ ಮಾರಾಟ ಮಾಡಲಾಗಿದೆ. ಈಗ ಟ್ವಿಟರ್​ ಸಂಪೂರ್ಣವಾಗಿ ಎಲಾನ್ ಮಸ್ಕ್​ ಮಾಲೀಕತ್ವದ ಕಂಪನಿ ಎಂದು ​ ಮಾರಲಾಗಿದೆ ಟ್ವಿಟರ್ ಅಧ್ಯಕ್ಷ ಬ್ರೈಟ್​ ಟೈಲರ್​ ಹೇಳಿದ್ದಾರೆ.  ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಟ್ವಿಟರ್ ಒಡೆಯನಾಗಿದ್ದಾರೆ. ಪ್ರಮುಖ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್‌ ಅನ್ನು 44 ಬಿಲಿಯನ್‌ ಅಮೆರಿಕ ಡಾಲರ್‌ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 

ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?

ಟ್ವಿಟರ್ ಖರೀದಿಯು ಭಾರತೀಯ ಮೂಲದ ಸಿಇಒ ಪರಾಗ್ ಅಗರವಾಲ್ ಭವಿಷ್ಯದ ಬಗ್ಗೆ ಹಲವು ಅನುಮಾನಗಳನ್ನು ಉಂಟು ಮಾಡಿದೆ. ಅವರು ಚುಕ್ಕಾಣಿ ಹಿಡಿಯಲು ಬಯಸುತ್ತಾರೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. 

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟರ್ ಅನ್ನು $44 ಶತಕೋಟಿಗೆ ಸ್ವಾಧೀನಪಡಿಸಿಕೊಂಡ ನಂತರ ಭಾರತೀಯ ಮೂಲದ ಸಿಇಒ ಪರಾಗ್ ಅಗರವಾಲ್ ಅವರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ ಎಂದು ಮಂಗಳವಾರ ಹೇಳಿದ್ದಾರೆ.

ಈವರೆಗೆ ಟ್ವಿಟರ್​ನಲ್ಲಿ ಎಲಾನ್​ ಮಸ್ಕ್​ ಶೇ.10ರಷ್ಟು ಷೇರು ಹೊಂದಿದ್ದರು. ಮಸ್ಕ್​ ಸಹ ಟ್ವಿಟರ್ ಖರೀದಿಯನ್ನು ದೃಢಪಡಿಸಿದ್ದಾರೆ. ಒಮ್ಮೆ ವ್ಯವಹಾರದ ಮಾತುಕತೆಗಳು ಅಂತಿಮಗೊಂಡು, ಡೀಲ್ ಮುಕ್ತಾಯವಾದ ನಂತರ ಟ್ವಿಟರ್​ ನಡೆ ಯಾವ ಕಡೆ ಇರುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಅಗರ​ವಾಲ್ ತಮ್ಮ ಉದ್ಯೋಗಿಗಳಿಗೆ ತಿಳಿಸಿದರು. ಎಲಾನ್ ಮಸ್ಕ್ ಸಹ ಮುಂದಿನ ದಿನಗಳಲ್ಲಿ ಟ್ವಿಟರ್ ಉದ್ಯೋಗಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಲಿದ್ದಾರೆ ಎಂದು ಕಂಪನಿಯು ತನ್ನ ಸಿಬ್ಬಂದಿಗೆ ತಿಳಿಸಿದೆ. 

ಇದನ್ನೂ ಓದಿ: Twitter-Elon Musk Deal: ಎಲಾನ್ ಮಸ್ಕ್ ಟ್ವಿಟ್ಟರ್ ಗೆ ನೂತನ ಮುಖ್ಯಸ್ಥ! 3.25 ಲಕ್ಷ ಕೋಟಿಯ ಡೀಲ್ ಆಲ್ಮೋಸ್ಟ್ ಫೈನಲ್!

ಎಲಾನ್ ಮಸ್ಕ್ ನಾಯಕತ್ವದಲ್ಲಿ ಟ್ವಿಟ್ಟರ್​ ಭವಿಷ್ಯ ಅಸ್ಪಷ್ಟವಾಗಿದೆ ಎಂದು ಟ್ವಿಟರ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಾಗ್ ಅಗರ್​ವಾಲ್ ಹೇಳಿದ್ದಾರೆ. ಉದ್ಯಮಿ ಎಲಾನ್ ಮಸ್ಕ್​ ಅವರಿಗೆ ಟ್ವಿಟ್ಟರ್ ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರ ಉದ್ಯೋಗಿಗಳೊಂದಿಗೆ ಮುಖಾಮುಖಿಯಾಗಿ ಮಾತನಾಡಿದ ಪರಾಗ್‌, ಕಂಪನಿಯು ಪ್ರೈವೇಟ್ ಲಿಮಿಟೆಡ್ ಆದ ನಂತರ ಅದರ ಭವಿಷ್ಯ ಹೇಗಿರುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News