ಹಾಸನದಲ್ಲಿಂದು ಬಿಜೆಪಿ ಫೈರ್ ಬ್ರಾಂಡ್ ಹಾಗೂ ರಾಕಿಂಗ್ ಸ್ಟಾರ್ ಯಶ್

ನಟ ಯಶ್ ಬೆಳಿಗ್ಗೆ ಹಾಸನದ ಜೆಡಿಎಸ್ ಅಭ್ಯರ್ಥಿ ಪರ ಹಾಗೂ ಮಧ್ಯಾಹ್ನ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ.

Last Updated : May 3, 2018, 08:38 AM IST
ಹಾಸನದಲ್ಲಿಂದು ಬಿಜೆಪಿ ಫೈರ್ ಬ್ರಾಂಡ್ ಹಾಗೂ ರಾಕಿಂಗ್ ಸ್ಟಾರ್ ಯಶ್ title=

ಹಾಸನ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯಷ್ಟು ದಿನ ಮಾತ್ರ ಬಾಕಿ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಮನವೊಲಿಕೆಯಲ್ಲಿ ತೊಡಗಿವೆ. ಸ್ಟಾರ್ ಪ್ರಚಾರಕರ ಮೂಲಕ ಕೂಡ ಮತಬೇಟೆ ನಡೆಯುತ್ತಿದೆ. ಅಂತೆಯೇ ಹಾಸನದಲ್ಲಿಂದು ಸ್ಟಾರ್ ಪ್ರಚಾರಕರ ಅಬ್ಬರ ಜೋರಾಗಿರಲಿದೆ. ಬಿಜೆಪಿ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಮತಬೇಟೆ ನಡೆಸಲಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ ನಗರದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಪ್ರಕಾಶ್ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ನತ್ರರ ಮಧ್ಯಾಹ್ನ ಸಕಲೇಶಪುರದ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಪರ ಮತಯಾಚನೆ ನಡೆಸಲಿದ್ದಾರೆ.

ಇನ್ನು ಮತಬೇಟೆಗಾಗಿ ಇಂದು ರಾಜ್ಯಕ್ಕೆ ಆಗಮಿಸಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಹಾಸನದಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಮತಬೇಟೆಗೆ ಇಳಿಯಲಿದ್ದಾರೆ.

Trending News