ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಫಲಿತಾಂಶ ತಡೆ ಹಿಡಿದ ಚುನಾವಣಾ ಆಯೋಗ

    

Last Updated : May 15, 2018, 08:36 PM IST
ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಫಲಿತಾಂಶ ತಡೆ ಹಿಡಿದ ಚುನಾವಣಾ ಆಯೋಗ  title=

ಬೆಂಗಳೂರು: ಎವಿಎಂನಲ್ಲಿ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮತಗಳನ್ನು ತೋರಿಸಿದ ಕಾರಣ ಜಗದೀಶ ಶೆಟ್ಟರ್ ಜಯಗಳಿಸಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಫಲಿತಾಂಶಕ್ಕೆ ತಡೆ ನೀಡಲಾಗಿದೆ.

ವಿವಿಪ್ಯಾಟ್ ಮತ ಪರಿಶೀಲಿಸುತ್ತಿದ್ದಾಗ  ಚಲಾವಣೆಯಾದ ಮತಗಳಿಗಿಂತ ಅಧಿಕ ಮತಗಳನ್ನು ಆದರಲ್ಲಿ ತೋರಿಸಿತ್ತು ಈ ಹಿನ್ನಲೆಯಲ್ಲಿ ಈ ವಿಷಯವನ್ನು ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಅಭ್ಯರ್ಥಿಯು ಗಮನಕ್ಕೆ ತಂದಿದ್ದಾರೆ.ಇದಕ್ಕೆ ಚುನಾವಣಾ ಅಧಿಕಾರಿಗಳು ಕೂಡ ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ 104 ಇದ್ದ ಬಿಜೆಪಿ ಸಂಖ್ಯೆ ಈಗ 103 ಕ್ಕೆ ಇಳಿದಿದೆ.  

Trending News