ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಾವು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ. ಎಷ್ಟೇ ಅಡಚಣೆ ಬಂದರೂ ಅದನ್ನು ಮುಂದುವರೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಲೀಗಲ್ ನೋಟಿಸ್!
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚುನಾವಣೆ ಬಂತೆಂದರೆ ಎಲ್ಲರೂ ಸುಳ್ಳು ಆರೋಪ ಮಾಡಲು ಆರಂಭಿಸುತ್ತಾರೆ. ಆದರೆ, ಚುನಾವಣೆ ಇರಲಿ, ಇಲ್ಲದಿರಲಿ ಮತ್ತೊಬ್ಬರ ಮೇಲೆ ವೃಥಾ ಆರೋಪ ಮಾಡುವುದು ಸರಿಯಲ್ಲ. ಅದನ್ನು ಯಾರೂ ಸಹಿಸಿಕೊಳ್ಳುವುದೂ ಇಲ್ಲ. ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸುವ ನಾನು "ಹುಸಿಯ ನುಡಿಯಲು ಬೇಡ" ಎಂಬ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ಹಾಗಾಗಿ ಪ್ರಧಾನಿ ಮೋದಿ ವಿರುದ್ಧದ ಮಾನಹಾನಿ ಮೊಕದ್ದಮೆಯನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.
Election is supposed to be an open season for false allegations. But why should it be? Why should anybody get away with lies, election or no election?
As a follower of Basavanna I will insist on “ಹುಸಿಯ ನುಡಿಯಲು ಬೇಡ”
I will pursue the case.https://t.co/1tHpUJTjus via @htTweets
— Siddaramaiah (@siddaramaiah) May 8, 2018
ಸಿದ್ದರಾಮಯ್ಯ 40 ಲಕ್ಷ ರೂ. ಮೌಲ್ಯದ ವಾಚ್ ಸ್ವೀಕರಿಸಿದ್ದಾರೆ, 10 ಪರ್ಸೆಂಟ್ ಸಿದ್ದರಾಮಯ್ಯ, ಸೀದಾ ರುಪಯ್ಯಾ ಸರ್ಕಾರ ಎಂದೆಲ್ಲಾ ಆರೋಪಿಸಿದ್ದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಬಿಜೆಪಿ ವಿರುದ್ಧ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೀಗಲ್ ನೋಟೀಸ್ ಕಳುಹಿಸಿದ್ದರು.