ಕರ್ನಾಟಕದ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಮೋದಿ- ಶಾ ಮ್ಯಾಜಿಕ್ ಕೆಲಸ ಮಾಡಿದೆ. ಹೌದು, ಬಿಜೆಪಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯತಂತ್ರಗಳಿಗೆ ನಿಜಕ್ಕೂ ಸುಸ್ತಾಗಿ ಹೋಗಿತ್ತು. ಪ್ರತ್ಯೇಕ ಲಿಂಗಾಯತ್ ಧರ್ಮದ ವಿಷಯವಾಗಿರಬಹುದು, ಕನ್ನಡದ ಧ್ವಜದ ಸಂಗತಿಯಾಗಿರಬಹುದು ಈ ಸಂಗತಿಗಳು ರಾಜ್ಯ ಬಿಜೆಪಿ ನಾಯಕರಿಗೆ ನಿಜಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಜೋಡಿ ಸಿದ್ದರಾಮಯ್ಯನವರ ಕಾರ್ಯ ತಂತ್ರಗಳಿಗೆ ಕೌಂಟರ್ ನೀಡಲು ಕೂಡ ಹೊಸ ತಂತ್ರಗಳನ್ನು ರೂಪಿಸಿದರು. ಒಂದು ಕಡೆ ಸಿದ್ದರಾಮಯ್ಯ ಲಿಂಗಾಯತ ರನ್ನು ಪ್ರತ್ಯೇಕ ಧರ್ಮದ ಬೇಡಿಕೆ ಸ್ಪಂಧಿಸುತ್ತಾ ಒಲೈಸುವ ಪ್ರಯತ್ನ ಮಾಡಿದರು. ಇನ್ನೊಂದೆಡೆಗೆ ಕನ್ನಡದ ಅಸ್ಮಿತೆಯ ಲಾಭಿಗೆ ಮನೆ ಹಾಕಿ ಕನ್ನಡ ಧ್ವಜಕ್ಕೆ ಕಾನೂನಾತ್ಮಕ ಮಾನ್ಯತೆ ನಿಡುವ ಪ್ರಯತ್ನ ಮಾಡಿದರು.
ಇತ್ತ ಬಿಜೆಪಿಯು ಪರಿಶಿಷ್ಟ ಪಂಗಡದ ನಾಯಕನಾದ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯನವರ ಅಹಿಂದ ವರ್ಗದ ಮತಗಳಿಗೆ ಖನ್ನ ಹಾಕಿತು. ಇನ್ನೊಂದೆಡೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇರಾನೇರ ಸ್ಪರ್ಧೆಯ ಹಿನ್ನಲೆಯಲ್ಲಿ ಒಕ್ಕಲಿಗರು ಸಿದ್ದರಾಮಯ್ಯನವರ ಸೋಲಿಗೆ ವೇದಿಕೆಯನ್ನು ಸಿದ್ದಗೊಳಿಸಿದರು. ಆ ಮೂಲಕ ಮೇಲ್ಜಾತಿಗಳಾದ ಲಿಂಗಾಯತ್ ಮತ್ತು ಒಕ್ಕಲಿಗರ ಜಾತಿ ಸಮೀಕರಣದ ಮೂಲಕ ಸಿದ್ದರಾಮಯ್ಯನವನ್ನು ಸೋಲಿಸುವ ಲೆಕ್ಕಾಚಾರಕ್ಕೆ ಕನ್ನಡಿ ಹಿಡಿಯಿತು.
ಇನ್ನು ಆಂತರಿಕವಾಗಿ ಕಾಂಗ್ರೆಸ್ ನಲ್ಲಿಯೂ ಕೂಡ ಸಿದ್ದರಾಮಯ್ಯನವರ ಸೋಲಿಗಾಗಿ ಹಲವರು ಹಂಬಲಿಸುತ್ತಿದ್ದರು ಇದನ್ನು ಸರಿಯಾಗಿ ಬಳಸಿಕೊಂಡ ಬಿಜೆಪಿ ಕೂಡ ಕೊನೆಯ ಹಂತದ ವೇಳೆ ಬಳ್ಳಾರಿ ರೆಡ್ಡಿ ಸಹೋದರನ್ನು ಪಕ್ಷಕ್ಕೆ ಬರಮಾಡಿಕೊಂಡಿತು.ಮೋದಿಯವರ ಕೊನೆಯ ಒಂದುವಾರಗಳ 21 ರ್ಯಾಲಿಗಳು ನಿಜಕ್ಕೂ ಯುವ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.ಈ ಎಲ್ಲ ಸಂಗತಿಗಳು ಕೊನೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ನವರು ಜಾರಿಗೆ ತಂದಿದ್ದೆ ಎಲ್ಲ ಅಭಿವೃದ್ದಿ ಕಾರ್ಯಕ್ರಮಗಳು ಗಣನೆಗೆ ಬರದೆ ಕೇವಲ ಜಾತಿ ಲೆಕ್ಕಾಚಾರ ಮತ್ತು ಮೋದಿ ಅಲೆಯು ಸ್ಪಷ್ಟವಾಗಿ ಕಾಂಗ್ರೆಸ್ ವಿರುದ್ದ ಕಾರ್ಯನಿರ್ಹಿಸಿತು.