ಬೆಂಗಳೂರು: ಮೇ 12ರ ಚುನಾವಣೆ 'ರಸ್ತೆಗಳು ಮತ್ತು ಕುಡಿಯುವ ನೀರಿನ ಬಗ್ಗೆ ಅಲ್ಲ, ಆದರೆ ಹಿಂದೂ-ಮುಸ್ಲಿಂ ಬಗ್ಗೆ' ಎಂದು ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಭಾರಿ ವಿವಾದ ಸೃಷ್ಟಿಸಿದ್ದಾರೆ.
ಈಗ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದರಲ್ಲಿ ಅವರು ಈ ಚುನಾವಣೆಯು ರಸ್ತೆ, ನೀರು ಚರಂಡಿಗಳಿಗಾಗಿ ಅಲ್ಲ ಬದಲಾಗಿ ಹಿಂದು ಮತ್ತು ಮುಸ್ಲಿಂಗಳ ನಡುವೆ ಎಂದರು. ಅಲ್ಲದೆ ಇನ್ನು ಮುಂದುವರೆದು ಮಾತನಾಡಿದ ಅವರು "ನಾನು ಸಂಜಯ್ ಪಾಟೀಲ್, ನಾನು ಹಿಂದೂ ,ಇದು ಹಿಂದೂ ರಾಷ್ಟ್ರ ಮತ್ತು ನಾವು ರಾಮ ಮಂದಿರವನ್ನು ನಿರ್ಮಿಸಬೇಕೆಂದು ನಾವು ಬಯಸುತ್ತೇವೆ. ಒಂದು ವೇಳೆ ಲಕ್ಷ್ಮಿ ಹೆಬ್ಬಾಳಕರ್ ಮಂದಿರ ನಿರ್ಮಿಸುತ್ತೇವೆ ಎಂದು ಹೇಳಿದರೆ, ನೀವು ಅವರಿಗೆ ಮತವನ್ನು ಹಾಕಿ. ಆದರೆ ಅವರು ಬಾಬರಿ ಮಸೀದಿ ಕಟ್ಟುವವರು ಎಂದರು.
This election is not about roads, water or other issues.This election is about Hindus vs Muslims, Ram Mandir vs Babri Masjid: BJP MLA Sanjay Patil in Belagavi. #KarnatakaElections2018 (17.4.18) pic.twitter.com/yZmGrJBs2f
— ANI (@ANI) April 19, 2018
ಸಂಜಯ ಪಾಟೀಲ್ ಬೆಳಗಾವಿಯ ಗ್ರಾಮಾಂತರ ಕ್ಷೇತ್ರದ ಶಾಸಕವಾಗಿದ್ದಾರೆ. ಈಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅನಂತಕುಮಾರ್ ರಂತಹ ಬಿಜೆಪಿ ನಾಯಕರ ಸಾಲಿಗೆ ಸೇರಿದ್ದಾರೆ.ಈ ಹಿಂದೆ ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿತ್ತೇವೆ ಎಂದು ಭಾರಿ ವಿವಾಧ ಸೃಷ್ಟಿಸಿದ್ದರು,ಇದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು ಆದರೆ ನಂತರ ಅವರು ತಮ್ಮ ಹೇಳಿಕೆ ವಾಪಾಸ್ಸು ಪಡೆದುಕೊಂಡಿದ್ದರು.
ವ್ಯಕ್ತಪಡಿಸಿದ್ದಾರೆ