ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಕುಮಾರಸ್ವಾಮಿ

    

Last Updated : May 19, 2018, 07:41 PM IST
ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಕುಮಾರಸ್ವಾಮಿ  title=

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಸರ್ಕಾರ ರಚಿಸುವ ಸಲುವಾಗಿ ಇಂದು ಸಂಜೆ  7.30ಕ್ಕೆ  ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ಇಂದು ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಶ್ವಾಸಮತಕ್ಕೆ ಮುಂದಾಗದೆ  ಭಾವಪೂರ್ಣ ಭಾಷಣದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ಈಗ ಸರ್ಕಾರ ರಚನೆ ಮಾಡಲು ಕುಮಾರಸ್ವಾಮಿಯವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 104, ಜೆಡಿಎಸ್ 38, ಮತ್ತು ಕಾಂಗ್ರೆಸ್ 78 ಸ್ಥಾನಗಳನ್ನು ಗೆದ್ದಿತ್ತು ಆದರೆ ಯಾವುದೇ ಪಕ್ಷವು ಬಹುಮತದಿಂದ ಗೆಲ್ಲದಿದ್ದರೂ ಸಹಿತ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು,ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ನಂತರ ಸುಪ್ರಿಂಕೋರ್ಟ್ 24 ಗಂಟೆಗಳ ಒಳಗಾಗಿ ವಿಶ್ವಾಸಮತಸಾಬೀತು ಪಡಿಸಬೇಕೆಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪನವರು  ವಿಶ್ವಾಸಮತಕ್ಕೆ ಒಳಗಾಗದೆ  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 

Trending News